Site icon Samastha News

Royal Enfield: ರಾಯಲ್ ಎನ್’ಫೀಲ್ಡ್ ಹೊಸ ಬೈಕ್ ಬಿಡುಗಡೆ, ಬೆಲೆ ಎಷ್ಟು?

Royal Enfield 650

Royal Enfield

ರಾಯಲ್ ಎನ್’ಫೀಲ್ಡ್ ಈಗಾಗಲೇ ಭಾರತೀಯ ಬೈಕ್ ಮಾರುಕಟ್ಟೆಯಲ್ಲಿ ರಾಜನಂತೆ ಮೆರೆಯುತ್ತಿದೆ. 350 ಮತ್ತು ಅದರ ಮೇಲಿನ ಸೆಕ್ಷನ್’ನಲ್ಲಿ ರಾಯಲ್ ಎನ್’ಫೀಲ್ಡ್ ಅನ್ನು ಮೀರಿಸುವವರು ಯಾರೂ ಇಲ್ಲ. ಈಗಾಗಲೇ ಹಲವು ಅತ್ಯುತ್ತಮ ಬೈಕ್’ಗಳನ್ನು ಬಿಡುಗಡೆ ಮಾಡಿರುವ ರಾಯಲ್ ಎನ್’ಫೀಲ್ಡ್ ಇದೀಗ ನವೆಂಬರ್ 5 ರಂದು ಹೊಸ ಬೈಕ್ ಬಿಡುಗಡೆಗೆ ಮುಂದಾಗಿದೆ.

ರಾಯಲ್ ಎನ್’ಫೀಲ್ಡ್ 650 ಸಿಸಿ ಸೆಕ್ಷನ್’ನಲ್ಲಿ ಇಂಟರ್ಸೆಪ್ಟರ್, ಮಿಟಿಯಾರ್ 650 ಅಂಥಹಾ ಕೆಲವು ರಗಡ್ ಗಾಡಿಗಳನ್ನು ಬಿಡುಗಡೆ ಮಾಡಿದೆ. ಇದೀಗ ಇದೇ 650 ಸಿಸಿ ಸೆಕ್ಷನ್’ನಲ್ಲಿ ಹೊಸ ಬೈಕ್ ಬಿಡುಗಡೆ ಮಾಡುತ್ತಿದೆ. ಬೈಕ್’ನ ಹೆಸರು ರಾಯಲ್ ಎನ್’ಫೀಲ್ಡ್ ಬಿಯರ್ 650. ಭಾರತದಲ್ಲೇ ತಯಾರಾಗುತ್ತಿರುವ ಈ ಬೈಕ್ ಇಲ್ಲಿಂದಲೆ ವಿಶ್ವದಾದ್ಯಂತ ಸರಬರಾಜಾಗಲಿದೆ.

ರಾಯಲ್ ಎನ್’ಫೀಲ್ಡ್ ಬಿಯರ್ 650 ಬೈಕ್ ನೇಕೆಡ್ ಸ್ಕ್ಯಾಂಬ್ಲರ್ ಮಾದರಿಯ ಬೈಕ್ ಆಗಿದ್ದು, ನೋಡಲು ಸರಳವಾಗಿಯೂ ಸುಂದರವಾಗಿಯೂ ಇದೆ. ರಾಯಲ್ ಎನ್’ಫೀಲ್ಡ್ ನ ಬುಲೆಟ್, ಮಿಟಿಯಾರ್, ಹಿಮಾಲಾಯ ಗಳಿಗೆ ಹೋಲಿಸಿದರೆ ಅಷ್ಟು ಬೃಹತ್, ಮಾಚೋ ಅನುಬನವ ನೀಡದ ಈ ಬೈಕ್ ಸರಳವಾಗಿ ಕಂಡರು ಶಕ್ತಿಯುತವಾಗಿದೆ.

Book Taxi: ಬೆಂಗಳೂರು ವಾಸಿಗಳಿಗೆ ಭರ್ಜರಿ ಆಫರ್​ ಕೊಟ್ಟ ರೆಫೆಕ್ಸ್ ಇ-ವೀಲ್ಜ್

ಸಿಂಗಲ್ ಸಿಲಿಂಡರ್ ಬೈಕ್ ಇದಾಗಿರಲಿದ್ದು, ರಾಯಲ್ ಎನ್’ಫೀಲ್ಡ್ ತನ್ನ ರಗಡ್ ಕಲರ್ ಗಳನ್ನು ಅಂದರೆ ಗಾಡ ಕಪ್ಪು, ಕೆಂಪು, ಸಿಲ್ವರ್ ಅನ್ನು ತದಯಜಿಸಿ ತುಸು ಫನ್ ಮಾದರಿಯ ಕಲರ್ ಮತ್ತು ಸ್ಟಿಕ್ಕರ್ ಡಿಸೈನ್ ಅನ್ನು ಈ ಬೈಕ್ ಮೇಲೆ ಪ್ರಯೋಗಿಸಿದೆ. ಈ ಬೈಕ್ 350 ಹಂಟರ್ ರೀತಿಯ ಕಲರ್‌ ಮತ್ತು ಡಿಸೈನ್ ಅನ್ನು ಒಳಗೊಂಡಿದೆ. ಇದರ ಬೆಲೆ ಇಂದು ಬೈಕ್ ಬಿಡುಗಡೆ ವೇಳೆಯೇ ಬೆಲೆಯನ್ನು ಬಹಿರಂಗಪಡಿಸಲಿದೆ ಕಂಪೆನಿ. ಆದರೆ ಕೆಲ ಊಹೆಗಳ ಪ್ರಕಾರ ಬೈಕ್’ನ ಬೆಲೆ 3 ಲಕ್ಷದಿಂದ 3.50 ರ ಒಳಗೆ ಇರಲಿದೆ ಎನ್ನಲಾಗುತ್ತಿದೆ.

ಈ ಬೈಕ್ ಐದು ಬಣ್ಣಗಳಲ್ಲಿ ಲಭ್ಯವಿದ್ದು ನೋಡಲು ತುಸು ಟ್ರಯಂಫ್ ಸ್ಕ್ರ್ಯಾಂಬ್ಲರ್ 400 ರೀತಿ ಕಾಣುತ್ತದೆ. ಆದರೆ ಹಿಂಬದಿ ಡ್ಯುಯೆಲ್ ಸಸ್ಪೆನ್ಷನ್ ಇದೆ, ಟ್ರಯಂಫ್ ನಲ್ಲಿ ಮೊನೊ ಶ್ಪೆನ್ಷನ್ ಇದೆ.

Exit mobile version