Kolar: ಕಾಲೇಜಿನಲ್ಲೇ ಹೊಡದಾಡಿಕೊಂಡ ಉಪನ್ಯಾಸಕರು

0
164
Kolar
Kolar News

Kolar

ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕು, ಅವರ ತಪ್ಪು ತಿದ್ದಬೇಕು, ಅವರನ್ನು ಸರಿ ದಾರಿಗೆ ತರಬೇಕು ಆದರೆ ಕೋಲಾರದ ಇಬ್ಬರು ಕಾಲೇಜು ಉಪನ್ಯಾಸಕರು ಕಾಲೇಜಿನಲ್ಲಿಯೇ ತಮ್ಮ ವಿದ್ಯಾರ್ಥಿಗಳ ಮುಂದೆಯೇ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ತಮ್ಮ‌ ಶಿಕ್ಷಕರೇ ಹೊಡೆದಾಡಿಕೊಂಡಿರುವುದು ನೋಡಿ ಪಾಪ ವಿದ್ಯಾರ್ಥಿಗಳು ಶಾಕ್ ಆಗಿದ್ದಾರೆ.

ಕೋಲಾರದ ಜ್ಯೂನಿಯರ್ ಕಾಲೇಜಿನ ಇಬ್ಬರು ಉಪನ್ಯಾಸಕರು ಮಂಗಳವಾರ ಬೆಳಿಗ್ಗೆ ಕಾಲೇಜಿನಲ್ಲಿಯೇ ಪರಸ್ಪರ ಕೈ-ಕೈ ಮಿಲಾಯಿಸಿ ಹೊಡೆದಾಡಿಕೊಂಡಿದ್ದಾರೆ. ಯಾವ ಮಟ್ಟಿಗೆ ಜಗಳವಾಡಿದ್ದಾರೆಂದರೆ ಇಬ್ಬರಿಗೂ ಗಾಯಗಳಾಗಿ ಒಬ್ಬರು ಆಸ್ಪತ್ರೆ ಸೇರಿದ್ದಾರೆ.

ರಾಜ್ಯಶಾಸ್ತ್ರ ಉಪನ್ಯಾಸಕ ನಾಗಾನಂದ ಕೆಂಪರಾಜು ಹಾಗೂ ಕಾಲೇಜಿನ ಕನ್ನಡ ಉಪನ್ಯಾಸಕ ಜೆಜಿ ನಾಗರಾಜು ಪರಸ್ಪರ ಜಗಳವಾಡಿದ್ದು, ಇಬ್ಬರಿಗೂ ಗಾಯಗಳಾಗಿವೆ‌. ರಾಜ್ಯಶಾಸ್ತ್ರ ಉಪನ್ಯಾಸಕ ಕೆಂಪರಾಜು ಅವರೇ ಜಗಳ ಆರಂಭಿಸಿ ಹಲ್ಲೆ ಮಾಡಿದರು ಎಂದು ಕನ್ನಡ ಉಪನ್ಯಾಸಕ ನಾಗರಾಜು ಆರೋಪ ಮಾಡಿದ್ದಾರೆ.

ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರೂ ಆಗಿರುವ ಕೆಂಪರಾಜು ಮತ್ತೆ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು‌. ಕನ್ನಡ ಉಪನ್ಯಾಸಕ ನಾಗರಾಜು, ಬೇರೊಬ್ಬ ಅಭ್ಯರ್ಥಿಗೆ ಬೆಂಬಲ ನೀಡಿ ಅವರ ಪರವಾಗಿ ಕೆಲಸ ಮಾಡಿದ್ದರು ಎನ್ನಲಾಗಿದೆ. ಇದರಿಂದ ಸಿಟ್ಟಾಗಿದ್ದ ಕೆಂಪರಾಜು, ಕನ್ನಡ ಉಪನ್ಯಾಸಕ ನಾಗರಾಜುಗೆ ಪ್ರತಿದಿನ ಕೆಟ್ಟದಾಗಿ ಸಂದೇಶಗಳನ್ನು ಕಳಿಸುತ್ತಿದ್ದರಂತೆ. ಕಾಲೇಜಿನಲ್ಲಿಯೂ ನಿಂದೊಸುವುದು, ವ್ಯಂಗ್ಯ ಮಾಡುವುದು ಮಾಡುತ್ತಿದ್ದರಂತೆ.

Valmiki Corruption Case: ತನಿಖಾಧಿಕಾರಿಗಳ ವಿರುದ್ಧವೇ FIR ದಾಖಲು

ಮಂಗಳವಾರದ ದಿನವೂ ಅದೇ ಮುಂದುವರೆದಾಗ ನಾಗರಾಜು ಪ್ರಶ್ನೆ ಮಾಡಿದ್ದಾರೆ. ಇದೇ ಕಾಣಕ್ಕೆ ಇಬ್ಬರ ನಡುವೆ ಜಗಳ ನಡೆದಿದ್ದು ಇಬ್ಬರೂ ಶಿಕ್ಷಕರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಜಗಳದಲ್ಲಿ ಕನ್ನಡ ಉಪನ್ಯಾಸಕ ನಾಗರಾಜ್ ಮುಖ ಊದಿಕೊಂಡಿದ್ದು ಎಸ್ ಎಸ್ ಆರ್ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಕೆಂಪರಾಜುಗೆ ಸಹ ಕೈಗೆ ಇನ್ನಿತರೆ ಕಡೆ ಸಣ್ಣ ಪುಟ್ಟ ಗಾಯಗಳಾಗಿವೆ.

ತಮ್ಮ ಕನ್ನಡ ಶಿಕ್ಷಕ ಹೊಡೆದ ತಿಂದಿದ್ದು ಕೇಳಿದ ಕೆಲ ವಿದ್ಯಾರ್ಥಿಗಳು ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿದ್ದಾರೆ. ಜಿಲ್ಲಾ ಕಾಸಾಪ ಪದಾಧಿಕಾರಿಗಳು ಸಹ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ನಗರ ಠಾಣೆ ಇನ್ ಸ್ಪೆಕ್ಟರ್ ಸದಾನಂದ ಆಸ್ಪತ್ರೆಗೆ ಭೇಟಿ ಮಾಹಿತಿ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here