Royal Enfield
ರಾಯಲ್ ಎನ್’ಫೀಲ್ಡ್ ಭಾರತೀಯರ ನೆಚ್ಚಿನ ಬೈಕ್. ಸ್ಪೆಲ್ಂಡರ್ ಹೊರತುಪಡಿಸಿದರೆ ಭಾರತದಲ್ಲಿ ಅತಿ ಹೆಚ್ಚು ಮಾರಾಟ ಆಗುತ್ತಿರುವುದು ರಾಯಲ್ ಎನ್’ಫೀಲ್ಡ್ ನ ಬೈಕುಗಳೇ. ಆದರೆ 350 ಮತ್ತು ಅದಕ್ಕೆ ಹೆಚ್ಚಿನ ಸಿಸಿ ಬೈಕುಗಳನ್ನಷ್ಟೆ ತಯಾರಿಸುವ ರಾಯಲ್ ಎನ್’ಫೀಲ್ಡ್ ತನ್ನ ಬೈಕುಗಳನ್ನು ದೊಡ್ಡ ಬೆಲೆಗೆ ಮಾರಾಟ ಮಾಡುತ್ತದೆ. ರಾಯಲ್ ಎನ್’ಫೀಲ್ಡ್ ನ 350 ಬುಲೆಟ್ ಬೆಂಗಳೂರಿನಲ್ಲಿ 2.30 ಲಕ್ಷಕ್ಕೆ ಕಡಿಮೆ ಇಲ್ಲ. ರಾಯಲ್ ಎನ್’ಫೀಲ್ಡ್ ಹಂಟರ್ ಬೇಕಿನ ಬೆಲೆಯೂ 2 ಲಕ್ಷ ಮುಟ್ಟುತ್ತದೆ.
ಆದರೆ ಈಗ ರಾಯಲ್ ಎನ್’ಫೀಲ್ಡ್ ಕಡಿಮೆ ಬೆಲೆಯ ಬೈಕ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ರಾಯಲ್ ಎನ್’ಫೀಲ್ಡ್ ಈ ವರೆಗೆ ಕೇವಲ 350 ಸಿಸಿ ಬೈಕುಗಳನ್ನಷ್ಟೆ ನಿರ್ಮಾಣ ಮಾಡಿದೆ. ಆದರೆ ಈಗ ಮೊದಲ ಬಾರಿಗೆ 250 ಸಿಸಿ ಬೈಕುಗಳನ್ನು ಮಾರುಕಟ್ಟೆಗೆ ತರಲಿದೆ. ವಿಶೇಷತೆಯೆಂದರೆ ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ 350 ಸಿಸಿ ರಾಯಲ್ ಎನ್’ಫೀಲ್ಡ್ ಬುಲೆಟ್’ಗಳಿಗೂ ಮುಂದೆ ಬರಲಿರುವ 250 ಸಿಸಿ ಬುಲೆಟ್ ಬೈಕುಗಳಿಗೂ ಡಿಸೈನ್’ನಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ.
250 ಸಿಸಿ ವಿಭಾಗದಲ್ಲಿ ಪ್ರಸ್ತುತ ಬಜಾಜ್’ನ ಪಲ್ಸರ್, ಟಿವಿಎಸ್ ಅಪಾಚೆ ಬೈಕುಗಳ ಪಾರುಪತ್ಯ ಇದೆ. ಆದರೆ ಈಗ ರಾಯಲ್ ಎನ್’ಫೀಲ್ಡ್ 250 ಸಿಸಿ ಬೈಕ್ ಸೆಗ್ಮೆಂಟ್’ಗೆ ಎಂಟ್ರೀ ನೀಡುತ್ತಿರುವುದು, ಬಜಾಜ್ ಹಾಗೂ ಟಿವಿಎಸ್ ಗಳಿಗೆ ನಡುಕ ಹುಟ್ಟಿಸಿದೆ. ರಾಯಲ್ ಎನ್’ಫೀಲ್ಡ್ ನ 250 ಬೈಕುಗಳು ನೋಡಲು 350 ಬೈಕುಗಳ ರೀತಿಯೇ ಕಾಣುತ್ತವೆಯಾದರೂ ಈ ಬೈಕುಗಳು ತೂಕದಲ್ಲಿ ಕಡಿಮೆ ಇರಲಿವೆ. ಕೆಲವು ಕಾಸ್ಟ್ ಕಟಿಂಗ್ ಅನ್ನು ರಾಯಲ್ ಎನ್’ಫೀಲ್ಡ್ ಮಾಡಲಿದೆ.
Royal Enfield: ರಾಯಲ್ ಎನ್’ಫೀಲ್ಡ್ ಹೊಸ ಬೈಕ್ ಬಿಡುಗಡೆ, ಬೆಲೆ ಎಷ್ಟು?
ರಾಯಲ್ ಎನ್’ಫೀಲ್ಡ್ ಸಾಮಾನ್ಯವಾಗಿ ಅದರ ಬೈಕ್’ಗಳ ಶಕ್ತಿ, ತೂಕ, ಭಾರಿ ಶಬ್ದಕ್ಕೆ ಜನಪ್ರಿಯ. 250 ಸಿಸಿ ತುಸು ಕಡಿಮೆ ತೂಲದ ಬೈಕ್ ಆಗಿರಲಿದ್ದು ಜನರಿಗೆ ಇದು ಇಷ್ಟ ಆಗಲಿದೆಯೇ ಕಾದು ನೋಡಬೇಕಿದೆ. ಅಂದಹಾಗೆ ರಾಯಲ್ ಎನ್’ಫೀಲ್ಡ್ 250 ಸಿಸಿ ಬೈಕಿನ ಬೆಲೆ ಸುಮಾರು 1.50 ಲಕ್ಷ ರೂಪಾಯಿಗಳು ಇರಲಿವೆ. ಇದರಲ್ಲಿ ಡಿಜಿಟಲ್ ಕ್ಲಸ್ಟರ್, ಎಬಿಎಸ್, ಭಿನ್ನ ರೈಡ್ ಮೋಡ್’ಗಳು ಸಹ ಇರಲಿವೆ. ರಾಯಲ್ ಎನ್’ಫೀಲ್ಡ್ 250 ಸಿಸಿ ಬೈಕುಗಳು ಮುಂದಿನ ವರ್ಷ ಬಿಡುಗಡೆ ಆಗಲಿವೆ.