Kumki Elephant: ಆಂಧ್ರಕ್ಕೆ ನಾಲ್ಕು ಆನೆ ಉಡುಗೊರೆ ಕೊಡಲಿದೆ ಕರ್ನಾಟಕ‌ ಸರ್ಕಾರ

0
92
Kumki Elephant

Kumki Elephant

ಕಳೆದ ತಿಂಗಳಷ್ಟೆ ಕರ್ನಾಟಕಕ್ಕೆ ಬಂದಿದ್ದ ಆಂಧ್ರ ನೂತನ ಉಪ ಮುಖ್ಯ ಮಂತ್ರಿ, ನಟ ಪವನ್ ಕಲ್ಯಾಣ್ ರಾಜ್ಯದ ಅರಣ್ಯ ಇಲಾಖೆ ಜೊತೆ ಕೆಲವು ಒಪ್ಪಂದ (ಮೆಮೊರ್ಯಾಂಡಮ್) ಗಳಿಗೆ ಸಹಿ ಮಾಡಿದ್ದರು. ಗಡಿ ಹಂಚಿಕೊಳ್ಳುವ ಎರಡೂ ರಾಜ್ಯಗಳ‌ ನಡುವೆ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಸಹಕಾರಕ್ಕೆ ಸಂಬಂಧಿಸಿದ ಒಪ್ಪಂದಗಳಿವು. ಇದರ ಜೊತೆಗೆ ಆನೆ ಪಳಗಿಸುವಿಕೆ ಕುರಿತು ಸಹ ಮಾಹಿತಿ ವಿನಿಮಯದ ಬಗ್ಗೆ ರಾಜ್ಯದ ಅರಣ್ಯ ಇಲಾಖೆ ಸಚಿವ ಖಂಡ್ರೆ ಜೊತೆಗೆ ಪವನ್ ಕಲ್ಯಾಣ್ ಚರ್ಚೆ ನಡೆಸಿದ್ದರು. ಅದರ ಬಳಿಕ ಈಗ ಕರ್ನಾಟಕ ರಾಜ್ಯವು ಆಂಧ್ರಕ್ಕೆ ನಾಲ್ಕು ಕುಮ್ಕಿ ಆನೆಗಳನ್ನು ಉಡುಗೊರೆಯಾಗಿ ನೀಡಿದೆ.

ಆಂಧ್ರಪ್ರದೇಶದಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು, ಸಾವು ನೋವು ಸಂಭವಿಸುತ್ತಿದೆ, ರೈತರು ಕಷ್ಟ ಪಟ್ಟು ಬೆಳೆದ ಬೆಳೆಗೆ ಹಾನಿ ಆಗುತ್ತಿದೆ ಅವುಗಳನ್ನು ಹಿಡಿದು ಪಳಗಲಿಸಲು ಕರ್ನಾಟಕದ ಸಹಕಾರವನ್ನು ಪವನ್ ಕಲ್ಯಾಣ್ ಕೇಳಿದ್ದರು. ಹಾಗಾಗಿ ಮಾನವೀಯ ನೆಲೆಗಟ್ಟಿನಲ್ಲಿ ಕರ್ನಾಟಕದ  ದಸರಾ ಆನೆಗಳನ್ನು ಹೊರತು ಪಡಿಸಿ 4 ಕುಮ್ಕಿ ಆನೆಗಳನ್ನು ಆಂಧ್ರಕ್ಕೆ ನೀಡಲಾಗವುದು ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಆಂಧ್ರದ ವಿಜಯವಾಡದಲ್ಲಿ ನಡೆದ ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ಅರಣ್ಯ ಇಲಾಖೆಯ ಸಮನ್ವಯ ಸಮಿತಿ ಸಭೆಯ ಬಳಿಕ ಮಾತನಾಡಿದ ಅವರು, ಆಂಧ್ರದ ಅರಣ್ಯ ಇಲಾಖೆ ಸಿಬ್ಬಂದಿಗೆ ಮತ್ತು ಮಾವುತರಿಗೆ ಆನೆ ಸೆರೆ ಹಿಡಿಯುವ, ಪಳಗಿಸುವ ಮತ್ತು ಅದನ್ನು ಆನೆ ಕಾರ್ಯಾಚರಣೆಗೆ ಹೇಗೆ ಬಳಸಿಕೊಳ್ಳಬೇಕು ಎಂಬ ಬಗ್ಗೆ ತರಬೇತಿ ನೀಡಲಾಗುವುದು ಎಂದರು.

Bengaluru Taxi: ಓಲಾ, ಊಬರ್ ಗಳಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿರುವ ಬೆಂಗಳೂರು ಟ್ಯಾಕ್ಸಿ ಡ್ರೈವರ್‌ಗಳು

ರಾಜ್ಯದ ದಸರಾ ಮಹೋತ್ಸವದಲ್ಲಿ ಭಾಗಿಯಾಗುವ ಆನೆಗಳ ಬಗ್ಗೆ ಜನರಲ್ಲಿ ಭಾವನಾತ್ಮಕ ನಂಟಿರುತ್ತದೆ. ಹೀಗಾಗಿ ದಸರಾದಲ್ಲಿ ಭಾಗಿಯಾದ ಯಾವುದೇ ಆನೆಯನ್ನಾಗಲೀ, ಮುಂಬರುವ ದಸರಾ ಮಹೋತ್ಸವಕ್ಕಾಗಿ ಗುರುತಿಸಲಾದ ಯಾವುದೇ ಕುಮ್ಕಿ ಆನೆಯನ್ನು ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

LEAVE A REPLY

Please enter your comment!
Please enter your name here