Tirupati Laddu: ಕರ್ನಾಟಕದ 34 ಸಾವಿರ ದೇವಾಲಯಗಳಲ್ಲಿ ನಂದಿನಿ ತುಪ್ಪವನ್ನೇ ಬಳಸಲು ಆದೇಶ

0
150
Tirupati Laddu

Tirupati Laddu

ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು, ಮೀನನ ಎಣ್ಣೆಗಳು ಪತ್ತೆಯಾಗಿರುವುದು ದೇಶದಾದ್ಯಂತ ಹಿಂದು ಭಕ್ತರಲ್ಲಿ ಆತಂಕ ಸೃಷ್ಟಿಮಾಡಿದೆ. ತಿರುಪತಿ ಲಡ್ಡುವಿಗೆ ದೇಶದಾದ್ಯಂತ ಧಾರ್ಮಿಕ ಗೌರವ ಇದೆ. ತಿರುಪತಿ ಲಡ್ಡುವನ್ನು ವೆಂಕಟೇಶ್ವರನೇ ನೀಡಿದ ಪ್ರಸಾದ ಎನ್ನಲಾಗುತ್ತದೆ. ಆದರೆ ಈಗ ಅದರಲ್ಲಿ ದನದ ಕೊಬ್ಬು ಪತ್ತೆಯಾಗಿರುವುದು ದೇಶದಾದ್ಯಂತ ಹಿಂದೂಗಳನ್ನು ಕೆರಳಿಸಿದೆ. ಮಾತ್ರವಲ್ಲದೆ ಇತರೆ ರಾಜ್ಯಗಳ ದೇವಾಲಯಗಳಿಗೂ ಆತಂಕ ತಂದಿದ್ದು, ಈಗ ಎಲ್ಲ ದೇವಾಲಯಗಳ ಪ್ರಸಾದಗಳನ್ನೂ ಪರಿಶೀಲನೆಗೆ ಒಳಪಡಿಸಬೇಕು ಎಂಬ ಒತ್ತಾಯವೂ ಕೇಳಿ ಬರುತ್ತಿದೆ. ಇದರ ಬೆನ್ನಲ್ಲೆ ಕರ್ನಾಟಕ ಸರ್ಕಾರ ಮಹತ್ವದ ಆದೇಶ ಹೊರಡಿಸಿದ್ದು, ಕರ್ನಾಟಕದ 34 ಸಾವಿರ ದೇವಾಲಯಗಳಲ್ಲಿ ನಂದಿನಿ ತುಪ್ಪವನ್ನೇ ಬಳಸುವಂತೆ ಆದೇಶ ಹೊರಡಿಸಿದೆ.

ಮುಜರಾಯಿ ಇಲಾಖೆ ಅಡಿಯಲ್ಲಿ ಬರುವ 34 ಸಾವಿರ ದೇವಾಲಯಗಳಲ್ಲಿ ಪ್ರಸಾದ ತಯಾರಿಕೆಗೆ ನಂದಿನಿ ತುಪ್ಪವನ್ನೇ ಬಳಸುವಂತೆ ಕರ್ನಾಟಕ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪ್ರಸಾದ ತಯಾರಿಕೆ ಮಾತ್ರವೇ ಅಲ್ಲದೆ ದೀಪಗಳಿಗೆ, ದಸೋಹ ಭವನಗಳಲ್ಲಿಯೂ ಸಹ ನಂದಿನಿ ತುಪ್ಪವನ್ನೇ ಬಳಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕ ಮಿಲ್ಕ್ ಫೆಡರೇಷನ್ (ಕೆಎಂಎಫ್) ನಂದಿನಿ ತುಪ್ಪವನ್ನು ತಯಾರಿಸುತ್ತಿದ್ದು, ಈ ತುಪ್ಪ ತನ್ನ ಉತ್ತಮ ಗುಣಮಟ್ಟಕ್ಕೆ ಹೆಸರುವಾಸಿ. ಹಾಗಾಗಿ ಇದೇ ತುಪ್ಪವನ್ನೇ ಬಳಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಅಲ್ಲದೆ ಪ್ರಸಾದದ ಗುಣಮಟ್ಟ ಕೆಡದಂತೆ ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿ ದೇವಾಲಯಗಳದ್ದೇ ಎಂದಿದೆ ಸರ್ಕಾರ.

ತಿರುಪತಿ ಲಡ್ಡು ಮಾಡಲು ಬಳಸಿದ ತುಪ್ಪದಲ್ಲಿ ಮೀನಿನ ಎಣ್ಣೆ, ದನದ ಕೊಬ್ಬು, ಹಂದಿ ಕೊಬ್ಬು ಇರುವುದು ಲ್ಯಾಬ್ ರಿಪೋರ್ಟ್​ನಿಂದ ಪತ್ತೆ ಆಗಿದೆ. ಜುಲೈನಲ್ಲಿ ತೆಗೆದುಕೊಂಡಿದ್ದ ತುಪ್ಪದ ಮಾದರಿಯನ್ನು ಗುಜರಾತ್​ನ ಸರ್ಕಾರಿ ಲ್ಯಾಬ್​ನಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅಸಲಿಗೆ ತಿರುಪತಿಗೆ ತಮಿಳುನಾಡಿನ ದಿಂಡಿಗಲ್​ ಜಿಲ್ಲೆಯ ಫುಡ್ ಸಂಸ್ಥೆಯೊಂದರಿಂದ ಜೂನ್ ಹಾಗೂ ಜುಲೈ ತಿಂಗಳಲ್ಲಿ ತುಪ್ಪ ತರಿಸಿಕೊಳ್ಳಲಾಗಿತ್ತು. ಆದರೆ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಮಿಳುನಾಡಿನ ಎಆರ್ ಡೈರಿ ಫುಡ್ ಸಂಸ್ಥೆ, ನಮ್ಮ ಕಂಪೆನಿಯ ತುಪ್ಪ ಹಲವು ಮೆಡಿಕಲ್, ಲ್ಯಾಬ್ ಟೆಸ್ಟ್​ಗಳಲ್ಲಿ ಪಾಸಾಗಿದೆ. ಅದಾದ ಬಳಿಕವಷ್ಟೆ ನಮ್ಮ ತುಪ್ಪವನ್ನು ತಿರುಪತಿಗೆ ಕಳಿಸಲಾಗಿದೆ. 0.01 ಪ್ರತಿಶತ ಮಾತ್ರವೇ ನಮ್ಮಲ್ಲಿ ಬೆರಕೆ ಪತ್ತೆಯಾಗಿದೆ ಎಂದಿದೆ ಸಂಸ್ಥೆ.

Plastic Bottle: ಇನ್ನು ಮುಂದೆ ಪೆಟ್ ವಾಟರ್ ಬಾಟಲ್ ಬಳಕೆ ಇಲ್ಲ: ಕೇಂದ್ರ ಸಚಿವ

ಈ ಲಡ್ಡು ವಿಷಯ ಇದೀಗ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ತುಪ್ಪವನ್ನು ಪರೀಕ್ಷೆ ಮಾಡಿದ ಗುಜರಾತ್​ನ ಲ್ಯಾಬ್​ ಬಗ್ಗೆಯೂ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಪ್ರತಿ ದೇವಸ್ಥಾನದಲ್ಲಿಯೂ ಆಹಾರವನ್ನು ಪರೀಕ್ಷಿಸುವ ಯಂತ್ರಗಳಿರಬೇಕು ಎಂದಿದ್ದಾರೆ. ಇದು ಚಂದ್ರಬಾಬು ನಾಯ್ಡು ತಪ್ಪಾ ಅಥವಾ ಹಿಂದಿನ ಸರ್ಕಾರದ ಜಗನ್ ತಪ್ಪಾ ಎಂಬ ಚರ್ಚೆಗಳು ಜಾರಿಯಲ್ಲಿದೆ.

LEAVE A REPLY

Please enter your comment!
Please enter your name here