Bengaluru
ನ್ಯೂಯಾರ್ಕ್, ಮುಂಬೈ, ಬೀಜಿಂಗ್, ಟೋಕಿಯೊ, ಪ್ಯಾರಿಸ್, ಅಂಥಹಾ ಕೆಲವು ನಗರಗಳನ್ನು ಹೊರತುಪಡಿಸಿದರೆ ಅತಿ ಹೆಚ್ಚು ಮನೆ ಬಾಡಿಗೆ ದರ ಹೊಂದಿರುವ ನಗರ ಬೆಂಗಳೂರು. ನಗರದ ಕೆಲವು ಪ್ರಮುಖ ಏರಿಯಾಗಳಲ್ಲಿ ಬಾಡಿಗೆ ದರ ಭಾರಿ ದುಬಾರಿಯಾಗಿದೆ. ಆದರೆ ಇತ್ತೀಚೆಗೆ ನಗರದ ಕೆಲವು ಏರಿಯಾಗಳಲ್ಲಿ ಬಾಡಿಗೆ ದರವನ್ನು ಇಳಿಸುತ್ತಿದ್ದಾರಂತೆ ಮನೆ ಮಾಲೀಕರು.
ಬೆಂಗಳೂರಿನಲ್ಲಿ ಮನೆ ಬಾಡಿಗೆ ಬಹಳ ದುಬಾರಿ ಆಗಿರುವ ಏರಿಯಾಗಳಲ್ಲಿ ಪ್ರಮುಖವಾದವು ಕೋರಮಂಗಲ, ವೈಟ್ ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ ಇತರೆಗಳು. ಆದರೆ ಈ ಏರಿಯಾಗಳಲ್ಲಿಯೇ ಮನೆ ಮಾಲೀಕರು ಬಾಡಿಗೆ ದರಗಳನ್ನು ತಗ್ಗಿಸುತ್ತಿದ್ದಾರಂತೆ. ಅದಕ್ಕೆ ಕಾರಣ ಬೆಂಗಳೂರಿನ ಐಟಿ ಉದ್ಯೋಗಿಗಳು.
ಕೋರಮಂಗಲ, ಎಲೆಕ್ಟ್ರಾನಿಕ್ ಸಿಟಿ, ವೈಟ್ ಫೀಲ್ಡ್ ಮುಂತಾದ ಐಟಿ ಹಬ್ ಗಳಲ್ಲಿ ಐಟಿ ಸಿಬ್ಬಂದಿ ಹೆಚ್ಚು-ಹೆಚ್ಚು ಬಾಡಿಗೆಗಿದ್ದರು. ಹಾಗಾಗಿ ಇಲ್ಲೆಲ್ಲ ಬಾಡಿಗೆ ದರ ಹೆಚ್ಚಿತ್ತು, ಆದರೆ ಈಗ ಐಟಿ ಸಿಬ್ಬಂದಿ ಐಟಿ ಕಾರಿಡಾರ್ ಗಳಿಂದ ದೂರ ನೆಲೆಸಲು ಇಷ್ಟಪಡುತ್ತಿದ್ದಾರೆ. ಮೆಟ್ರೋ ವ್ಯವಸ್ಥೆ ಉತ್ತಮವಾಗಿರುವುದರಿಂದ ಕಚೇರಿಯಿಂದ ದೂರ ಮನೆ ಮಾಡಿ, ಮೆಟ್ರೋಗಳು ಅಥವಾ ಇತರೆ ಸಾರಿಗೆ ವಾಹನಗಳಲ್ಲಿ ಓಡಾಡುತ್ತಿದ್ದಾರೆ ಹೀಗಾಗಿ ಕೋರಮಂಗಲ ಇನ್ನಿತರೆ ಐಟಿ ಹಬ್ ಗಳಲ್ಲಿ ಬಾಡಿಗೆ ಮನೆಗೆ ಡಿಮ್ಯಾಂಡ್ ಕಡಿಮೆ ಆಗಿದೆ.
Sukesh Chandrashekhar: ಹರಾಜಾಗಲಿವೆ ಬೆಂಗಳೂರಿನ ಮಹಾವಂಚಕ ಸುಖೇಶನ 26 ಐಶಾರಾಮಿ ಕಾರುಗಳು
ಕೋರಮಂಗಲ, ಎಲೆಕ್ಟ್ರಾನಿಕ್ ಸಿಟಿಗಳಂಥಹಾ ದುಬಾರಿ ಏರಿಯಾಗಳ ಬದಲಾಗಿ, ಹೂಡಿ, ಚನ್ನಸಂದ್ರ, ಕಾಡುಗೋಡಿ ಇನ್ನಿತರೆ ಏರಿಯಾಗಳಿಗೆ ಐಟಿ ಸಿಬ್ಬಂದಿ ಶಿಫ್ಟ್ ಆಗುತ್ತಿದ್ದಾರೆ. ಅಲ್ಲಿ ಬಾಡಿಗೆಯೂ ಕಡಿಮೆ ಇದೆ, ಹಾಗೂ ಟ್ರಾಫಿಕ್ ಸಮಸ್ಯೆಯೂ ಕಡಿಮೆ.
ಈ ಮುಂಚೆ ಕೋರಮಂಗಲದಲ್ಲಿ ಮೂರು ಬೆಡ್ ರೂಂನ ಮನೆಯ ಬಾಡಿಗೆ 75 ಸಾವಿರ ರೂಪಾಯಿ ಇತ್ತು. ಈಗ ಮನೆ ಮಾಲೀಕರು ಬಾಡಿಗೆಯನ್ನು 10 ರಿಂದ 15 ಸಾವಿರ ತಗ್ಗಿಸಿದ್ದಾರೆ. 20 ಸಾವಿರ ಇದ್ದ ಬಾಡಿಗೆ ಮನೆ ಓಗ 15 ಸಾವಿರ ಆಗಿದೆ. ಐಟಿ ಸಿಬ್ಬಂದಿಯನ್ನು ಮತ್ತೆ ಸೆಳೆಯಲೆಂದೇ ಮನೆ ಮಾಲೀಕರು ಬಾಡಿಗೆ ಮೊತ್ತವನ್ನು ಇಳಿಸಿದ್ದಾರೆ.