Hydrogen Bus
ವಾಹನ ಕ್ಷೇತ್ರದಲ್ಲಿ ಕ್ಷಿಪ್ರ ಬೆಳವಣಿಗೆ ನಡೆಯುತ್ತಿದೆ. ಕೆಲವೇ ವರ್ಷಗಳ ಹಿಂದೆ ಅಲ್ಲೊಂದು ಇಲ್ಲೊಂದು ಕಾಣ ಸಿಗುತ್ತಿದ್ದ ಬ್ಯಾಟರಿ ಚಾಲಿತ ವಾಹನಗಳು ಈಗ ವರ್ಷಕ್ಕೆ ಲಕ್ಷಗಳ ಲೆಕ್ಕದಲ್ಲಿ ಮಾರಾಟವಾಗುತ್ತಿವೆ. ಬ್ಯಾಟರಿ ಚಾಲಿತ ವಾಹನಗಳ ನಡುವೆ ಅವಕ್ಕಿಂತಲೂ ಪರಿಸರ ಸ್ನೇಹಿ ಎನ್ನಲಾಗುತ್ತಿರುವ ಹೈಡ್ರೋಜನ್ ಚಾಲಿತ ಚಾಹನಗಳ ಚರ್ಚೆಯೂ ಚಾಲ್ತಿಯಲ್ಲಿದೆ. ಇತ್ತೀಚೆಗಷ್ಟೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಹಾಗೂ ಟಾಟಾ ಮೋಟರ್ಸ್ ಜಂಟಿಯಾಗಿ ಭಾರತೀಯ ಸೇನೆಗೆ ಹೈಡ್ರೋಜನ್ ಚಾಲಿತ ಬಸ್ಸನ್ನು ನೀಡಿದೆ.
ಈ ಬಸ್ಸು 37 ಜನರನ್ನು ಹೊತ್ತೊಯ್ಯಬಹುದಾಗಿದ್ದು, ಒಂದು ಬಾರಿ ಇಂಧನ ಟ್ಯಾಂಕ್ ಫುಲ್ ಮಾಡಿದರೆ 250 ರಿಂದ 300 ಕಮೀ ಚಲಿಸಬಲ್ಲದು. ಈ ಬಸ್ಸು ಸಂಪೂರ್ಣವಾಗಿ ಪರಿಸರ ಸ್ನೇಹಿ ಆಗಿದ್ದು, ಗ್ರೀನ್ ಹೈಡ್ರೋಜನ್ ನಿಂದ ಚಲಿಸುತ್ತದೆ. ಹೈಡ್ರೋಜನ್ ಉರಿದು, ವಿದ್ಯುತ್ ಆಗಿ ಪರಿವರ್ತಿತಗೊಂಡು ವಾಹನಕ್ಕೆ ಶಕ್ತಿ ನೀಡುತ್ತದೆ. ಈ ಉರಿಯುವ ಪ್ರಕ್ರಿಯೆಯಲ್ಲಿ ಉತ್ಪಾದನೆಯಾಗುವ ಆವಿ ಪ್ರಕ್ರತಿಯಲ್ಲಿ ಲೀನವಾಗುತ್ತದೆ. ಈ ಆವಿಯಿಂದ ಪರಿಸರಕ್ಕೆ ಯಾವುದೇ ಹಾನಿ ಆಗುವುದಿಲ್ಲ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಈಗಾಗಲೆ ದೆಹಲೊಯ ಎನ್ಆರ್ಸಿಯಲ್ಲಿ ಗ್ರೀಮ್ ಹೈಡ್ರೋಜನ್ ಚಾಲಿತ 15 ಬಸ್ಸುಗಳನ್ನು ಓಡಿಸುತ್ತಿದೆ. ಈಗಾಗಲೇ ಈ ಬಸ್ಸುಗಳು ದೆಹಲಿಯಲ್ಲಿ 3 ಲಕ್ಷ ಕಿ.ಮೀ ಕ್ರಮಿಸಿವೆ. ಪ್ರತಿ ಬಸ್ಸು 20 ಸಾವಿರ ಕಿ.ಮೀಗೂ ಹೆಚ್ಚು ಕ್ರಮಿಸಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಗ್ರೀನ್ ಹೈಡ್ರೋಜನ್ ಬಸ್ಸುಗಳನ್ನಹ ರಸ್ತೆಗೆ ಇಳೊಸುವ ಯೋಜನೆಯನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಹಾಗೂ ಟಾಟಾ ಹೊಂದಿದೆ.
Allu Arjun: ಅಲ್ಲು ಅರ್ಜುನ್- ಸುಕುಮಾರ್ ಮಧ್ಯೆ ಜಗಳ, ನಿಜಾಂಶವೇನು?
ಗ್ರೀನ್ ಹೈಡ್ರೋಜನ್ ವಾಹನಗಳು ಬ್ಯಾಟರಿ ಚಾಲೊತ ವಾಹನಗಳಿಗಿಂತಲೂ ಪರಿಸರ ಸ್ನೇಹಿ ಮತ್ತು ಬಳಕೆದಾರರ ಸ್ನೇಹಿ ಎನ್ನಲಾಗುತ್ತಿದೆ. ಆದರೆ ಈಗ ಈ ವಾಹಗಳು ಪೆಟ್ರೋಲ್ ಹಾಗೂ ಬ್ಯಾಟರಿ ಚಾಲಿತ ವಾಹನಗಳಿಗಿಂತಲೂ ದುಬಾರಿ ಮೇಂಟೇನೆನ್ಸ್ ಅಥವಾ ದುಬಾರಿ ಪ್ರತಿ ಕಿ.ಮೀ ಖರ್ಚು ಹೊಂದಿರುವ ಕಾರಣ ಅಷ್ಟಾಗಿ ಬಳಕೆಯಲ್ಲಿಲ್ಲ. ಆದರೆ ಮುಂದಿನ ದಿನಗಳಲ್ಲಿ ಈ ಗ್ರೀನ್ ಹೈಡ್ರೋಜನ್ ವಾಹನಗಳ ಬಳಕೆ ಹೆಚ್ಚಾಗಬಹುದು. ಕೇಂದ್ರ ಮಂತ್ರಿ ನಿತೀನ್ ಗಡ್ಕರಿ ಗ್ರೀನ್ ಹೈಡ್ರೋಜನ್ ಚಾಲಿತ ಕಾರನ್ನೇ ಬಳಸುತ್ತಾರೆ.