Bharat Bandh
ಮೀಸಲಾತಿ ಕುರಿತಾಗಿ ಇತ್ತೀಚೆಗೆ ಹೊರಬಿದ್ದ ಸುಪ್ರೀಂ ಕೋರ್ಟ್ನ ಆದೇಶವನ್ನು ವಿರೋಧಿಸಿ ಕೆಲವು ಸಂಘಟನೆಗಳು ಆಗಸ್ಟ್ 21 ರಂದು ಭಾರತ ಬಂದ್ಗೆ ಕರೆ ನೀಡಿವೆ. ಆಗಸ್ಟ್ 1 ರಂದು ಮೀಸಲಾತಿ ಕುರಿತಾಗಿ ತೀರ್ಪೊಂದನ್ನು ನೀಡಿದ್ದ ಸುಪ್ರೀಂ ಕೋರ್ಟ್, ಎಸ್ಸಿ ಹಾಗೂ ಎಸ್ಟಿ ಜಾತಿಗಳನ್ನು ಉಪಜಾತಿಗಳಾಗಿ ವಿಂಗಡಿಸಿ ಯಾರು ಹೆಚ್ಚು ಅರ್ಹರೋ ಅವರಿಗೆ ಹೆಚ್ಚಿನ ಮೀಸಲಾತಿ ನೀಡುವಂತೆ ಆದೇಶ ನೀಡಿದೆ. ಈ ಆದೇಶವನ್ನು ವಿರೋಧಿಸಿ ರಿಸರ್ವೇಶನ್ ಬಚಾವೊ ಸಂಘರ್ಷ ಸಮಿತಿಯು ಆಗಸ್ಟ್ 21 ರಂದು ದೇಶದಾದ್ಯಂತ ಬಂದ್ಗೆ ಕರೆ ನೀಡಿದೆ.
ರಿಸರ್ವೇಶನ್ ಬಚಾವೊ ಸಂಘರ್ಷ ಸಮಿತಿ ನೀಡಿರುವ ಬಂದ್ ಕರೆಗೆ ರಾಜಸ್ಥಾನ ಸೇರಿದಂತೆ ಉತ್ತರದ ಕೆಲವು ದಲಿತ ಸಮಿತಿಗಳು ಬೆಂಬಲ ನೀಡಿದ್ದು, ರಾಜಸ್ಥಾನದಲ್ಲಿ ಸಂಪೂರ್ಣ ಬಂದ್ ಆಚರಣೆಗೆ ಸಂಘಟನೆಗಳು ಮುಂದಾಗಿವೆ. ರಾಜಸ್ಥಾನದಲ್ಲಿ ಎಲ್ಲ ಜಿಲ್ಲೆಗಳಲ್ಲಿಯೂ ಪೊಲೀಸ್ ಬಂದೊಬಸ್ತ್ ಅನ್ನು ರಾಜ್ಯ ಸರ್ಕಾರ ಹೆಚ್ಚಿಸಿದೆ. ಅಲ್ಲದೆ ಎಲ್ಲ ರಾಜ್ಯಗಳಿಗೂ ಭದ್ರತೆ ಬಗ್ಗೆ ಗಮನ ವಹಿಸುವಂತೆ ಸೂಚಿಸಲಾಗಿದ್ದು ಉತ್ತರದ ಕೆಲವು ರಾಜ್ಯಗಳಿಗೆ ವಿಶೇಷ ಎಚ್ಚರಿಕೆಯನ್ನು ಗೃಹ ಸಚಿವಾಲಯ ನೀಡಿದೆ.
Polygraph Test: ಕೊಲ್ಕತ್ತ ವೈದ್ಯೆ ಅತ್ಯಾಚಾರ, ಆರೋಪಿಗಳ ಸುಳ್ಳು ಪತ್ತೆ ಪರೀಕ್ಷೆ
ನಾಳೆ ನಡೆಯಲಿರುವ ಭಾರತ್ ಬಂದ್ ಕರ್ನಾಟಕದ ಮೇಲೆ ಯಾವುದೇ ಪರಿಣಾಮ ಬೀರುತ್ತಿಲ್ಲ. ಕರ್ನಾಟಕದಲ್ಲಿ ಯಾವುದೇ ಪ್ರಮುಖ ಸಂಘಟನೆಗಳು ಈ ಭಾರತ್ ಬಂದ್ಗೆ ಬೆಂಬಲ ವ್ಯಕ್ತಪಡಿಸಿಲ್ಲ. ಹಾಗಾಗಿ ಯಾವುದೇ ಸೇವೆಯಲ್ಲಿ ವ್ಯತ್ಯಯ ಇರುವುದಿಲ್ಲ. ಆದರೆ ಉತ್ತರ ಭಾರತದ ರಾಜಸ್ಥಾನ ಹಾಗೂ ಇನ್ನು ಕೆಲವು ರಾಜ್ಯಗಳಿಗೆ ಸಂಚರಿಸುತ್ತಿರುವವರಿಗೆ ಅಥವಾ ಕರ್ನಾಟಕದ ಗೂಡ್ಸ್ ಇನ್ನಿತರೆ ವಾಹನಗಳು ಅಲ್ಲಿಗೆ ಹೋಗುವಂತಿದ್ದರೆ ತುಸು ಸಮಸ್ಯೆ ಎದುರಿಸಬಹುದು.
ಎಸ್ಸಿ, ಎಸ್ಟಿ ಪಂಗಡಗಳಲ್ಲಿ ಉಪಜಾತಿಗಳನ್ನು ವಿಂಗಡಿಸಿ ಆ ಉಪಜಾತಿಗಳಲ್ಲಿ ಯಾರು ಹೆಚ್ಚು ಶೋಷಿತರೋ, ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರೋ ಗುರುತಿಸಿ ಅವರಿಗೆ ಮೀಸಲಾತಿಯನ್ನು ಹೆಚ್ಚು ನೀಡುವಂತೆ ಹಾಗೂ ಯಾರು ಸಾಮಾಜಿಕವಾಗಿ, ಆರ್ಥಿಕವಾಗಿ ಇತರೆ ಉಪಜಾತಿಗಳಿಗಿಂತಲೂ ಸಬಲರಾಗಿದ್ದಾರೆಯೋ ಅವರಿಗೆ ಕಡಿಮೆ ಮೀಸಲಾತಿ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಈ ತೀರ್ಪನ್ನು ಕೆಲ ದಲಿತ ಸಂಘಟನೆಗಳು ವಿರೋಧಿಸಿವೆ.