Site icon Samastha News

IPL: ಕೆಎಲ್ ರಾಹುಲ್ ಗೆ ಐಪಿಎಲ್ ತಂಡದ ಮಾಲೀಕನಿಂದ ಅವಮಾನ, ನಾಯಕತ್ವ ತೊರೆಯುವ ಸಾಧ್ಯತೆ

IPL

IPL

ಕನ್ನಡಿಗ ಕೆಎಲ್‌ ರಾಹುಲ್, ಭಾರತದ ಪ್ರಸ್ತುತ ಅತ್ಯುತ್ತಮ ಬ್ಯಾಟ್ಸ್ ಮನ್ ಗಳಲ್ಲಿ ಒಬ್ಬರು. ಐಪಿಎಲ್ ನಲ್ಲಿ RCB ಸೇರಿದಂತೆ ಇನ್ನೂ ಕೆಲವು ತಂಡಗಳಿಗಾಗಿ ಆಡಿರುವ ರಾಹುಲ್ ಈ ಐಪಿಎಲ್ ನಲ್ಲಿ ಲಖನೌ ಸೂಪರ್ ಜಾಯಿಂಟ್ಸ್ (LSG) ತಂಡದ ನಾಯಕತ್ವ ವಹಿಸಿದ್ದಾರೆ. ತಂಡ ಈ ವರೆಗೆ ಸಾಧಾರಣ ಪ್ರದರ್ಶನವನ್ನಷ್ಟೆ ನೀಡಿದೆ. ನಿನ್ನೆ ನಡೆದ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಹೀನಾಯ ಸೋಲನುಭವಿಸಿದೆ‌. ಇದರ ಬೆನ್ನಲ್ಲೆ ರಾಹುಲ್ ಅವರನ್ನು ಲಖನೌ ತಂಡದ ಮಾಲೀಕ ಅವಮಾನಗೊಳಿಸಿದ್ದಾರೆ.

ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಹುಲ್ ನಾಯಕತ್ವದ ಎಲ್‍ಎಸ್‍ಜಿ ತಂಡ ಹೈದರಾಬಾದ್ ಗೆ 167 ರನ್ ಗಳ ಗುರಿ ನೀಡಿತ್ತು. ಈ ಗುರಿಯನ್ನು ಕೇವಲ 9.2 ಓವರ್ ಗಳಲ್ಲಿ ಒಂದೂ ವಿಕೆಟ್ ಕಳೆದುಕೊಳ್ಳದೆ ಬೆನ್ನಟ್ಟಿತು ಹೈದರಾಬಾದ್ ತಂಡ. ಪಂದ್ಯ ಮುಗಿದ ಬಳಿಕ ಮೈದಾನದಲ್ಲೇ ಎಲ್ಲ ಪ್ರೇಕ್ಷಕರ ಎದುರೇ ರಾಹುಲ್ ವಿರುದ್ಧ ಎಲ್‍ಎಸ್‍ಜಿ ತಂಡದ ಮಾಲೀಕ ಸಂಜೀವ್ ಗೋಯೆಂಕ ವಾಗ್ದಾಳಿ ಮಾಡಿದ್ದಾರೆ. ಮಾಲೀಕ ಗೊಯೆಂಕ ರಾಹುಲ್ ವಿರಿದ್ಧ ಸಿಟ್ಟಿನಿಂದ ಮಾತನಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ರಾಹುಲ್ ಅವರನ್ನು ಎಲ್ಲರೆದುರು ತರಾಟೆಗೆ ತೆಗೆದುಕೊಂಡ ಗೊಯೆಂಕ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ ರಾಹುಲ್ ಅವರನ್ನು RCB ಅಭಿಮಾನಿಗಳು ಬೆಂಬಲಿಸಿದ್ದು, ತಮ್ಮ ತಂಡಕ್ಕೆ ಅವರನ್ನು ಕರೆಸಿಕೊಳ್ಳುವಂತೆ ಕೇಳಿದ್ದಾರೆ.

Royal Enfield: ರಾಯಲ್ ಎನ್​ಫೀಲ್ಡ್ ಗೆ ಠಕ್ಕರ್ ಕೊಡುತ್ತಿದೆ ಈ ಬೈಕ್: ಅದೇ ಬೆಲೆ, ಹೆಚ್ಚು ಪವರ್

ಈ ಮಧ್ಯೆ ಕೆಎಲ್ ರಾಹುಲ್ ಸಹ ಎಲ್‍ಎಸ್‍ಜಿಯ ನಾಯಕತ್ವ ತೊರೆಯುವ ನಿರ್ಣಯ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಎಲ್್ಎಅ್್ಜ ತಂಡದವರೇ ಮಾಹಿತಿ ನೀಡಿರುವುದಾಗಿ ಸುದ್ದಿ ಹರಿದಾಡುತ್ತಿದೆ. ಲಖನೌನ ಮುಂದಿನ ಪಂದ್ಯಕ್ಕೆ ಇನ್ನೂ ನಾಲ್ಕು ದಿನಗಳ ಸಮಯವಿದ್ದು, ರಾಹುಲ್ ನಾಯಕತ್ವ ತ್ಯಜಿಸಿದರೆ ಪೂರನ್ ನಾಯಕನ ಜವಾಬ್ದಾರಿ ಹೊರುವ ಸಾಧ್ಯತೆ ಇದೆ.

Exit mobile version