Karnataka: ಸಾವಿರಾರು ಕೋಟಿ ಕಳೆದುಕೊಂಡ ಕರ್ನಾಟಕ, ತಪ್ಪು ಬಿಜೆಪಿಯದ್ದೊ, ಕಾಂಗ್ರೆಸ್ ನದ್ದೊ?

0
108
Karnataka

Karnataka

ದೂರದೃಷ್ಟಿಯ ಕೊರತೆ, ಅಭಿವೃದ್ಧಿ ಬಗ್ಗೆ ನಿರ್ಲಕ್ಷ, ನಿಧಾನಗತಿಯ ಆಡಳಿತ , ಭ್ರಷ್ಟಾಚಾರ ಇನ್ನಿತರೆ ಕಾರಣಗಳಿಂದ ಕರ್ನಾಟಕ ರಾಜ್ಯವು ಭಾರಿ ದೊಡ್ಡ ಹೂಡಿಕೆಯನ್ನು ಕಳೆದುಕೊಂಡಿದೆ. ಮೊತ್ತದ ಲೆಕ್ಕದಲ್ಲಿ 5000 ಕೋಟಿ ಎನ್ನಬಹುದಾದರೂ ಭವಿಷ್ಯದ ಲೆಕ್ಲಾಚಾರದಲ್ಲಿ ಇದು ಲಕ್ಷ ಕೋಟಿಗೂ ಹೆಚ್ಚಿನ ನಷ್ಟ ಎನ್ನಬಹುದು.

ಆಗಿರುವುದೇನೆಂದರೆ ಬೆಂಗಳೂರು ಮೂಲದ ಎಲೆಕ್ಟ್ರಾನಿಕ್ ಬೈಕ್ ನಿರ್ಮಾಣ ಸಂಸ್ಥೆ ಏಥರ್ ಕರ್ನಾಟಕದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಕಾರ್ಖಾನೆಯನ್ನು ಮಹಾರಾಣ್ಟ್ರಕ್ಕೆ ಸ್ಥಳಾಂತರ ಮಾಡಿದೆ. ಎರಡು ಸಾವಿರ ಕೋಟಿ ಹಣವನ್ನು ಹೂಡಿಕೆ ಮಾಡಲು ಏಥರ್ ಇಚ್ಛಿಸಿತ್ತು ಆದರೆ ರಾಜಕಾರಣಿಗಳ ದೂರದೃಷ್ಟಿಯ ಕೊರತೆಯಿಂದ ಈಗದು ಮಹಾರಾಷ್ಟ್ರದಲ್ಲಿ ಕಾರ್ಖಾನೆ ಸ್ಥಾಪಿಸುತ್ತಿದೆ.

ಇನ್ನೊಂದು ಪ್ರತಿಷ್ಟಿತ ಇವಿ ಸಂಸ್ಥೆ ಓಲಾ ಸಹ ಎಲೆಕ್ರಿಕ್ ವಾಹನಗಳ ತಯಾರಿಕಾ ಘಟಕವನ್ನು ಕರ್ನಾಟಕದಲ್ಲಿಯೇ ಸ್ಥಾಪಿಸಲು ಬಯಸಿತ್ತು ಆದರೆ ಅದೂ ಸಹ ಸರ್ಕಾರದ ಅಸಹಕಾರದಿಂದ ರೋಸಿ ಹೋಗಿ ತಮಿಳುನಾಡಿಗೆ ತೆರಳಿ ಅಲ್ಲಿ ಘಟಕ ಸ್ಥಾಪಿಸಿದೆ. ಎರಡು ದೊಡ್ಡ ಸಂಸ್ಥೆ ರಾಜ್ಯದಿಂದ ಕಾಲ್ಕಿತ್ತ ಮೇಲೆ ಈಗ ರಾಜ್ಯದ ರಾಜಕಾರಣಿಗಳು ಒಬ್ಬರ ಮೇಲೊಬ್ಬರು ಕೆಸರೆರಚಾಟದಲ್ಲಿ ನಿರತವಾಗಿವೆ.

ದೇವಸ್ಥಾನದಲ್ಲೇ ಕಿತ್ತಾಡಿಕೊಂಡ ಅರ್ಚಕರು: ವಿಡಿಯೋ ವೈರಲ್

ಏಥರ್, ಮಹಾರಾಷ್ಟ್ರಕ್ಕೆ ಹೋಗಿದ್ದಕ್ಕೆ ಬಿಜೆಪಿ, ಕಾಂಗ್ರೆಸ್ ವಿರುದ್ಧ ಟೀಕೆ ಮಾಡಿದೆ. ಆದರೆ ಇದಕ್ಕೆ ಪ್ರತ್ಯುತ್ತರ ನೀಡಿರುವ ಕೈಗಾರಿಕಾ ಸಚಿವ ಎಂಬಿ ಪಾಟೀಲ್, ‘ ಏಥರ್ ಕರ್ನಾಟಕವನ್ನು ತ್ಯಜಿಸಿ ಮಹಾರಾಷ್ಟ್ರಕ್ಕೆ ಹೋಗಲು ಹಿಂದಿದ್ದ ಬಿಜೆಪಿ ಸರ್ಕಾರವೇ ಕಾರಣ ಎಂದಿದ್ದಾರೆ. ಏಥರ್ ಸಂಸ್ಥೆ ಕಾರ್ಖಾನೆ ಸ್ಥಾಪಿಸಲು 50 ಎಕರೆ ಜಾಗ ಕೇಳಿತ್ತು, ಬಲು ಸಮಯ ಕಾತಿಸೊದ ಬಳಿಕ ಬೊಮ್ಮಾಯಿ ಸರ್ಕಾರ 35 ಎಕರೆ ಜಾಗ ಕೊಟ್ಟಿತು, ಅದರಲ್ಲಿ ಐದು ಎಕರೆ ಜಾಗ ವಿವಾದಲ್ಲಿತ್ತು. ಹಾಗಾಗಿ ಏಥರ್ ಸಂಸ್ಥೆ ಆ 35 ಎಕರೆ ಜಾಗವನ್ನು ಸರ್ಕಾರಕ್ಕೆ ಮರಳಿಸಿ ಈಗ ಮಹಾರಾಷ್ಟ್ರಕ್ಕೆ ಹೋಗಿದೆ’ ಎಂದಿದ್ದಾರೆ.

ಇನ್ನು ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿಯೇ ಓಲಾ ಸಂಸ್ಥೆ ಕರ್ನಾಟಕ ಬಿಟ್ಟು ತಮಿಳುನಾಡಿಗೆ ತೆರಳಿತು ಆಗ ಅದನ್ನು ತಡೆಯದ ಬಿಜೆಪಿಯವರು ಈಗ ತಾವೇ ಮಾಡಿರುವ ತಪ್ಪಿಗೆ ಕಾಂಗ್ರೆಸ್ ಸರ್ಕಾರವನ್ನು ತೆಗಳುತ್ತಿದ್ದಾರೆ ಎಂದಿದ್ದಾರೆ.

LEAVE A REPLY

Please enter your comment!
Please enter your name here