Mahindra
ಮಹೀಂದ್ರಾ ಸಂಸ್ಥೆ ಭಾರತದ ಅತ್ಯುತ್ತಮ ಕಾರು ನಿರ್ಮಾಣ ಸಂಸ್ಥೆಗಳಲ್ಲಿ ಒಂದು. ಸ್ಕಾರ್ಪಿಯೋ ಮೂಲಕ ನಾಲ್ಕು ಚಕ್ರ ವಾಹನ ಮಾರುಕಟ್ಟೆಯಲ್ಲಿ ಕ್ರಾಂತಿಯನ್ನೇ ಮಾಡಿದ್ದ ಮಹೀಂದ್ರಾ ಈಗ ತನ್ನ XUV ಸರಣಿಯ ಕಾರುಗಳ ಮೂಲಕ ಕಾರು ಮಾರುಕಟ್ಟೆಯಲ್ಲಿ ಮುನ್ನುಗ್ಗುತ್ತಿದೆ. XUV 700 ಕಾರು ಮೇಲ್ಸ್ಥರದ ವರ್ಗದವರಿಗಾದರೆ ಇದೀಗ ಅದೇ XUV ಸರಣಿಯಲ್ಲಿ ಮಧ್ಯಮ ವರ್ಗದವರಿಗೂ ಕಾರು ಹೊರತಂದಿದೆ ಮಹೀಂದ್ರಾ.
ಎಕ್ಸ್ ಯುವಿ 700 ಹಾಗೂ ಎಕ್ಸ್ ಯುವ 500 ಕಾರುಗಳನ್ನು ಹೊರತಂದಿದ್ದ ಮಹೀಂದ್ರಾ ಅದಾದ ಬಳಿಕ ಕಡಿಮೆ ಬೆಲೆಯ 3XO ಕಾರನ್ನು ಬಿಡುಗಡೆ ಮಾಡಿತ್ತು. ಮಿಸಿ ಎಸ್ಯುವಿ ವರ್ಗದ ಈ ಕಾರಿನಲ್ಲಿ ಹಲವು ಅತ್ಯಾಧುನಿಕ ತಂತ್ರಜ್ಞಾನ ಆಧರಿತ ಸೌಕರ್ಯಗಳನ್ನು ನೀಡಿತ್ತು. ಇದೀಗ XUV 200 ಕಾರು ಬಿಡುಗಡೆ ಮಾಡಿದ್ದು ಮಹೀಂದ್ರಾ ಕಡಿಮೆ ಬೆಲೆ ಕಾರು ವಿಭಾಗದಲ್ಲಿ ಕ್ರಾಂತಿ ಮಾಡಲು ಮುಂದಾಗಿದೆ.
XUV 200 ಕಾರು, ನೋಡಲು ತುಸು ದುಬಾರಿ XUV 700 ಅನ್ನೇ ಹೋಲುತ್ತದೆ. ಆದರೆ ಗಾತ್ರದಲ್ಲಿ ಬಹಳ ಚಿಕ್ಕದು. 110 ಹಾರ್ಸ್ ಪವರ್ ಹೊಂದಿರುವ ಈ ಕಾರು 1.2 ಮತ್ತು 1.5 ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದ್ದು ಮ್ಯಾನುಯೆಲ್ ಮತ್ತು ಆಟೊಮ್ಯಾಟಿಕ್ ಎರಡೂ ಆಯ್ಕೆಗಳಲ್ಲಿ ಲಭ್ಯವಿದೆ. ಈ ಕಾರಿನ ವಿಶೇಷತೆಯೆಂದರೆ ಇದರ ಮೈಲೇಜ್. ಮಹೀಂದ್ರಾ ಹೇಳುವಂತೆ ಈ ಕಾರು ಒಂದು ಲೀಟರ್ ಗೆ ಬರೋಬ್ಬರಿ 22 ರಿಂದ 24 ಕಿ.ಮೀ ಮೈಲೇಜ್ ನೀಡುತ್ತದೆಯಂತೆ.
Tesla: ಭಾರತಕ್ಕೆ ಬರುತ್ತಿದೆ ಟೆಸ್ಲಾ, ಕಾರಿನ ಬೆಲೆ ಎಷ್ಟಿರಲಿದೆ?
ಹೈಯೆಂಡ್ ಕಾರುಗಳಲ್ಲಿ ನಿಒಡಲಾಗುವ ಕೆಲವು ಆಪ್ಷನ್ ಗಳು ಈ ಕಾರಿನಲ್ಲಿವೆ. LED ಹೆಡ್ ಲೈಟ್, LED ಡಿಆರ್ಎಲ್, ಟೇಲ್ ಲ್ಯಾಂಪ್, ಆರು ಏರ್ ಬ್ಯಾಗ್, ಎಬಿಎಸ್ ಮತ್ತು ಇಬಿಡಿ ಬ್ರೇಕ್ ಸಿಸ್ಟಂ, ಹಿಲ್ ಸ್ಟಾರ್ಟ್ ಅಸಿಸ್ಟಂಟ್, ರಿಯರ್ ಕ್ಯಾಮೆರಾ, ಸೆನ್ಸರ್ ಗಳು ಲಭ್ಯ ಇವೆ. ಇದರ ಜೊತೆಗೆ ಈ ಕಾರಿನಲ್ಲಿ 7 ಇಂಚಿನ ಡಿಸ್ ಪ್ಲೇ, ಆಪಲ್ ಕಾರ್ ಪ್ಲೇ, ವಯರ್ ಲೆಸ್ ಚಾರ್ಜಿಂಗ್, ಆಟೊಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಇನ್ನು ಹಲವು ಆಯ್ಕೆಗಳು ಈ ಕಾರಿನಲ್ಲಿವೆ. ಮಹೀಂದ್ರಾ XUV 200 ಕಾರಿನ ಬೆಲೆ 8.49 ಲಕ್ಷದಿಂದ ಪ್ರಾರಂಭವಾಗಿ 12.99 ಲಕ್ಷದ ವರೆಗೆ ಇದೆ. ಇದು ಎಕ್ಸ್ ಶೋರೂಂ ಬೆಲೆಯಾಗಿದ್ದು ಆನ್ ರೋಡ್ ಬೆಲೆ ತುಸು ಹೆಚ್ಚಾಗಲಿದೆ.