Site icon Samastha News

Businessman: ತನ್ನ ಬಳಿ ಕೆಲಸ ಮಾಡುತ್ತಿದ್ದ 400 ಜನರನ್ನು ಕೋಟ್ಯಧೀಶರನ್ನಾಗಿ ಮಾಡಿದ ಮಾಲೀಕ

Businessman

Businessman

ಭಾರತದ ಮಾಲೀಕರು ಸದಾ ನೌಕರರ ಹಿತಕ್ಕೆ ವಿರುದ್ಧವಾಗಿಯೇ ಚಿಂತಿಸುವವರು. ತಲೆ ತಲಾಂತರಗಳಿಂದಲೂ ಈ ಮನಸ್ಥಿತಿ ಭಾರತದಲ್ಲಿ ಬೆಳೆದು ಬಂದಿದೆ. ನೌಕರರಿಗೆ ಸಾಧ್ಯವಾದಷ್ಟು ಕಡಿಮೆ ಸಂಬಳ ಕೊಡಬೇಕು, ಅವರಿಂದ ಸಾಧ್ಯವಾದಷ್ಟು ಹೆಚ್ಚು ದುಡಿಸಿಕೊಳ್ಳಬೇಕು. ಹೆಚ್ಚಿನ ಸವಲತ್ತು ಕೊಟ್ಟರೆ ಕೆಲಸ ಮಾಡುವುದಿಲ್ಲ ಇತ್ಯಾದಿ ಊಹೆಗಳನ್ನು ಮಾಲೀಕರು ಮಾಡಿಕೊಂಡು ಬಿಟ್ಟಿದ್ದಾರೆ. ಇಂದಿಗೂ ಸಹ ಭಾರತದ ಎಷ್ಟೋ ದೊಡ್ಡ ಕಂಪೆನಿಗಳೇ ತಮ್ಮ ನೌಕರರಿಗೆ ಸರಿಯಾದ ಸಂಬಳ ಕೊಡುತ್ತಿಲ್ಲ. ಆದರೆ ಭಾರತದ್ದೇ ವ್ಯಕ್ತಿಯೊಬ್ಬ ತನ್ನ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಬಹುತೇಕ ಎಲ್ಲರನ್ನೂ ಒಂದೇ ಬಾರಿಗೆ ಕೋಟ್ಯಧಿಪತಿ ಮಾಡಿಬಿಟ್ಟಿದ್ದಾರೆ.

ಭಾರತ ಮೂಲದ ಜ್ಯೋತಿ ಬನ್ಸಲ್ ಎಂಬಾತ ಅಮೆರಿಕದಲ್ಲಿ ಆಪ್ ಡೈನಮಿಕ್ಸ್ ಹೆಸರಿನ ಸಾಫ್ಟ್​ವೇರ್ ಕಂಪೆನಿ ತೆರೆದಿದ್ದರು. ಈ ಸಂಸ್ಥೆಯಲ್ಲಿ ಅಮೆರಿಕ, ಭಾರತ ಇನ್ನಿತರೆ ದೇಶದ ಸುಮಾರು 400 ಮಂದಿ ಉದ್ಯೋಗಿಗಳಿದ್ದರು. ಜ್ಯೋತಿ ಬನ್ಸಲ್ ತನ್ನ ನೌಕರರಿಗೆ ಸಂಬಳದ ಜೊತೆಗೆ ಕಂಪೆನಿಯ ಕೆಲವು ಭಾಗವನ್ನು ಸಹ ನೀಡಿದ್ದರು. ಆಪ್ ಡೈನಮಿಕ್ಸ್ ನ ಭಾರಿ ದೊಡ್ಡ ಭಾಗ ಅವರ ಜ್ಯೋತಿ ಬನ್ಸಲ್ ಬಳಿಯೇ ಇತ್ತಾದರೂ ಕಂಪೆನಿಯ ಷೇರುಗಳನ್ನು ನೌಕರರ ಹೆಸರಿಗೂ ಮಾಡಿದ್ದರು. ಕಂಪೆನಿ ಚೆನ್ನಾಗಿಯೇ ಓಡುತ್ತಿತ್ತು. ಆದರೆ 2017 ರಲ್ಲಿ ಕಂಪೆನಿಯನ್ನು ದೊಡ್ಡ ಸಾಫ್ಟ್​ವೇರ್ ಕಂಪೆನಿಗೆ ಮಾರಾಟ ಮಾಡಲಾಯ್ತು.

Investment: ಹಣ ಎಲ್ಲಿ ಹೂಡಿಕೆ ಮಾಡ್ತೀರಿ? ಬೆಂಗಳೂರಿನ ಕೋಟ್ಯಧೀಶ ಕೊಟ್ಟರು ಉತ್ತರ

ಆಪ್ ಡೈನಮಿಕ್ಸ್ ಸಂಸ್ಥೆಯನ್ನು 2017ರಲ್ಲಿ ಜ್ಯೋತಿ ಬನ್ಸಲ್ 31 ಸಾವಿರ ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದರು. ಈ ಡೀಲ್​ನಿಂದಾಗಿ ಭಾರಿ ದೊಡ್ಡ ಮೊತ್ತ ಜ್ಯೋತಿ ಬನ್ಸಲ್​ಗೆ ದೊರಕಿತು, ಮಾತ್ರವಲ್ಲದೆ ಕಂಪೆನಿಯ 400 ನೌಕರರಿಗೂ ಸಹ ಭಾರಿ ದೊಡ್ಡ ಮೊತ್ತ ದೊರಕಿತು. ಕೆಲವರಿಗೆ 50 ಕೋಟಿ ಸಿಕ್ಕರೆ, ಕೆಲವರಿಗೆ 2 ಕೋಟಿ ಹೀಗೆ ಒಟ್ಟಾರೆಯಾಗಿ ಯಾರಿಗೂ ಸಹ ಒಂದು ಕೋಟಿಗೆ ಕಡಿಮೆ ಮೊತ್ತವಂತೂ ಸಿಕ್ಕಿಲ್ಲ ಎಂದು ಅಮೆರಿಕದ ಮ್ಯಾಗಜೀನ್ ವರದಿ ಮಾಡಿದೆ. ಹೀಗೆ ಜ್ಯೋತಿ ಬನ್ಸಲ್ ತಾವು ಹಣ ಮಾಡುವ ಜೊತೆಗೆ ತಮ್ಮ ನೌಕರರನ್ನೂ ಒಂದೇ ಬಾರಿಗೆ ಶ್ರೀಮಂತರನ್ನಾಗಿಸಿದ್ದಾರೆ.

ಇತ್ತೀಚೆಗಿನ ವರ್ಷಗಳಲ್ಲಿ ನೌಕರರಿಗೆ ಕಂಪೆನಿಯ ಷೇರುಗಳನ್ನು ನೀಡುವ ಕ್ರಮ ಭಾರತದಲ್ಲಿಯೂ ಹೆಚ್ಚಾಗಿದೆ. ಬೋನಸ್ ಆಗಿ ಅಥವಾ ವಾರ್ಷಿಕ ಹೈಕ್ ಆಗಿ ಇಸಾಪ್ಸ್ ಅಥವಾ ಈಕ್ವಿಟಿ, ಸ್ಟಾಕ್ ಆಪ್ಷನ್​ಗಳನ್ನು ನೀಡುವ ಕ್ರಮ ಹೆಚ್ಚಾಗಿದೆ. ಆದರೆ ಕಂಪೆನಿ ಲಾಭದಲ್ಲಿದ್ದರೆ ಅಥವಾ ಲಾಭದ ಕಡೆಗೆ ಹೋಗುತ್ತಿದ್ದರೆ ಇದು ಒಳ್ಳೆಯದೇ ಆದರೂ, ಒಂದೊಮ್ಮೆ ಕಂಪೆನಿಯ ಮಾರ್ಕೆಟ್ ವ್ಯಾಲ್ಯೂ ಅಷ್ಟಾಗಿ ಇಲ್ಲವಾದ ಕಂಪೆನಿಯಿಂದ ಇಸಾಪ್ಸ್ ತೆಗೆದುಕೊಳ್ಳುವುದು ಅಷ್ಟೇನೂ ಲಾಭದಾಯಕವಲ್ಲ ಎನ್ನಬಹುದು. ಅದರ ಬದಲಿಗೆ ಹಣ ಪಡೆದುಕೊಂಡು ಅದೇ ಹಣವನ್ನು ಬೇರೊಂದು ಒಳ್ಳೆಯ ಸಂಸ್ಥೆಯ ಮೇಲೆ ಹೂಡಿಕೆ ಮಾಡಬಹುದು.

Exit mobile version