Women Power: ಮಹಿಳಾ ಅಧಿಕಾರಿಯ ಸಾಹಸ, ಜಯನಗರದಲ್ಲಿ ಕೋಟ್ಯಂತರ ಹಣ ವಶಕ್ಕೆ, ಆರೋಪಿಗಳು ಪರಾರಿ

0
195
Women Power

Women Power

ಏಪ್ರಿಲ್ 13 ರ ಬೆಳಿಗ್ಗೆ ಬೆಂಗಳೂರಿನ ಜಯನಗರದಲ್ಲಿ ಹಾಡ ಹಗಲೆ ಕಾರು ಹಾಗೂ ಬೈಕ್​ಗಳಲ್ಲಿ ಸಾಗಾಟ ಮಾಡುತ್ತಿದ್ದ ಕೋಟ್ಯಂತರ ರೂಪಾಯಿ ನಗದು ಹಣವನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಜಯನಗರದ 4ನೇ ಬ್ಲಾಕ್​ನಲ್ಲಿ ಸಾಗಿಸಲಾಗುತ್ತಿದ್ದ ಹಣವನ್ನು ಚುನಾವಣಾ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಅಧಿಕಾರಿಯೊಬ್ಬರು, ಒಬ್ಬರೇ ಹೋಗಿ ವಶಕ್ಕೆ ಪಡೆದಿದ್ದಾರೆ. ಅಧಿಕಾರಿಯ ಖಡಕ್ ಎಂಟ್ರಿಗೆ ಹೆದರಿ ಆರೋಪಿಗಳು ವಾಹನಗಳನ್ನು ಸಹ ಬಿಟ್ಟು ಪರಾರಿಯಾಗಿದ್ದಾರೆ.

ಕೋಟ್ಯಂತರ ರೂಪಾಯಿ ಹಣವನ್ನು ವೋಲ್ಕ್ಸ್ ವ್ಯಾಗನ್ ಪೋಲೊ ಕಾರಿಗೆ ಹಣ ತುಂಬುವಾಗ ಖಚಿತ ಮಾಹಿತಿ ಮೇರೆಗೆ ಚುನಾವಣಾ ಅಧಿಕಾರಿಗಳು, ಜಯನಗರದ ನೋಡಲ್ ಅಧಿಕಾರಿ ನಿಖಿತಾ ಅವರಿಗೆ ವಿಷಯ ಮುಟ್ಟಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಹೋದ ನಿಖಿತಾ ಒಬ್ಬರೇ ಇದ್ದರೂ ಸಹ ಹಿಂಜರಿಯದೆ ದಾಳಿ ಮಾಡಿ ಹಣವನ್ನು ವಶಕ್ಕೆ ಪಡೆದಿದ್ದಾರೆ. ಕೃತ್ಯದಲ್ಲಿ ತೊಡಗಿದ್ದ ಕೆಲವರು ಈ ವೇಳೆ ತಪ್ಪಿಸಿಕೊಂಡಿದ್ದಾರೆ. ಒಂದು ಬ್ಯಾಗ್​ ಹಣ ಒಂದು ವೋಲ್ಕ್ಸ್ ವ್ಯಾಗನ್ ಪೋಲೊ ಕಾರು, ಒಂದು ಬೈಕ್, ಒಂದು ಹೊಸ ಬೆಂಜ್ ಕಾರು ಬಿಟ್ಟು ಆರೋಪಿಗಳು ಓಡಿ ಹೋಗಿದ್ದಾರೆ.

ಚುನಾವಣಾ ಅಧಿಕಾರಿ ಮೌನೀಶ ಮೌದ್ಗಿಲ್ ಘಟನೆ ಬಗ್ಗೆ ಮಾತನಾಡಿ, ‘ಜಯನಗರದ ನಾಲ್ಕನೇ ಬ್ಲಾಕ್​ನಲ್ಲಿ ಕೆಲವು ಕಾರುಗಳಲ್ಲಿ ಕೋಟ್ಯಂತರ ರೂಪಾಯಿ ಹಣ ಸಾಗಾಟ ಮಾಡಲಾಗುತ್ತಿದೆ ಎಂದು ಇಂದು (ಏಪ್ರಿಲ್ 13) ಬೆಳಿಗ್ಗೆ ಕರೆ ಬಂದಿತು. ಕೂಡಲೇ ಸ್ಥಳೀಯ ನೂಡಲ್ ಅಧಿಕಾರಿ ಆಗಿರುವ ನಿಖಿತ ಅವರಿಗೆ ವಿಷಯ ಮುಟ್ಟಿಸಿ ಸ್ಥಳಕ್ಕೆ ಹೋಗುವಂತೆ ಸೂಚಿಸಲಾಯ್ತು. ಕೇವಲ ಮೂರು ನಿಮಿಷದಲ್ಲಿ ಸ್ಥಳಕ್ಕೆ ನಿಖಿತಾ ಹೋದರು. ಅಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರಿದ್ದರೂ ಸಹ ಅವರು ದಿಟ್ಟತನದಿಂದ ಹೋಗಿ ಅವರನ್ನು ಎದುರುಗೊಂಡರು. ಕೂಡಲೇ ಎಲ್ಲರೂ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಪ್ರಕರಣದ ಹೀರೋ ನಿಖಿತಾ. ಅವರು ಒಬ್ಬಂಟಿಯಾಗಿದ್ದರೂ ಸಹ ಭಯಪಡದೆ ಆರೋಪಿಗಳನ್ನು ಎದುರಿಸಿ ಹಣ ಜಪ್ತಿ ಮಾಡಿದ್ದಾರೆ’ ಎಂದಿದ್ದಾರೆ.

ಕರ್ನಾಟಕಕ್ಕೆ ಬರಲಿರುವ ಮೋದಿಗೆ ಸಚಿವ ಕೃಷ್ಣಭೈರೇಗೌಡ ಪ್ರಶ್ನೆಗಳು

ಇದೀಗ ವಶಕ್ಕೆ ಪಡೆಯಲಾಗಿರುವ ಹೊಸ ಬೆಂಜ್ ಕಾರು ನಿನ್ನೆ (ಏಪ್ರಿಲ್ 12) ಸೋಮಶೇಖರ್ ಎಂಬುವರ ಹೆಸರಿನಲ್ಲಿ ನೊಂದಾವಣಿ ಆಗಿದೆ. ವಶಪಡಿಸಿಕೊಳ್ಳಲಾಗಿರುವ ಬೈಕ್ ಧನಂಜಯ್ ಎಂಬುವರ ಹೆಸರಿನಲ್ಲಿದೆ. ವೋಲ್ಕ್ಸ್ ವ್ಯಾಗನ್ ಕಾರು ಯಾರದೆಂಬ ಮಾಹಿತಿ ಇನ್ನಷ್ಟೆ ಲಭ್ಯವಾಗಬೇಕಿದೆ. ವಶಪಡಿಸಿಕೊಳ್ಳಲಾಗಿರುವ ಹಣ, ವಾಹನಗಳನ್ನು ಜಯನಗರ ಪೊಲೀಸರಿಗೆ ಒಪ್ಪಿಸಲಾಗಿದ್ದು, ಚುನಾವಣಾ ಅಧಿಕಾರಿಗಳು ಪೊಲೀಸ್ ದೂರು ನೀಡಿದ್ದಾರೆ. ಪ್ರಕರಣದ ತನಿಖೆ ನಡೆದು ಹಣ ಯಾರಿಗೆ ಸೇರಿದ್ದೆಂಬುದು ಬಹಿರಂಗವಾಗಬೇಕಿದೆ.

ಘಟನೆ ಬಗ್ಗೆ ಮಾತನಾಡಿರುವ ಬೆಂಗಳೂರು ದಕ್ಷಿಣ ಕ್ಷೇತ್ರ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ, ಕಾಂಗ್ರೆಸ್​ನವರು ಬೈಕು ಹಾಗೂ ಕಾರುಗಳಲ್ಲಿ ಹಣವನ್ನು ಸಾಗಿಸುತ್ತಿರುವುದಾಗಿ ಇಂದು (ಏಪ್ರಿಲ್ 13) ನಮಗೆ ಕರೆ ಬಂತು, ನಾವು ಕೂಡಲೇ ಮಾಹಿತಿಯನ್ನು ಪೊಲೀಸರಿಗೆ ತಿಳಿಸಿದೆವು. ಅವರು ಶೀಘ್ರವಾಗಿ ಸ್ಪಂದಿಸಿ ಹಣ ವಶಪಡಿಸಿಕೊಂಡಿದ್ದಾರೆ. ಕಾಂಗ್ರೆಸ್​ನವರು ಯಾರಿಂದ ಹಣವನ್ನು ವಸೂಲಿ ಮಾಡಿಕೊಂಡಿದ್ದರೋ ಅವರೇ ಕರೆ ಮಾಡಿ ತಿಳಿಸಿದ್ದಾರೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

LEAVE A REPLY

Please enter your comment!
Please enter your name here