Jayanagar
ಬೆಂಗಳೂರಿನ ವ್ಯಕ್ತಿಯೊಬ್ಬನ ಮೇಲೆ ಗಾಂಜಾ ಬೆಳೆದ ಆರೋಪ ಹೊರಿಸಲಾಗಿದೆ. ಪ್ರಕರಣ ನ್ಯಾಯಾಲಯದಲ್ಲಿದ್ದು, ನ್ಯಾಯಾಲಯದಲ್ಲಿ ವ್ಯಕ್ತಿ ಮಂಡಿಸಿದ ವಾದ ಕೇಳಿ ಸ್ವತಃ ನ್ಯಾಯಾಧೀಶರು ಕಂಗಾಲಾಗಿದ್ದಾರೆ. ಇದು ಹೇಗೆ ಸಾಧ್ಯ ಎಂದು ಮರು ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರಿನ ಜಯನಗರದ ವ್ಯಕ್ತಿಯೊಬ್ಬನ ಮನೆಯ ಹಿತ್ತಲಲ್ಲಿ ಬರೋಬ್ಬರಿ 27 ಕೆಜಿ 300 ಗ್ರಾಂ ಗಾಂಜಾ ಪತ್ತೆಯಾಗಿತ್ತು, ಮನೆಯ ಹಿಂದಿನ ಭಾಗದಲ್ಲಿ ಇದ್ದ ಖಾಲಿ ಸ್ಥಳದಲ್ಲಿ ಇಷ್ಟು ಪ್ರಮಾಣದ ಗಾಂಜಾ ಬೆಳೆಯಲಾಗಿತ್ತು. ಪೊಲೀಸರು ಮನೆ ಮೇಲೆ ದಾಳಿ ಮಾಡಿ ಅದನ್ನೆಲ್ಲ ವಶಪಡಿಸಿಕೊಂಡು, ಗಾಂಜಾ ಬೆಳೆದಿದ್ದ ವೃದ್ಧ ವ್ಯಕ್ತಿ ಚಂದ್ರಶೇಖರ್ ಮೇಲೆ ಪ್ರಕರಣ ದಾಖಲಿಸಿದ್ದರು.
ಪ್ರಕರಣ ನ್ಯಾಯಾಲಯದಲ್ಲಿದ್ದು, ನ್ಯಾಯಾಧೀಶರ ಮುಂದೆ ವಾದ ಮಂಡಿಸಿದ ವೃದ್ಧ ಚಂದ್ರಶೇಖರ್, ‘ಗಾಂಜಾ ತನಗೆ ತಾನೆ ಬೆಳೆದುಕೊಂಡಿದೆ. ಅದು ಪರಾಗಸ್ಪರ್ಶದ ಕಾರಣದಿಂದ ಅಲ್ಲಿ ಹುಟ್ಟಿರಬೇಕು. ಆ ಜಾಗವನ್ನು ವರ್ಷಗಳಿಂದಲೂ ನಾನು ಬಳಸಿಯೇ ಇಲ್ಲ’ ಎಂದಿದ್ದಾರೆ. ವೃದ್ಧನ ವಾದ ಕೇಳಿ ಕಂಗಾಲಾದ ನ್ಯಾಯಾಧೀಶರು, ನೀವು ವಾಸಿಸುತ್ತಿರುವುದು ಜಯನಗರದಲ್ಲಿ ಅಮೆಜಾನ್ ಕಾಡಿನಲ್ಲಿ ಅಲ್ಲ, ಜಯನಗರದಂಥಹಾ ಕಾಂಕ್ರಿಟ್ ಕಾಡಿನಲ್ಲಿ ಪರಾಗಸ್ಪರ್ಶ ಹೇಗೆ ಆಗಲು ಸಾಧ್ಯ? ಆದರೂ ಸಹ ಇಷ್ಟು ದೊಡ್ಡ ಪ್ರಮಾಣದಲ್ಲಿ ಗಾಂಜಾ ಗಿಡ ಪತ್ತೆ ಆಗಲು ಹೇಗೆ ಸಾಧ್ಯ? ಎಂದು ಪ್ರಶ್ನೆ ಮಾಡಿದ್ದಾರೆ.
ಹೆಚ್ಚಿನ ವಿಚಾರಣೆ ಮಾಡಿದಾಗ ಆ ವೃದ್ಧ, ಆ ಗಾಂಜಾ ಅನ್ನು ನಾನು ಸೇವನೆ ಮಾಡಿಲ್ಲ ಅಥವಾ ಮಾರಾಟ ಸಹ ಮಾಡಿಲ್ಲ’ ಎಂದಿದ್ದಾರೆ. ಹಾಗಿದ್ದರೆ ಗಾಂಜಾ ಬೆಳೆದಿದ್ದು ಏಕೆ? ಪ್ಯಾಷನ್’ಗಾಗಿ ಬೆಳೆದರಾ ಅಥವಾ ಥ್ರಿಲ್’ಗಾಗಿ ಬೆಳೆದಿದ್ದಾ’ ಎಂದು ನ್ಯಾಯಾಧೀಶರು ಪ್ರಶ್ನೆ ಮಾಡಿದ್ದರೆ. ಅದಕ್ಕೆ ವೃದ್ಧನ ಬಳಿ ಉತ್ತರ ಇಲ್ಲ. ‘ನೀವು ಅದನ್ನು ಮಾರಿಲ್ಲ, ಸೇವಿಸಿಲ್ಲ ಎಂದಾದರೆ ಸರಿ. ನಿಮ್ಮದು ಏನು ತಪ್ಪಿಲ್ಲ ಎಂದು ಬಿಟ್ಟುಬಿಡೋಣ ಆದರೆ ಅಷ್ಟೊಂದು ಗಾಂಜಾ ಅಲ್ಲಿ ಬೆಳೆದಿದ್ದು ಹೇಗೆಂದು ತಿಳಿಯಬೇಕಿದೆ. ವಿವರಣೆ ನೀಡಲು ಇನ್ನಷ್ಟು ಸಮಯ ತೆಗೆದುಕೊಳ್ಳಿ’ ಎಂದು ಹೇಳಿ ಪ್ರಕರಣವನ್ನು ಡಿಸೆಂಬರ್ 04 ಕ್ಕೆ ನ್ಯಾಯಾಧೀಶರು ಮುಂದೂಡಿದ್ದಾರೆ.
Gautam Adani: ಅಮೆರಿಕದಲ್ಲಿ ಗೌತಮ್ ಅದಾನಿ ವಿರುದ್ಧ ಗಂಭೀರ ಆರೋಪ, ಬಂಧನ ವಾರೆಂಟ್
ಕೆಲವು ದಿನಗಳ ಹಿಂದೆಯಷ್ಟೆ ಬೆಂಗಳೂರಿನ ದಂಪತಿಯೊಬ್ಬರು ರೀಲ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ವಿಡೊಯೋನಲ್ಲಿ, ಅವರ ಮನೆಯ ಅಂಗಳದಲ್ಲಿ ಗಾಂಜಾ ಗಿಡ ಇರುವುದು ಕಂಡು ಬಂದಿತ್ತು. ಕೂಡಲೇ ಪೊಲೀಸರು ದಂಪತಿಯ ಮನೆಗೆ ಭೇಟಿ ನೀಡಿ, 57 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದರು. ದಂಪತಿ ಸಹ ತಾವು ಗಾಂಜಾ ಬೆಳೆದಿದ್ದಾಗಿ ತಪ್ಪೊಪ್ಪಿಕೊಂಡರು. ಅದಾದ ಬಳಿಕಈಗ ವೃದ್ಧನ ಪ್ರಕರಣ ಬೆಳಕಿಗೆ ಬಂದಿದೆ.