KKR vs RR
ಐಪಿಎಲ್ 2024 ರ 31 ಪಂದ್ಯ ಇಂದು (ಏಪ್ರಿಲ್ 16) ಕೊಲ್ಕತ್ತ ನೈಟ್ ರೈಡರ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವೆ ಕೊಲ್ಕತ್ತದ ಈಡನ್ ಗಾರ್ಡನ್ಸ್ನಲ್ಲಿ ನಡೆಯಲಿದೆ. ಎರಡೂ ತಂಡಗಳು ಬಲಶಾಲಿಯಾಗಿದ್ದು, ಜಿದ್ದಾ-ಜಿದ್ದಿನ ಪಂದ್ಯ ಇಂದು ಏರ್ಪಡಲಿದೆ. ಇಂದಿನ ಪಂದ್ಯ ಟೇಬಲ್ ಟಾಪರ್ಗಳ ನಡುವಿನ ಪಂದ್ಯವಾಗಿದೆ. ಐಪಿಎಲ್ 2024ರ ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ರಾಜಸ್ಥಾನ ರಾಯಲ್ಸ್ ಇದ್ದರೆ ಎರಡನೇ ಸ್ಥಾನದಲ್ಲಿ ಕೊಲ್ಕತ್ತ ನೈಟ್ ರೈಡರ್ಸ್ ಇದ್ದಾರೆ. ಈ ಪಂದ್ಯವನ್ನು ಕೊಲ್ಕತ್ತ ಗೆದ್ದರೆ ಮೊದಲ ಸ್ಥಾನಕ್ಕೆ ಏರಲಿದೆ. ಮೊದಲ ಸ್ಥಾನ ಉಳಿಸಿಕೊಳ್ಳಲು ಈ ಪಂದ್ಯವನ್ನು ರಾಜಸ್ಥಾನ ಗೆಲ್ಲಲೇ ಬೇಕಿದೆ.
ಎರಡೂ ತಂಡಗಳಲ್ಲಿ ಫಾರ್ಮ್ನಲ್ಲಿರುವ ಅದ್ಭುತ ಆಟಗಾರರಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಶಕ್ತಿ ಪ್ರದರ್ಶಿಸುತ್ತಲೇ ಬಂದಿವೆ ಎರಡೂ ತಂಡಗಳು. ಆದರೂ ಸಹ ಈ ಎರಡೂ ತಂಡಗಳು ಕೆಲವು ಕೀ ಆಟಗಾರರ ಮೇಲೆ ನಿರ್ಭರವಾಗಿದೆ. ಇಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಪಂದ್ಯ ಗೆಲ್ಲಲು ಪ್ರಮುಖ ಪಾತ್ರವಹಿಸಲಿರುವ ಕೆಲವು ಸಂಭಾವ್ಯ ಆಟಗಾರರ ಪಟ್ಟಿ ಇಲ್ಲಿದೆ.
ಕೊಲ್ಕತ್ತದ ಸುನೀಲ್ ನರೇನ್ ಈ ಸರಣಿಯ ಆರಂಭದಿಂದಲೂ ಅದ್ಭುತವಾದ ಪ್ರದರ್ಶನ ನೀಡುತ್ತಲೇ ಬಂದಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಅವರು ನಿರಾಸೆ ಮೂಡಿಸಿಲ್ಲ. ಕಳೆದ ಪಂದ್ಯದಲ್ಲಿ ಬ್ಯಾಟ್ನಿಂದ ಉತ್ತಮ ಪ್ರದರ್ಶನ ನೀಡಲಿಲ್ಲ, ಆದರೆ ಬೌಲಿಂಗ್ನಲ್ಲಿ ಮಿಂಚಿದರು. ಈ ಪಂದ್ಯದಲ್ಲಿ ಮತ್ತೆ ಬ್ಯಾಟಿಂಗ್ ಫಾರ್ಮ್ಗೆ ನರೇನ್ ಬರುವ ಸಾಧ್ಯತೆ ಹೆಚ್ಚಿದೆ. ಆಲ್ರೌಂಡರ್ಗಳಲ್ಲಿ ಆಂಡ್ರು ರಸೆಲ್ ಮತ್ತು ಆರ್ ಪರಾಗ್ ಸಹ ಇಂದಿನ ಪಂದ್ಯದಲ್ಲಿ ಮಿಂಚುವ ಸಾಧ್ಯತೆ ಹೆಚ್ಚಿಗಿದೆ.
ವಿನೋದ್ ಕಾಂಬ್ಳಿ ಏಕೆ ಸಚಿನ್ ರೀತಿ ಯಶಸ್ವಿ ಕ್ರಿಕೆಟಿಗ ಆಗಲಿಲ್ಲ: ರಾಹುಲ್ ದ್ರಾವಿಡ್ ಕೊಟ್ಟರು ಉತ್ತರ
ರಾಜಸ್ಥಾನ ತಂಡದ ನಾಯಕ ಸಂಜು ಸ್ಯಾಮ್ಸನ್ ಈ ಪಂದ್ಯಾವಳಿಯ ಆರಂಭದಿಂದಲೂ ಉತ್ತಮ ಟಚ್ನಲ್ಲಿದ್ದಾರೆ. ಇಂದಿನ ಪಂದ್ಯದಲ್ಲಿಯೂ ಸಹ ಅವರು ತಮ್ಮ ಉತ್ತಮ ಫಾರ್ಮ್ ಮುಂದುವರೆಸಲಿದ್ದಾರೆ. ಎದುರಾಳಿ ತಂಡದ ವಿಕೆಟ್ ಕೀಪರ್ ಪಿ ಸಾಲ್ಟ್ ಸಹ ಲಯದಲ್ಲಿದ್ದು ಇಂದು ಅವರ ಬ್ಯಾಟಿನಿಂದ ರನ್ ಹರಿಯುವ ಸಾಧ್ಯತೆ ದಟ್ಟವಾಗಿದೆ.
ಕೊಲ್ಕತ್ತದ ನಾಯಕ ಶ್ರೇಯಸ್ ಐಯ್ಯರ್ ಇಂದು ದೊಡ್ಡ ಇನ್ನಿಂಗ್ಸ್ ಆಡುವ ಸಾಧ್ಯತೆ ಇದೆ. ಹಾಗೆಯೇ ರಾಜಸ್ಥಾನ ರಾಯಲ್ಸ್ನ ಭರವಸೆಯ ಆಟಗಾರ ಯಶಸ್ವಿ ಜೈಸ್ವಾಲ್ ಇಂದೂ ಸಹ ಯಶಸ್ವಿಯಾಗುವ ಸಾಧ್ಯತೆ ಇದೆ. ಇವರಿಬ್ಬರ ಹೊರತಾಗಿ ರಿಂಕು ಸಿಂಗ್, ಹೆಟ್ಮೈಯರ್, ಜುರೆಲ್ ಅವರುಗಳ ಮೇಲೂ ಸಹ ಭರವಸೆ ಇಡಬಹುದಾಗಿದೆ.
ಇನ್ನು ಬೌಲಿಂಗ್ ವಿಭಾಗಕ್ಕೆ ಬಂದರೆ, ಈ ಸೀಸನ್ನಲ್ಲಿ ಈ ವರೆಗೆ ಅತಿ ಹೆಚ್ಚು ವಿಕೆಟ್ ಕಬಳಿಸಿ ನೇರಳೆ ಕ್ಯಾಪ್ ಧರಿಸಿರುವ ಯುವೇಂಧರ್ ಚಾಹಲ್ ಇಂದೂ ಸಹ ಕನಿಷ್ಟ ಎರಡು ವಿಕೆಟ್ ತಮ್ಮ ಖಾತೆಗೆ ಹಾಕಿಕೊಳ್ಳುವುದು ಪಕ್ಕಾ. ಮಿಷೆಲ್ ಸ್ಟಾರ್ಕ್ ಸಹ ಎದುರಾಳಿಗೆ ಆಘಾತಕಾರಿ ಆಗಬಲ್ಲರು. ಭಾರತೀಯ ಬೌಲರ್ಗಳಾದ ಕೆ ಮಹಾರಾಜ್ ಹಾಗೂ ವೊಹ್ರಾ ಅವರುಗಳು ಸಹ ಭರವಸೆಯ ಬೌಲಿಂಗ್ ಮಾಡುತ್ತಿದ್ದು, ಇಂದಿನ ಪಂದ್ಯದಲ್ಲಿ ಈ ಇಬ್ಬರು ಮಿಂಚುವ ಸಾಧ್ಯತೆ ಇದೆ. ಕೊಲ್ಕತ್ತಗೆ ಹೋಮ್ ಗ್ರೌಂಡ್ ಪಂದ್ಯವಾಗಿರುವ ಕಾರಣ, ಕೊಲ್ಕತ್ತ ಆಟಗಾರರು ಆತ್ಮವಿಶ್ವಾಸದಿಂದ ಆಡಲಿದ್ದಾರೆ.