Site icon Samastha News

King Fisher: ತೆಲಂಗಾಣದ ಜನರಿಗೆ ಇನ್ನು ಮುಂದೆ ಸಿಗಲ್ಲ ಕಿಂಗ್ ಫಿಶರ್ ಬಿಯರ್: ಕಾರಣ?

King Fisher

King Fisher beer will not be available in Telangana said UB

King Fisher

ಕಿಂಗ್ ಫಿಶರ್ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಬಿಯರ್. ಭಾರತದಲ್ಲಿ ಮಾತ್ರವೇ ಅಲ್ಲದೆ ವಿಶ್ವದ ಹಲವು ದೇಶಗಳಲ್ಲಿ ಕಿಂಗ್ ಫಿಶರ್ ಅತಿ ಹೆಚ್ಚು ಸೇಲ್ ಆಗುವ ಬಿಯರ್ ಆಗಿದೆ.  ಪ್ರತಿದಿನ ಭಾರತದಲ್ಲಿ ಕೋಟ್ಯಂತರ ಬಿಯರ್ ಬಾಟಲಿಗಳು ಮಾರಾಟ ಆಗುತ್ತವೆ. ಭಾರತದ ಬಹುತೇಕ ಎಲ್ಲ ರಾಜ್ಯಗಳಲ್ಲಿಯೂ ಕಿಂಗ್ ಫಿಶರ್ ಲಭ್ಯವಿದೆ. ಆದರೆ ಇನ್ನು ಮುಂದೆ ತೆಲಂಗಾಣದಲ್ಲಿ ಕಿಂಗ್ ಫಿಶರ್ ಬಿಯರ್ ಲಭ್ಯ ಆಗುವುದಿಲ್ಲ.

ತೆಲಂಗಾಣ ಸರ್ಕಾರದ ಮದ್ಯ ನೀತಿಯಿಂದ ಬೇಸತ್ತು ಕಿಂಗ್ ಫಿಷರ್ ತೆಲಂಗಾಣದಲ್ಲಿ ತನ್ನ ಮಾರಾಟವನ್ನೇ ಸ್ಥಗಿತಗೊಳಿಸಿದೆ. ತೆಲಂಗಾಣ, ಇತರೆ ರಾಜ್ಯಗಳಿಗೆ ಹೋಲಿಸಿದರೆ 90% ಕಡಿಮೆ ಹಣವನ್ನು ಬಿಯರ್ ಕಂಪೆನಿಗಳಿಗೆ ನೀಡುತ್ತದೆಯಂತೆ. ಇದರಿಂದಾಗಿ ಕಳೆದ ಹಲವು ವರ್ಷಗಳಿಂದಲೂ ತೆಲಂಗಾಣದಲ್ಲಿ ಬಿಯರ್ ಅನ್ನು ನಷ್ಟಕ್ಕೆ ಕಂಪೆನಿಗಳು ಮಾರಾಟ ಮಾಡುತ್ತಿದ್ದು ಇದೀಗ ಕಿಂಗ್ ಫಿಷರ್’ನ ಮೂಲ ಸಂಸ್ಥೆಯಾದ ಯುಬಿ ತೆಲಂಗಾಣಕ್ಕೆ ಸಪ್ಲೈ ನೀಡುವುದಿಲ್ಲ ಎಂದು ಹಿಂದೆ ಸರಿದಿದೆ.

ಭಾರತದ ಬಹುತೇಕ ರಾಜ್ಯಗಳಲ್ಲಿ ಆಯಾ ರಾಜ್ಯ ಸರ್ಕಾರಗಳೇ ಸಂಸ್ಥೆಗಳಿಂದ ಮದ್ಯವನ್ನು ಖರೀದಿ ಮಾಡಿ, ಅದರ ಮೇಲೆ ತಮ್ಮ ತೆರಿಗೆಯನ್ನು ಹೇಲಿ ಅಬಕಾರಿ ಇಲಾಖೆ ಮೂಲಕ ಬಾರ್ ಗಳಿಗೆ ವಿತರಣೆ ಮಾಡುತ್ತದೆ. ತೆಲಂಗಾಣದಲ್ಲಿ ಅಬಕಾರಿ ಸಮಿತಿಯು ಮದ್ಯ ಕಂಪೆನಿಗಳಿಂದ ಮದ್ಯವನ್ನು ಅತ್ಯಂತ ಕಡಿಮೆ ದರಕ್ಕೆ ಖರೀದಿ ಮಾಡಿ ಅದರ ಮೇಲೆ ಮನಸೋ ಇಚ್ಛೆ ತೆರಿಗೆ ಹೇರಿ ಜನರಿಗೆ ಭಾರಿ ಮೊತ್ತಕ್ಕೆ ಮಾರಾಟ ಮಾಡುತ್ತದೆ. ಇದರಿಂದಾಗಿ ಮದ್ಯ ಮಾರುವ ಕಂಪೆನಿಗಳಿಗೆ ಹಾಗೂ ಖರೀದಿ ಮಾಡುವ ಜನರಿಗೂ ಭಾರಿ ನಷ್ಟ.

ಯುಬಿ (ಕಿಂಗ್ ಫಿಷರ್ ಸಂಸ್ಥೆ) ಹೇಳಿರುವಂತೆ ತೆಲಂಗಾಣ ಸರ್ಕಾರ ಪ್ರತಿ ಕ್ರೇಟ್ ಬಿಯರ್ ಗೆ ಸಂಸ್ಥೆಗೆ ನೀಡುವುದು ಕೇವಲ 300 ರೂಪಾಯಿ. ಅಂದರೆ 12 ಬಾಟಲಿ ಮಧ್ಯಕ್ಕೆ ಕೇವಲ 300 ರೂಪಾಯಿ ಹಣವನ್ನು ಸರ್ಕಾರ ಕಂಪೆನಿಗಳಿಗೆ ನೀಡುತ್ತದೆ. ಪ್ರತಿ ಬಾಟಲಿ ಬಿಯರ್ ಗೆ ಸರ್ಕಾರ ನೀಡುವ ಹಣ ಕೇವಲ 25 ರೂಪಾಯಿ. ಜನರಿಗೆ ಇದೇ ಬಾಟಲಿಯನ್ನು 200 ರಿಂದ 300 ರೂಪಾಯಿಗೆ ಮಾರಾಟ ಮಾಡಲಾಗುತ್ತದೆ. ತೆಲಂಗಾಣ ಒಂದು ರಾಜ್ಯದಿಂದಲೇ ಯುಬಿ ಸಂಸ್ಥೆಗೆ ಸುಮಾರು 300 ಕೋಟಿ ನಷ್ಟ ಉಂಟಾಗಿದೆಯಂತೆ. ಹಾಗಾಗಿ ಈಗ ಯುಬಿಎಲ್, ತಾನು ಇನ್ನು ಮುಂದೆ ತೆಲಂಗಾಣಕ್ಕೆ ಬಿಯರ್ ಮಾರುವದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

Manchanabele Dam: ಮಂಚನಬೆಲೆ ಡ್ಯಾಮ್’ಗೆ ಸಿಗಲಿದೆ ಹೊಸ ರೂಪ, 145 ಕೋಟಿ ಪ್ರಾಜೆಕ್ಟ್

ಯುಬಿ, ತೆಲಂಗಾಣದಿಂದ ಹಿಂದೆ ಸರಿದ ಬೆನ್ನಲ್ಲೆ ಇನ್ನೂ ಕೆಲವು ದೊಡ್ಡ ಮದ್ಯ ಮಾರಾಟ ಸಂಸ್ಥೆಗಳು ಸಹ ಹಿಂದೆ ಸರಿಯುವ ಸಾಧ್ಯತೆ ಇದೆ. ಏಕೆಂದರೆ ಈ ಹಿಂದೆಯೇ ಮದ್ಯ ಸಂಸ್ಥೆಗಳು ತೆಲಂಗಾಣದ ಸರ್ಕಾರದ ಬಳಿ ಹೆಚ್ಚಿನ ಬೆಲೆ ನೀಡುವಂತೆ ಮನವಿ ಮಾಡಿದ್ದವು ಆದರೆ ಸರ್ಕಾರ ಈ ಮನವಿಗೆ ಸ್ಪಂದಿಸಿರಲಿಲ್ಲ. ಹಾಗಾಗಿ ಎಲ್ಲ ಮದ್ಯ ಸಂಸ್ಥೆಗಳು ನಷ್ಟದಲ್ಲಿಯೇ ಇವೆ.

Exit mobile version