Lorry Driver
ಲಾರಿ ಡ್ರೈವರ್ ಸಂಬಳ ಎಷ್ಟಿರಬಹುದು? ತಿಂಗಳಿಗೆ 25 ಸಾವಿರ ತೀರ ಹೆಚ್ಚೆಂದರೆ 40 ಸಾವಿರ. ಆದರೆ ಈ ಲಾರಿ ಡ್ರೈವರ್ ಆದಾಯ ತಿಂಗಳಿಗೆ 10 ಲಕ್ಷ ರೂಪಾಯಿಗಳು. ಈತ ಓಡಿಸುವ ಲಾರಿಯ ಮಾಲೀಕನಿಗೂ ಸಹ ತಿಂಗಳಿಗೆ ಇಷ್ಟು ಆದಾಯ ಇರಲಿಕ್ಕಿಲ್ಲ. ಆದರೆ ಈ ಲಾರಿ ಡ್ರೈವರ್ ಆದಾಯ ಗಳಿಸುತ್ತಿರುವುದು ತನ್ನ ವೃತ್ತಿಯಿಂದ ಅಲ್ಲ ಬದಲಿಗೆ ಪ್ರವೃತ್ತಿಯಿಂದ.
ಲಾರಿ ಡ್ರೈವರ್ ಒಬ್ಬಾತ ತನ್ನ ಲಾರಿಯ ಒಳಗೆ ಕುಳಿತುಕೊಂಡು ಸಣ್ಣ ಗ್ಯಾಸ್ ಸಿಲೆಂಡರ್ ಇಟ್ಟುಕೊಂಡು, ಕಪ್ಪಾದ ಬಾಣಲಿಯೊಂದರಲ್ಲಿ ಅಡುಗೆಗಳನ್ನು ಮಾಡುತ್ತ, ಅಚ್ಚ ಹಿಂದಿಯಲ್ಲಿ ಮಾತನಾಡುತ್ತಾ, ಸರಳವಾದ ಅಡುಗೆ ರೆಸಿಪಿಗಳನ್ನು ಮಾಡುತ್ತಾ ಇರುವ ವಿಡಿಯೋಗಳನ್ನು ನೋಡಿಯೇ ಇರುತ್ತೀರ. ಈತನ ರೆಸಿಪಿಗಳಿಗೆ ದೊಡ್ಡ ಅಭಿಮಾನಿ ವರ್ಗವೇ ಇದೆ
ಈ ವ್ಯಕ್ತಿಯ ಹೆಸರು ರಾಜೇಶ್. ತನ್ನ ಸರಳವಾದ ಅಡುಗೆ ವಿಡಿಯೋಗಳಿಂದ ತಿಂಗಳಿಗೆ 10 ಲಕ್ಷ ರೂಪಾಯಿ ಗಳಿಸುತ್ತಾನೆ. ಲಾರಿ ಓಡಿಸುವಾಗ ಅಪಘಾತವಾಗಿ ಕೈಗೆ ಗಾಯವಾಗಿತ್ತು. ಆದರೆ ಕುಟುಂವ ನಿರ್ವಹಣೆಗೆ ಮತ್ತೆ ಲಾರಿ ಓಡಿಸಲೇ ಬೇಕಾಯ್ತು. ಹೊರಗಡೆ ಊಟ ಮಾಡಿದರೆ ಹಣ ಖರ್ಚಾಗುತ್ತದೆ, ಆರೋಗ್ಯವೂ ಕೈ ಕೊಡಲು ಪ್ರಾರಂಭಿಸಿದಾಗ ಲಾರಿಯಲ್ಲಿ ತಾನೇ ಅಡುಗೆ ಮಾಡಲು ಪ್ರಾರಂಭಿಸಿದರು. ಕೊನೆಗೆ ಅಡುಗೆ ಮಾಡುವುದು ಅವರ ಹವ್ಯಾಸವೇ ಆಗಿ ಹೋಯ್ತು.
ಕೋವಿಡ್ ಬಳಿಕ ಯೂಟ್ಯೂಬ್ ಟ್ರೆಂಡ್ ಹೆಚ್ಚಾದಾಗ ತಾನು ಮಾಡುವ ಅಡುಗೆ ವಿಡಿಯೋ ಅನ್ನೇ ಸಹಾಯಕನ ಮೂಲಕ ವಿಡಿಯೋ ಮಾಡಿಸಿ ಅದನ್ನು ಯೂಟ್ಯೂಬ್ ನಲ್ಲಿ ಹಂಚಿಕೊಳ್ಳಲು ಪ್ರಾರಂಭಿಸಿದರು. ಇದಕ್ಕೆ ಅವರ ಕುಟುಂಬದವರು ಹಾಗೂ ಸಂಬಂಧಿಯೊಬ್ಬರ ನೆರವು ಸಹ ಸಿಕ್ಕಿತು. ಕೆಲವೇ ದಿನಗಳಲ್ಲಿ ರಾಜೇಶ್ ಅವರ ಲಾರಿ ಅಡುಗೆ ವಿಡಿಯೋಗಳು ಸಖತ್ ವೈರಲ್ ಆದವು. ಈಗ ಅವರಿಗೆ 18 ಲಕ್ಷಕ್ಕೂ ಹೆಚ್ಚು ಸಬ್ ಸ್ಕ್ರೈಬರ್ ಗಳಿದ್ದಾರೆ.
Independence day: ಬ್ರಿಟೀಷರು ಭಾರತಕ್ಕೆ ಆಗಸ್ಟ್ 15ರಂದೇ ಸ್ವಾತಂತ್ರ್ಯ ನೀಡಿದ್ದು ಏಕೆ?
ಇತ್ತೀಚೆಗಷ್ಟೆ ಲಾರಿ ಡ್ರೈವರ್ ರಾಜೇಶ್ ಸ್ವಂತ ಮನೆ ಕಟ್ಟಿಸಿಕೊಂಡಿದ್ದಾರೆ. ಮನೆ ಕಟ್ಟಿಸಿದಾಗ ವಿಡಿಯೋ ಅಪ್ ಲೋಡ್ ಮಾಡಿದ್ದ ರಾಜೇಶ್, ‘ನಿಮ್ಮ ಪ್ರೀತಿಯಿಂದ ನಾನು ಇಂದು ಮನೆ ಕಟ್ಟಿಸಿದ್ದೇನೆ. ಯೂಟ್ಯೂಬ್ ಇಲ್ಲದೆ ಹೋಗಿದ್ದರೆ ನಾನು ಈ ಮನೆ ಕಟ್ಟಿಸಲು ಸಾಧ್ಯವಾಗುತ್ತಿರಲಿಲ್ಲ’ ಎಂದಿದ್ದಾರೆ. ಅದೇ ವಿಡಿಯೋದಲ್ಲಿ ತಮ್ಮ ಆದಾಯದ ಬಗ್ಗೆ ಮಾತನಾಡಿರುವ ರಾಜೇಶ್, ‘ತಿಂಗಳಿಗೆ ಈಗ 5 ಅಥವಾ 6 ಲಕ್ಷ ಹಣ ಬರುತ್ತಿದೆ. ಒಮ್ಮೆಯಂತೂ ಒಂದು ತಿಂಗಳು 10 ಲಕ್ಷ ರೂಪಾಯಿ ಬಂದಿತ್ತು. ಸರಾಸರಿ 6 ಲಕ್ಷ ಹಣವಂತೂ ಪ್ರತಿ ತಿಂಗಳು ಬರುತ್ತಿದೆ ಎಂದಿದ್ದಾರೆ.