Karnataka film chamber of commerce: ರಾಜ್ಯ ಸರ್ಕಾರದ ವಿರುದ್ಧ ಚಿತ್ರರಂಗ ಅಸಮಾಧಾನ

0
119
karnataka film chamber of commerce

Karnataka film chamber of commerce

ಚಿತ್ರರಂಗ ಹಾಗೂ ರಾಜಕೀಯ ಪರಸ್ಪರ ಕೈ-ಕೈ ಹಿಡಿದುಕೊಂಡೆ ಸಾಗುತ್ತಿದೆ. ಯಾವುದೇ ಪಕ್ಷದ ಸರ್ಕಾರ ಬಂದರೂ ಸಹ ಚಿತ್ರರಂಗವು ಆ ಸರ್ಕಾರದೊಡನೆ ಉತ್ತಮ ಸಂಬಂಧವನ್ನೇ ಉಳಿಸಿಕೊಂಡು ಸಾಗುತ್ತದೆ. ಆದರೆ ಪ್ರಸ್ತುತ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಚಿತ್ರರಂಗ ಅಸಮಾಧಾನ ವ್ಯಕ್ತಪಡಿಸಿದೆ. ಅದಕ್ಕೆ‌ ಮುಖ್ಯ ಕಾರಣ ಇತ್ತೀಚೆಗೆ ರಾಜ್ಯ ಸರ್ಕಾರವು ಸಿನಿಮಾ ಟಿಕೆಟ್ ಮೇಲೆ ವಿಧಿಸಲಾಗಿರುವ ಸೆಸ್.

ಇತ್ತೀಚೆಗೆ ಮುಕ್ತಾಯವಾದ ವಿಧಾನಸಭೆ ಅಧಿವೇಶನದಲ್ಲಿ ಹಲವು ಮಸೂದೆಗಳು ಮಂಡನೆಯಾದವು. ಅದರಲ್ಲಿ ಒಂದು ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಮಸೂದೆ 2024. ಈ ಮಸೂದೆಯ ಪ್ರಕಾರ ಸಿನಿಮಾ ಟಿಕೆಟ್​ಗಳ ಮೇಲೆ ಸೆಸ್ ವಿಧಿಸಿದ್ದು, ಈ ಸೆಸ್​ನಿಂದ ಒಟ್ಟಾಗುವ ಹಣವನ್ನು ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕ್ಷೇಮಾಭಿವೃದ್ಧಿಗೆ ಬಳಸಲಿದೆ.

ಆದರೆ ಈ ಮಸೂದೆಗೆ ಕನ್ನಡ ಚಿತ್ರರಂಗದ ಪ್ರಾತಿನಿಧಿಕ ಸಂಸ್ಥೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವಿರೋಧ ವ್ಯಕ್ತಪಡಿಸಿದೆ. ಟಿಕೆಟ್​ ಬೆಲೆಯ ಮೇಲೆ ಹೆಚ್ಚುವರಿ ಸೆಸ್ ವಿಧಿಸಲಾಗುತ್ತಿರುವನ್ನು ವಿರೋಧಿಸಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇಂದು ಈ ಬಗ್ಗೆ ಸಭೆ ನಡೆಸಿದೆ. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಂಡಳಿ ಅಧ್ಯಕ್ಷ, ಎನ್.ಎಮ್ ಸುರೇಶ್, ‘ತೆರಿಗೆ ಹೆಚ್ಚಳದ ಬಗ್ಗೆ ಈ ಮುಂಚೇನೆ ವಿರೋಧ ವ್ಯಕ್ತಪಡಿಸಿದ್ದೆವು, ಈಗಾಗಲೇ ‌ನಿರ್ಮಾಪಕರು ಸಂಕಷ್ಟದಲ್ಲಿದ್ದಾರೆ, ಈಗ ಸೆಸ್ ವಿಧಿಸಿ ಟಿಕೆಟ್ ಬೆಲೆಗಳನ್ನು ಇನ್ನಷ್ಟು ಹೆಚ್ಚಿಸಿರುವ ಕಾರಣ ಸಿಎಂ ಅವರನ್ನು ಭೇಟಿ ಮಾಡಿದೆವು. ಸಚಿವ ಸಂತೋಷ್ ಲಾಡ್ ಬಳಿಯೂ ಈ ಬಗ್ಗೆ ಮಾತನಾಡಿ ಸಿನಿಮಾರಂಗ ದಿನೇ ದಿನೇ ಮುಳುಗುತ್ತಿದೆ ಅಂತ ಮನವರಿಕೆ ಮಾಡಿದ್ದೆವು. ಸಂತೋಷ್ ಲಾಡ್ ಅವರು ನಮ್ಮ ಮನವಿಗೆ ಸಕಾರತ್ಮಕವಾಗಿ ಸ್ಪಂದಿಸಿದ್ದಾರೆ ಸಿಎಂಗೆ ಹೇಳ್ತಿನಿ ಅಂತ ಹೇಳಿದ್ದಾರೆ’ ಎಂದಿದ್ದಾರೆ.

Darshan Thoogudeepa: ಕೊಲ್ಲೂರಿನಲ್ಲಿ ದರ್ಶನ್ ಗಾಗಿ ಪತ್ನಿಯಿಂದ ಯಾಗ, ಏನಿದರ ಮಹತ್ವ, ಕೊಲ್ಲೂರಿನ ಮಹಿಮೆ ಏನು?

‘ತೆರಿಗೆ ಕಡಿಮೆ ಮಾಡುವಂತೆ ಸಿಎಂಗೆ ಮಾಡುವಂತೆ ಮನವಿ ಮಾಡಿದ್ದೀವಿ, ಕನ್ನಡ ಸಿನಿಮಾಗಳಿಗೆ ಸೆಸ್ ಹಾಕಬೇಡಿ ಅಂತ ಗಮನಕ್ಕೆ ತಂದಿದ್ದೇವೆ. ಕನ್ನಡ ಸಿನಿಮಾಗಳ ಬದಲಿಗೆ ಪರಭಾಷೆಯ ಸಿನಿಮಾಗಳಿಗೆ ಸೆಸ್ ವಿಧಿಸಲಿ ಎಂಬುದು ನಮ್ಮ ಸಲಹೆ. ನಿರ್ಮಾಪಕರಿಗೆ ಹೊರೆ ಹಾಕಿ ಕಾರ್ಮಿಕರ ಕಲ್ಯಾಣ ನಿಧಿಗೆ ಕೊಡುವ ಯೋಜನೆ ಇದು. ಕಾರ್ಮಿಕರಿಗೆ ಕೊಡಲಿ ಅದರೆ ನಿರ್ಮಾಪಕರಿಗೆ ತೆರಿಗೆ ಹೆಚ್ಚಳ ಬೇಡ’ ಎಂದು ಅವರು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here