Karnataka Government
ಮೈಸೂರು ಒಡೆಯರ ಕುಟುಂಬ ಹಾಗೂ ಕರ್ನಾಟಕ ಸರ್ಕಾರದ ನಡುವಿನ ಕಿತ್ತಾಟದಲ್ಲಿ ರಾಜರ ಮನೆತನಕ್ಕೆ ಗೆಲುವಾಗಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಇನ್ನು ಆರು ವಾರದಲ್ಲಿ ಕರ್ನಾಟಕ ಸರ್ಕಾರವು ರಾಜಮನೆತನಕ್ಕೆ ಬರೋಬ್ಬರಿ 3000 ಕೋಟಿ ರೂಪಾಯಿ ಹಣ ಪರಿಹಾರವಾಗಿ ಕೊಡಬೇಕಿದೆ!
ಅಭಿವೃದ್ಧಿ ಕಾರ್ಯಗಳಿಗಾಗಿ ಕರ್ನಾಟಕ ಸರ್ಕಾರವು ಮೈಸೂರು ರಾಜಮನೆತನಕ್ಕೆ ಸೇರಿದ ಬೆಂಗಳೂರು ಅರಮನೆ ಮೈದಾನದ ಬಳಿಯ 15 ಎಕರೆ 9 ಗುಂಟೆ ಜಾಗವನ್ನು ಅತ್ಯಂತ ಕಡಿಮೆ ಹಣಕ್ಕೆ ವಶಪಡಿಸಿಕೊಂಡಿತ್ತು. ಇದರ ವಿರುದ್ಧ ರಾಜ ವಂಶಸ್ಥರು ನ್ಯಾಯಲಯದ ಮೆಟ್ಟಿಲು ಏರಿದ್ದರು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರ ವಶಪಡಿಸಿಕೊಂಡಿರುವ ಪ್ರತಿ ಎಕರೆಗೆ 194 ಕೋಟಿ ಮೌಲ್ಯದಂತೆ 3000 ಕೋಟಿ ರೂಪಾಯಿ ಹಣವನ್ನು ಇನ್ನು ಆರು ವಾರಗಳಲ್ಲಿ ನೀಡಬೇಕಿದೆ. ಬಿಬಿಎಂಪಿಯು, ವಶಪಡಿಸಿಕೊಂಡಿರುವ ಜಾಗದ ಮೌಲ್ಯವನ್ನು ಪ್ರತಿ ಚದರ ಅಡಿಗೆ 2.83 ಲಕ್ಷ ರೂಪಾಯಿಗೆ ಹೆಚ್ಚಿಸಬೇಕಿದೆ.
ಇದೇ ವರ್ಷದ ಏಪ್ರಿಲ್ ನಲ್ಲಿ ಜಮೀನು ಜಯಮಹಲ್ ಅರಮನೆ ಬಳಿಯ 15.9 ಎಕರೆ ಜಾಗದ ಒತ್ತುವರಿಗೆ ಮುಂದಾಗಿದ್ದ ರಾಜ್ಯ ಸರ್ಕಾರ ಪ್ರತಿ ಚದರ ಅಡಿಗೆ ಕೇವಲ 126 ರೂಪಾಯಿ ಮೌಲ್ಯ ನಿಗದಿಪಡಿಸಿತ್ತು. ಆ ಮೂಲಕ ಸಾವಿರಾರು ಕೋಟಿ ಮೌಲ್ಯದ ಜಾಗವನ್ನು ಕೆಲವೇ ಸಾವಿರ ರೂಪಾಯಿಗಳಿಗೆ ಖರೀದಿ ಮಾಡಲು ಮುಂದಾಗಿತ್ತು. ಆದರೆ ಒತ್ತುವರಿ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ರಾಜ ಕುಟುಂಬಸ್ಥರಿಗೆ ಈಗ ಗೆಲುವಾಗಿದೆ.
Elon Musk: ಬಿಲ್ ಗೇಟ್ಸ್ ಭಿಕ್ಷೆ ಬೇಡುವಂತೆ ಮಾಡುತ್ತೀನಿ: ಸವಾಲು ಹಾಕಿದ ಎಲಾನ್ ಮಸ್ಕ್
ಇಷ್ಟು ದೊಡ್ಡ ಮೊತ್ತ ನೀಡಿ ರಾಜ್ಯ ಸರ್ಕಾರ ಒತ್ತುವರಿಯನ್ನು ಮುಂದುವರೆಸುತ್ತದೆಯೋ ಒಲ್ಲವೋ ಎಂಬುದು ಕುತೂಹಲ ಮೂಡಿಸಿದೆ. ಹೈದರಾಬಾದ್ ರಸ್ತೆ ಅಗಲೀಕರಣ, ಮೆಟ್ರೋ ಲೈನ್ ಹಾಗೂ ಇನ್ನಿತರೆ ಕಾರ್ಯಗಳಿಗಾಗಿ ಈ ಜಮೀನು ಒತ್ತುವರಿಗೆ ರಾಜ್ಯ ಸರ್ಕಾರ ಮುಂದಾಗಿತ್ತು.