ಭಾರತದಲ್ಲಿ ಮಾರುತಿ ಕಾರುಗಳನ್ನು ಹಿಂದಿಕ್ಕುವ ವಿದೇಶಿ ಕಾರುಗಳಿಲ್ಲ. ಅದು ಇಂದಿಗೂ ನಿಜ. ಕಾರು ಮಾರುಕಟ್ಟೆಯ ರಾಜ ಮಾರುತಿ, ಈ ಸಂಸ್ಥೆಯ ಸ್ವಿಫ್ಟ್, ಡಿಜೈರ್, ಬಲಿನೊ, ಬ್ರೆಜಾ, ಆಲ್ಟೋ, ಗ್ರಾಂಡ್ ವಿಟಾರಾ, ಎರ್ಟಿಗಾ ಕಾರುಗಳು ಬಿಸಿ ದೋಸೆಯಂತೆ ಮಾರಾಟವಾಗುತ್ತವೆ. ವಿಶೇಷವೆಂದರೆ ಮಾರುತಿ ಸಂಸ್ಥೆ ಬಳಿ ಕೇವಲ ಎರಡು 7 ಸೀಟರ್ ಕಾರುಗಳಿವೆ. ಅದರಲ್ಲಿ ಎರ್ಟಿಗಾ ನಂಬರ್ 1.
ಇಡೀ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ 7 ಸೀಟರ್ ಕಾರುಗಳಲ್ಲಿ ಎರ್ಟಿಗಾ ಮೊದಲ ಸ್ಥಾನದಲ್ಲಿದೆ. ಟೊಯೊಟಾದ ಇನ್ನೊವಾ ಸಂಸ್ಥೆಯನ್ನಜ ಸಹ ಇದು ಹಿಂದಿಕ್ಕಿದೆ. ಆದರೆ ಈ ಎರ್ಟಿಗಾ ಕಾರಿಗೆ ವಿದೇಶಿ ಕಂಪೆನಿಯ ಕಾರೊಂದು ಟಕ್ಕರ್ ಕೊಡುತ್ತಿದೆ. ಅದುವೇ ಕಿಯಾ ಕಾರೆನ್ಸ್.
ಭಾರತೀಯ ಕಾರು ಮಾರುಕಟ್ಟೆಯಲ್ಲಿ ಅತ್ಯಂತ ಬೇಗ ಜನಪ್ರಿಯತೆ ಗಳಿಸಿಕೊಂಡಿರುವ ಕಿಯಾ ಸಂಸ್ಥೆ, ತನ್ನ 7 ಸೀಟರ್ ಕಾರು ಕಾರೆನ್ಸ್ ಅನ್ನು ಮಾರುತಿಯ ಎರ್ಟಿಗಾ ಎದುರು ಪ್ರತಿಸ್ಪರ್ಧಿಯಾಗಿ ಮಾರುಕಟ್ಟೆಯಲ್ಲಿ ಬಿಟ್ಟಿದೆ. ಎರ್ಟಿಗಾ ಹಾಗೂ ಕಾರೆನ್ಸ್ ನ ಬೆಲೆ ಬಹುತೇಕ ಒಂದೇ ಇದೆ. ಆದರೆ ಮಾರುತಿ ಎರ್ಟಿಗಾನಲ್ಲಿ ಸಿಗದ ಹಲವು ಸೇಫ್ಟಿ ಹಾಗೂ ಲಕ್ಷುರಿ ಫೀಚರ್ ಗಳು ಕಾರೆನ್ಸ್ ನಲ್ಲಿಸಿಗುತ್ತವೆ.
Renault Duster: ಬರುತ್ತಿದೆ ಆ ಕಾರು, ಮಾರುತಿ, ಹುಂಡೈ, ಟೊಯೊಟಾಗೆ ಶುರುವಾಗಿದೆ ನಡುಕ
ಎರ್ಟಿಗಾ ಕಾರಿಗಿಂತಲೂ ಗಾತ್ರದಲ್ಲಿ ಎತ್ತರದಲ್ಲಿ ಕಾರೆನ್ಸ್ ಕಾರು ಉತ್ತಮವಾಗಿದೆ. ಶಕ್ತಿಯಲ್ಲಿ ಸಹ ಕಾರೆನ್ಸ್ ಕೆಲವೆಡೆ ಎರ್ಟಿಗಾ ಅನ್ನು ಹಿಂದಿಕ್ಕುತ್ತದೆ. ಇನ್ನು ಫೀಚರ್ ವಿಷಯದಲ್ಲಂತೂ ಕಾರೆನ್ಸ್ ಬಹಳ ಮುಂದಿದೆ. ಕಾರೆನ್ಸ್ ನ ಲೋ ವೇರಿಯೆಂಟ್ ನಿಂದ ಹಿಡಿದು ಎಲ್ಲ ವೇರಿಯಂಟ್ ಗಳಲ್ಲಿಯೂ ಆರು ಏರ್ ಬ್ಯಾಗ್ ಬರುತ್ತದೆ. ಹಿಲ್ ಅಸಿಸ್ಟಂಟ್, ಲೇನ್ ಕಂಟ್ರೋಲ್, ಎಮರ್ಜೆನ್ಸಿ ಬ್ರೇಕ್ ಲೈಟ್ ಇನ್ನು ಹಲವು ಅವಶ್ಯಕ ಫೀಚರ್ ಗಳು ಕಸರೆನ್ಸ್ ನಲ್ಲಿ ಬರುತ್ತವೆ.
ಆದರೆ ಕಾರೆನ್ಸ್ ಗೆ ಹೋಲಿಸಿದರೆ ಎರ್ಟಿಗಾ ಒಳ್ಳೆಯ ಮೈಲೇಜ್ ಬರುತ್ತದೆ. ಎರ್ಟಿಗಾನಲ್ಲಿ ಹೈಬ್ರೀಡ್ ಸಹ ಇದೆ ಹಾಗಾಗಿ ಎರ್ಟಿಗಾ,ಕಾರೆನ್ಸ್ ಗಿಂತಲೂ ತುಸು ಹೆಚ್ಚು ಮೈಲೇಜ್ ಕೊಡುತ್ತದೆ. ಜೊತೆಗೆ ಮಾರುತಿಯ ಶೋರೂಂ ಮತ್ತು ಸರ್ವೀಸ್ ಸೆಂಟರ್ ಗಳು ಸಣ್ಣ ಪಟ್ಟಣ, ನಗರಗಲ್ಲಿಯೂ ಇದ್ದು ಸುಲಭವಾಗಿ ಸರ್ವೀಸ್ ಮಾಡಿಸಬಹುದಾಗಿರುತ್ತದೆ. ಹಾಗೂ ಕಿಯಾಗೆ ಹೋಲಿಸಿದರೆ ಮಾರುತಿಯ ಮೇಂಟೆನೆನ್ಸ್ ಕಡಿಮೆ.