iPhone 15 Pro
ಜಗತ್ತಿನಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಮೊಬೈಲ್ ಫೋನ್ ಎಂದರೆ ಅದು ಐಫೋನ್. ಆಪಲ್ ಸಂಸ್ಥೆಯ ಐಫೋನನ್ನು ಹೊಂದುವುದು ಒಂದು ಘನತೆಯ ವಿಷಯವಾಗಿ ಮಾರ್ಪಟ್ಟಿದೆ. ಆಮಡ್ರಾಯ್ಡ್ ಫೋನ್ ಗಳಿಗೆ ಹೋಲಿಸಿದರೆ ಆಪಲ್ ಫೋನ್ ಗಳು ಬಹಳ ದುಬಾರಿ. ಆದರೆ ಒಂದು ಐಫೋನ್ ತಯಾರಿಸಲು ಆಪಲ್ ಗೆ ಆಗುತ್ತಿರುವ ಖರ್ಚು ಎಷ್ಟು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುವುದು ಖಂಡಿತ.
ಆಪಲ್ ಸಂಸ್ಥೆ ಕೆಲ ತಿಂಗಳ ಹಿಂದೆ ಐಫೋನ್ 15 ಪ್ರೋ, ಪ್ರೋ ಮ್ಯಾಕ್ಸ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಐಫೋನ್ 15 ಪ್ರೋ ಭಾರತದಲ್ಲಿ 1.35 ಲಕ್ಷದಿಂದ 1.44 ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಆದರೆ ಐಫೋನ್ 15 ಪ್ರೋ ಅನ್ನು ತಯಾರಿಸಲು ಆಗಿರುವ ವೆಚ್ಚ ಕೇವಲ 47 ಸಾವಿರ ರೂಪಾಯಿಗಳು! ಉತ್ಪಾದನಾ ವೆಚ್ಚಕ್ಕಿಂತಲೂ ಮೂರು ಪಟ್ಟು ಹೆಚ್ಚು ಹಣವನ್ನು ಆಪಲ್ ಸಂಸ್ಥೆ ತನ್ನ ಗ್ರಾಹಕರಿಂದ ವಸೂಲಿ ಮಾಡುತ್ತಿದೆ. ವಿಶೇಷವೆಂದರೆ ಐಫೋನ್ ಪ್ರೋ ಮ್ಯಾಕ್ಸ್ ಬೆಲೆ ಭಾರತದಲ್ಲಿ 1.60 ಲಕ್ಷಕ್ಕೂ ಹೆಚ್ಚಿದೆ. ಆದರೆ ಇದರ ಉತ್ಪಾದನಾ ವೆಚ್ಚ ಕೇವಲ 41 ಸಾವಿರ ರೂಪಾಯಿ.
Nokia Magic Max 5G: ಹಿಂದೆ ಮಾಡಿದ ತಪ್ಪು ಸರಿಪಡಿಸಿಕೊಂಡು ಮತ್ತೆ ಬಂತು ನೋಕಿಯಾ, ಈ ಹೊಸ ಫೋನು ನೋಡಿದ್ರಾ
ಉತ್ಪಾದನಾ ವೆಚ್ ಇಷ್ಟು ಕಡಿಮೆ ಇದ್ದರೂ ಐಫೋನ್ ಅನ್ನು ಅಷ್ಟು ದುಬಾರಿ ಬೆಲೆಗೆ ಏಕೆ ಮಾರಾಟ ಮಾಡಲಾಗುತ್ತದೆ ಎಂಬ ಪ್ರಶ್ನೆ ಮೂಡುವುದು ಸಹಜ. ಇದಕ್ಕೆ ಆಪಲ್ ಸಂಸ್ಥೆ ಸಿದ್ಧ ಉತ್ತರವೊಂದನ್ನು ನೀಡುತ್ತದೆ. ಆಪಲ್ ಸಂಸ್ಥೆಯು, ಹೊಸ ತಂತ್ರಜ್ಞಾನದ ಆವಿಷ್ಕಾರ, ಸಂಶೋಧನೆ ಇನ್ನಿತರೆಗಳಲ್ಲಿ ನೂರಾರು ಕೋಟಿ ಖರ್ಚು ಮಾಡುತ್ತದೆಯಂತೆ. ಹಲವು ಪೇಟೆಂಟ್ ಗಳನ್ನು ಪಡೆಯಲು ಸಹ ಕೋಟ್ಯಾಂತರ ಹಣ ಸುರಿಯುತ್ತದೆ. ಹೊಸ ಉತ್ಪನ್ನದ ಜಾಹೀರಾತು, ಉತ್ಪನ್ನಗಳ ಸಾಗಾಟ, ಮಾರಾಟ ಇನ್ನಿತರೆಗಳಿಗೆ ದೊಡ್ಡ ಮೊತ್ತವನ್ನು ಖರ್ಚು ಮಾಡುವ ಕಾರಣ ಉತ್ಪಾದನೆಗಿಂತಲೂ ಹೆಚ್ಚು ಮೊತ್ತಕ್ಕೆ ಐಫೋನ್ ಅನ್ನು ಮಾರಾಟ ಮಾಡಲಾಗುತ್ತದೆಯಂತೆ.
ಆದರೆ ಮಾರುಕಟ್ಟೆ ತಜ್ಞರು ಹೇಳುವುದೇ ಬೇರೆ. ಆಪಲ್ ಪ್ರತಿ ಹೊಸ ಐಫೋನ್ ಹೊರತಂದಾಗಲೂ ಹೊಸ ತಂತ್ರಜ್ಞಾನವನ್ನು ಅದರಲ್ಲಿ ಬಳಸಿಕೊಂಡಿರುವುದಿಲ್ಲ. ಆಪಲ್ ಹಳೆಯ ಚಿಪ್ ಗಳನ್ನೆ ಅಪ್ ಗ್ರೇಡ್ ಮಾಡಿ ಬಳಸುತ್ತಿದೆ. ಕ್ಯಾಮೆರಾ ಸಹ ಹಳೆಯ ತಂತ್ರಜ್ಞಾನದ್ದೆ ಆಗಿದೆ. ಹೀಗಿರುವಾಗ ಆವಿಷ್ಕರಣೆಗೆ ಹಣ ಎಲ್ಲಿ ಖರ್ಚಾಗುತ್ತಿದೆ. ಜಾಹೀರಾತು, ಸಾಗಾಟ, ಸ್ಟೋರ್ ಗಳ ನಿರ್ವಹಣೆ ಇದಕನ್ನೆಲ್ಲ ಸೇರಿಸಿದರೂ ದುಬಾರಿ ಎಂದರೆ ಉತ್ಪಾದನಾ ವೆಚ್ಚದ ಎರಡರಷ್ಟು ಮೊತ್ತಕ್ಕೆ ಐಫೋನ್ ಅನ್ನು ಮಾರಾಟ ಮಾಡಬಹುದು. ಆದರೆ ಆಪಲ್ ಸಂಸ್ಥೆಯು ಐಫೋನ್ ನ ಉತಗಪಾದನಾ ವೆಚ್ಚಕ್ಕಿಂತಲೂ ಮೂರು ಕೆಲವೊಮ್ಮೆ ನಾಲ್ಕು ಪಟ್ಟು ಹೆಚ್ಚಿನ ಹಣಕ್ಕೆ ಮಾರಾಟ ಮಾಡುವ ಮೂಲಕ ಗ್ರಾಹಕರ ಲೂಟಿ ಮಾಡುತ್ತಿದೆ ಎನ್ನುತ್ತಾರೆ.