Women Safety
ಕೇರಳದಲ್ಲಿ ಹೇಮಾ ವರದಿ ಬಹಿರಂಗವಾದ ಬಳಿಕ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಹೇಮಾ ಸಮಿತಿ ಮಾದರಿಯಲ್ಲಿಯೇ ಸಮಿತಿ ನಿರ್ಮಿಸುವಂತೆ ಒತ್ತಾಯ ಕೇಳಿ ಬರುತ್ತಿದೆ. ಅಂತೆಯೇ ಕರ್ನಾಟಕದಲ್ಲಿ ಸಹ ಚೇತನ್ ಅಹಿಂಸ ಇನ್ನಿತರರ ನೇತೃತ್ವದ ‘ಫೈರ್’ ಸಂಸ್ಥೆ ಸಿಎಂ ಅವರನ್ನು ಭೇಟಿಯಾಗಿ ಕನ್ನಡ ಚಿತ್ರರಂಗದಲ್ಲಿ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯ ಗುರುತಿಸಲು, ಸರಿ ಮಾಡಲು ಹೇಮಾ ಸಮಿತಿ ಮಾದರಿಯ ಸಮಿತಿ ರಚಿಸುವಂತೆ ಮನವಿ ಮಾಡಿತ್ತು.
ಆದರೆ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಈ ಫೈರ್ ಸಂಸ್ಥೆಯ ಬಗ್ಗೆ ನೆಗೆಟಿವ್ ಆಗಿ ಮಾತನಾಡಿದ್ದರು. ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಅಂತೂ ಚೇತನ್ ಅಹಿಂಸ ಬಗ್ಗೆ ಕಾರ್ಯಕ್ರಮವೊಂದರಲ್ಲಿ ನಿಂದನಾತ್ಮಕವಾಗಿ ಮಾತನಾಡಿದರು. ಸಾರಾ ಗೋವಿಂದು ಮಾತು ಚಿತ್ರರಂಗದ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಯ ಪುರುಷ ಪ್ರಧಾನ ಮನಸ್ಥಿತಿಗೆ ಕನ್ನಡಿ ಹಿಡಿದಂತಿತ್ತು.
ಅದರ ಬೆನ್ನಲ್ಲೆ ಇದೀಗ ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರವೊಂದನ್ನು ಬರೆದಿದ್ದು, ಮಹಿಳೆಯರ ಸುರಕ್ಷತೆಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ 17 ಪ್ರಶ್ನೆಗಳನ್ನು ಕೇಳಿದೆ. ಈ ಹಿಂದೆ ಚಿತ್ರರಂಗದ ಮಹಿಳೆಯರನ್ನು ಕರೆದು ಸಭೆ ನಡೆಸುವಂತೆ ಸೂಚಿಸಿತ್ತು, ಅದರನ್ವಯ ಸಭೆ ನಡೆಸಿದ್ದ ವಾಣಿಜ್ಯ ಮಂಡಳಿ ಸ್ಪಷ್ಟ ನಿಲವು ತಳೆವಲ್ಲಿ ವಿಫಲವಾಗಿತ್ತು. ಅದರ ಬೆನ್ನಲ್ಲೆ ಇದೀಗ 17 ಪ್ರಶ್ನೆಗಳನ್ನು ಮಹಿಳಾ ಆಯೋಗ ಕೇಳಿದ್ದು, ಪ್ರಶ್ನೆಗಳು ಇಂತಿವೆ.
Radhika Kumaraswamy: ರಾಧಿಕಾ ಕುಮಾರಸ್ವಾಮಿ ಮಗಳನ್ನು ಕ್ರೀಡಾಪಟು ಮಾಡುವ ಆಸೆಯಂತೆ ಅಪ್ಪನಿಗೆ
1 ಚಿತ್ರೀಕರಣ ಸ್ಥಳಗಳಿಗೆ ಕರೆತರಲು ವಾಹನ ನೀಡಾಗುತ್ತಿದೆಯೇ? ಚಿತ್ರೀಕರಣ ನಂತರ ಅವರ ಮನೆಗಳಿಗೆ ಡ್ರಾಪ್ ವ್ಯವಸ್ಥೆ ಇದೆಯೇ?
2 ಚಿತ್ರೀಕರಣದ ಸಂದರ್ಭದಲ್ಲಿ ಕಲಾವಿದೆಯರಿಗೆ ಕಿರುಕುಳ, ಮಾನಸಿಕ ದೌರ್ಜನ್ಯ ಮುಂತಾದ ಕಿರುಕುಳಗಳ ವಿರುದ್ಧ ಯಾರ ಬಳಿ ಪರಿಹಾರ ಪಡೆಯಲು ದೂರು ನೀಡಬಹುದು?
3 ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ನಿರ್ಮಾಪಕರಿಗೆ ಕಲಾವಿದೆಯರ ಸುರಕ್ಷತೆ ಸಂಬಂಧವಾಗಿ ಏನಾದರು ಲಿಖಿತ ಪ್ರಮಾಣಪತ್ರಗಳನ್ನು ಪಡೆಯಲಾಗುತ್ತದೆಯೇ?
4 ತಡ ರಾತ್ರಿಯ ಚಿತ್ರೀಕರಣದ ವೇಳೆ ಕಲಾವಿದೆಯರ ಭದ್ರತೆಗೆ ಏನು ಕ್ರಮಕೈಗೊಳ್ಳಾಗುತ್ತದೆ.
5 ಹೊರ ಊರುಗಳ ಚಿತ್ರೀಕರಣ ಸಂದರ್ಭದಲ್ಲಿ ಮುಖ್ಯ ಹಾಗೂ ಸಹಕಲಾವಿದೆಯರ ವಸತಿ ವ್ಯವಸ್ಥೆ ಮತ್ತು ಅವರ ಸುರಕ್ಷತೆಗೆ ಯಾವ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತದೆ.
6 ಆಡಿಷನ್ ನೆಪದಲ್ಲಿ ನಟಿಯರನ್ನು ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಗಳಿವೆಯೇ? ಇದ್ದರೆ ಅಂತಹವರ ವಿರುದ್ಧ ಯಾವ ಕ್ರಮಕೈಗೊಳ್ಳಲಾಗಿದೆಯೆ.
7 ಚಿತ್ರೀಕರಣದ ಸ್ಥಳಗಳಲ್ಲಿ ಆಹಾರ, ಶೌಚಾಲಯ, ವಿಶ್ರಾಂತಿ ಕೊಠಡಿ, ಬಟ್ಟೆ ಬದಲಾಯಿಸಲು ವ್ಯವಸ್ಥೆ ಮಾಡಲಾಗಿರುತ್ತದೆಯೇ?
8 ಕಲಾವಿದೆಯರಿಗೆ ಚಿತ್ರೀಕರಣದ ಸಮಯದಲ್ಲಿ ಅಪಘಾತವಾದರೆ ಚಿಕಿತ್ಸಾ ವೆಚ್ಚ ಭರಿಸುವುದು ಯಾರು? ವಿಮೆ ಮಾಡಿಸಲಾಗಿರುತ್ತದೆಯೇ?