Site icon Samastha News

Maruti Car: ಮಾರುತಿಯ ಹೊಸ ಕಾರು, ನೋಡಲು ಬೊಂಬಾಟ್, ಮೈಲೇಜ್ ಬಂಪರ್

Maruti

Maruti Car

ಭಾರತದಲ್ಲಿ ಹಲವು ದೇಸಿ, ವಿದೇಶಿ ಕಾರು ಕಂಪೆನಿಗಳು ವ್ಯಾಪಾರ ನಡೆಸುತ್ತಿವೆ. ಹಲವು ಕಂಪೆನಿಗಳು ವಿದೇಶಿ ತಂತ್ರಜ್ಞಾನ ಹೊಂದಿರುವ ಅತ್ಯುತ್ತಮ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ. ಆದರೆ ಮಾರುತಿಯನ್ನು ಯಾರೂ ಸಹ ಹಿಂದಿಕ್ಕಲಾಗಿಲ್ಲ. ದಶಕಗಳಿಂದಲೂ ಭಾರತದಲ್ಲಿ ಮಾರುತಿ ಕಂಪೆನಿ ನಂಬರ್‌ 1 ಕಾರು ಕಂಪೆನಿ. ಭಾರತದ ಮಧ್ಯಮ ವರ್ಗಕ್ಕೆ ಏನು ಬೇಕೊ ಅದನ್ನು ಕೊಡುತ್ತಾ ಬಂದಿದೆ ಈ ಸಂಸ್ಥೆ.

ಮಾರುತಿ ಕಂಪೆನಿ ಇದೀಗ ತನ್ನ ಬೆಸ್ಟ್ ಸೆಲ್ಲಿಂಗ್ ಕಾರುಗಳಲ್ಲಿ ಒಂದಾಗಿರುವ ಬ್ರೆಜಾ ಅನ್ನು ರೀ ಡಿಸೈನ್ ಮಾಡಿ ಹೊಸ ಮಾಡೆಲ್ ಅನ್ನು ಮಾರುಕಟ್ಟೆಗೆ ತರುತ್ತಿದೆ. ಅದೂ ಭರ್ಜರಿ ಮೈಲೇಜ್ ಜೊತೆಗೆ. ಮಾರುತಿ ಸಂಸ್ಥೆಯ ಮೊದಲ‌ ಎಸ್’ಯುವಿ ಕಾರಾಗಿರುವ‌ ಬ್ರೆಜಾ, ಮಾರುತಿ ಸಂಸ್ಥೆಯ ಬೆಸ್ಟ್ ಸೆಲ್ಲಿಂಗ್ ಕಾರು ಮಾಡೆಲ್’ಗಳಲ್ಲಿ ಒಂದು. ವಿಶಾಲವಾದ ಸ್ಪೇಸ್ ಜೊತೆಗೆ ಐಶಾರಾಮಿ ಲುಕ್ ಕೂಡ ಇದರದ್ದಾಗಿದೆ.

ಇದೀಗ ಮಾರುತಿ ಕಂಪೆನಿ ಹೊಸ ಬ್ರೆಜಾ ಕಾರು ಬಿಡುಗಡೆ ಮಾಡುತ್ತಿದ್ದು, ಹೊರಗಿನ ಲುಕ್’ನಲ್ಲಿ ತುಸು ಬದಲಾವಣೆ ಮಾಡಿದೆ. ಈ ಹಿಂದಿನ ಬ್ರೆಜಾ ಕಾರಿಗಿಂತಲೂ ಈಗಿನ ಬ್ರೆಜಾ ಪ್ರೀಮಿಯಂ ಆಗಿ ಕಾಣುತ್ತಿದೆ. ಇಂಟೀರಿಯರ್’ನಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಕೆಲವು ಹೆಚ್ಚುವರಿ ತಂತ್ರಜ್ಞಾನ ಆಯ್ಕೆಗಳನ್ನು ನೀಡಲಾಗಿದೆ‌. ಒಳಾಂಗಣದ ಡಿಸೈ‌ನ್ ಮತ್ರು ಕಲರ್ ಸ್ಕೀಮ್’ನಲ್ಲಿಯೂ ಬದಲಾವಣೆ ಮಾಡಲಾಗಿದೆ.

ಎಲ್ಲದಕ್ಕಿಂತಲೂ ಮುಖ್ಯವಾಗಿ ಈ ಹೊಸ ಬ್ರೆಜಾದ ಮೈಲೇಜ್, ಬೈಕುಗಳ ಮೈಲೇಜ್ ನಷ್ಟಿದೆ. ಹೊಸ ಬ್ರೆಜಾ ಕಾರು ಒಂದು ಲೀಟರ್ ಇಂಧನಕ್ಕೆ 30 ಕಿ.ಮೀ ಮೈಲೇಜ್ ನೀಡಲಿದೆಯಂತೆ. 350 ಸಿಸಿ ಬೈಕುಗಳು ಸಹ ಇಷ್ಟು ಮೈಲೇಜ್ ನೀಡುವುದಿಲ್ಲ. ಹೊಸ ಬ್ರೆಜಾ ಹೊಸ ತಂತ್ರಜ್ಞಾನದ ಎಂಜಿನ್ ಹೊಂದಿರುವ ಜೊತೆಗೆ, ಈ ಕಾರು ಹೈಬ್ರಿಡ್ ಸಹ ಆಗಿರಲಿದೆ ಹಾಗಾಗಿ ಈ ಕಾರು ಅತಿ ಹೆಚ್ಚು ಮೈಲೇಜ್ ನೀಡಲಿದೆ. ಹೊಸ ಬ್ರೆಜಾ ಕಾರು 2025 ರ ಫೆಬ್ರವರಿ ಅಥವಾ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಗಲಿದೆ.

Royal Enfield: ರಾಯಲ್ ಎನ್’ಫೀಲ್ಡ್ ಬಿಡುಗಡೆ ಮಾಡಲಿದೆ ಕಡಿಮೆ ಬೆಲೆಯ ಬುಲೆಟ್, ಬೆಲೆ ಎಷ್ಟಿರಲಿದೆ?

ಮಾರುತಿ ಕಾರು ಕಳೆದ ಹಲವು‌ ದಶಕಗಳಿಂದಲೂ ಭಾರತದ ನಂಬರ್ 1 ಕಾರು ಮಾರಾಟ ಕಂಪೆನಿಯಾಗಿದೆ. ಮಾರುತಿಯ ಸ್ವಿಫ್ಟ್ ಕಾರು ಭಾರತದಲ್ಲಿ ಅತಿ ಹೆಚ್ಚು ಮಾರಾಟ ಆಗುವ ಕಾರಾಗಿದೆ.

Exit mobile version