Maruti Suzuki
ಕೆಲ ವರ್ಷಗಳ ಹಿಂದಿನ ವರೆಗೆ ಪುಟ್ಟ ಹ್ಯಾಚ್ ಬ್ಯಾಕ್ ಕಾರುಗಳು ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿದ್ದವು. ಆದರೆ ಎಸ್’ಯುವಿ, ಮಿನಿ ಎಸ್’ಯುವಿ ಮಾದರಿ ಕಾರುಗಳ ಆಗಮನವಾದ ಬಳಿಕ ಭಾರತೀಯ ಕಾರು ಖರೀದಿದಾರನ ಯೋಚನಾ ಲಹರಿ ಬದಲಾಗಿದೆ. ಕಡಿಮೆ ಹಣಕ್ಕೆ ಮಿನಿ ಎಸ್’ಯುವಿ ಅಥವಾ ಕಾಂಪ್ಯಾಕ್ಟ್ ಎಸ್’ಯುವಿ ದೊರಕುತ್ತಿರುವಾಗ ಆ ಪುಟ್ಟ ಹ್ಯಾಚ್’ಬ್ಯಾಕ್ ಕಾರನ್ನು ಏಕೆ ಖರೀದಿಸಬೇಕು ಎಂಬ ನಿಲವು ಆತನದ್ದು. ಭಾರತೀಯ ಗ್ರಾಹಕನ ರುಚಿಗೆ ಅನುಗುಣವಾಗಿ ಕಡಿಮೆ ದರದಲ್ಲಿ ಹಲವು ಎಸ್’ಯುವಿಗಳು ಲಭ್ಯವಿವೆ.
ಭಾರತದ ನಂಬರ್ 1 ಕಾರು ನಿರ್ಮಾಣ ಸಂಸ್ಥೆ ಮಾರುತಿಯ ಬ್ರಿಜಾ ಒಂದು ಉತ್ತಮ ಎಸ್’ಯುವಿ ಸೆಗ್ಮೆಂಟ್ ಕಾರು ಎನ್ನಬಹುದು. ಬೆಲೆಯೂ ಕಡಿಮೆ, ವಿನ್ಯಾಸ ಸಹ ಪಕ್ಕಾ ಎಸ್’ಯುವಿ ಅನ್ನು ಹೋಲುತ್ತದೆ. ಟಾಟಾ ಪಂಚ್, ಹ್ಯುಂಡಾಯ್ ವೆನು ರೀತಿ ರೀತಿ ಚಿಕ್ಕ ಗಾಡಿಯಲ್ಲ, ಗಾಡಿ ಓಡಿಸಿದರೆ ನಿಜಕ್ಕೂ ಎಅ್’ಯುವಿ ಓಡಿಸುತ್ತಿರುವ ಫೀಲ್ ಬರುತ್ತದೆ. ಬ್ರೆಜಾ ಒಳ್ಳೆ ಗಾಡಿಯೇನೋ ಹೌದು ಆದರೆ ಕೆಲ ತಿಂಗಳ ಹಿಂದೆ ಈ ಕಾರಿಗೆ ಪ್ರಬಲ ಪ್ರತಿಸ್ಪರ್ಧಿ ಮಾರುಕಟ್ಟೆಗೆ ಬಂದಿದೆ. ಅದುವೇ ಮಹೀಂದ್ರಾ ಎಕ್’ಯುವಿ 3ಎಕ್ಸ್ಓ.
ಮಹೀಂದ್ರಾ ಈಗಾಗಲೇ ತನ್ನ ಎಕ್’ಯುವಿ 700 ಮೂಲಕ ಹವಾ ಎಬ್ಬಿಸಿದೆ. ಈಗ ಅದೇ ಕಾರನ್ನು ತುಸು ತಗ್ಗಿಸಿ, ಕುಗ್ಗಿಸಿ ಎಕ್’ಯುವಿ 3ಎಕ್ಸ್ಓ ಬಿಡುಗಡೆ ಮಾಡಿದೆ. ಮಾರುತಿ ಬ್ರೆಜಾ ಹಾಗೂ ಎಕ್’ಯುವಿ 3ಎಕ್ಸ್ಓ ಬೆಲೆಯಿಂದ ಹಿಡಿದು ಹಲವು ವಿಭಾಗಗಲ್ಲಿ ಪರಸ್ಪರ ಎದುರು-ಬದುರು ನಿಂತು ಸ್ಪರ್ಧೆ ಮಾಡುತ್ತವೆ. ಹಾಗಾಗಿ ಕಡಿಮೆ ಬೆಲೆಯಲ್ಲಿ ಎಸ್’ಯುವಿ ಕಾರು ಕೊಳ್ಳಲು ಮುಂದಾಗುವರು ಈ ಎರಡು ಕಾರುಗಳನ್ನು ಗಣೆನೆಗೆ ತೆಗೆದುಕೊಂಡು ಅಳೆದು ನೋಡುವುದು ಹೆಚ್ಚು ಸೂಕ್ತ.
ಮೇಲ್ನೋಟಕ್ಕೆ ಎರಡು ಕಾರುಗಳು ಒಂದೇ ಎನಿಸುತ್ತದೆ. ಆದರೆ ಆನ್ ಪೇಪರ್ ನೋಡಿದರೆ ಎರಡೂ ಕಾರುಗಳು ನಡುವೆ ಇರುವ ಭಿನ್ನತೆ ಎಷ್ಟೆಂಬುದು ತಿಳಿಯುತ್ತದೆ. ಬ್ರೆಜಾ ಹಾಗೂ ಎಕ್’ಯುವಿ 3ಎಕ್ಸ್ಓ ಕಾರಿನ ಉದ್ದ-ಅಗಲ-ಎತ್ತರಗಳಲ್ಲಿ ಹೆಚ್ಚಿನ ವ್ಯತ್ಯಾಸವೇನಿಲ್ಲ. ಉದ್ದ ಮತ್ತು ಎತ್ತರದಲ್ಲಿ ಬ್ರೆಜಾ ತುಸು ಹೆಚ್ಚಿದೆ, ಅಗಲದಲ್ಲಿ ಎಕ್’ಯುವಿ 3ಎಕ್ಸ್ಓ ಹೆಚ್ಚಿದೆ. ಬ್ರಜಾಗಿಂತಲೂ, ಎಕ್’ಯುವಿ 3ಎಕ್ಸ್ಓ ನಲ್ಲಿ ಲಗೇಜು ಇಡಲು ತುಸುವಷ್ಟೆ ಹೆಚ್ಚು ಸ್ಥಳ ಸಿಗುತ್ತೆ.
ಎರಡು ಕಾರುಗಳನ್ನು ಪ್ರತ್ಯೇಕ ಮಾಡುವುದು ಎರಡು ಪ್ರಮುಖ ಅಂಶಗಳು, ಮೊದಲನೆಯದ್ದು ಎಂಜಿನ್’ನ ಶಕ್ತಿ ಎರಡನೇಯದ್ದು ಕಾರಿನ ಒಳಗಿರುವ ಸುರಕ್ಷತೆ ಆಯ್ಕೆಗಳು. ಎಂಜಿನ್ ಪವರ್ ವಿಚಾರದಲ್ಲಿ ಮಾರುತಿ ಬ್ರೆಜಾ ಸ್ಪಷ್ಟವಾಗಿ ಗೆಲುವು ಸಾಧಿಸುತ್ತದೆ. ಬ್ರೆಜಾನಲ್ಲಿ 1422 ಸಿಸಿ, 4 ಸಿಲಿಂಡರ್ ಎಂಜಿನ್ ಇದೆ. ಎಕ್’ಯುವಿ 3ಎಕ್ಸ್ಓ ನಲ್ಲಿ 1197 ಸಿಸಿ 3 ಸಿಲಿಂಡರ್ ಎಂಜಿನ್ ಇದೆ. ಬ್ರಜಾ 6000 ಆರ್’ಪಿಎಂನಲ್ಲಿ 103 ಬಿಎಚ್’ಪಿ ಶಕ್ತಿ ಉತ್ಪಾದಿಸಿದರೆ, ಮಹಿಂದ್ರಾದ್ದು 5000 ಆರ್’ಪಿಎಂ, 82 ಬಿಎಚ್’ಪಿ ಕೆವಿ ಶಕ್ತಿ ಉತ್ಪಾದಿಸುತ್ತದೆ. ಬ್ರೆಜಾ 4000 ಆರ್’ಪಿಎಂನಲ್ಲಿ 130 ಎನ್ಎಂ ಟಾರ್ಕ್ ಜನರೇಟ್ ಮಾಡಿದರೆ ಎಕ್’ಯುವಿ 3ಎಕ್ಸ್ಓ 200 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಬ್ರೆಜಾನಲ್ಲಿ 5 ಗೇರು ಇದ್ದರೆ, ಎಕ್’ಯುವಿ 3ಎಕ್ಸ್ಓ ನಲ್ಲಿ 6 ಗೇರುಗಳಿವೆ.
Mahindra car: ಹೊಸ ಕಾರು ತಂದ ಬಾಲಿವುಡ್ ಸ್ಟಾರ್ ನಟ, ನಾವು-ನೀವು ಕೊಳ್ಳಬಹುದು ಈ ಕಾರನ್ನು
ಇನ್ನು ಸೇಫ್ಟಿ ಮತ್ತು ತಂತ್ರಜ್ಞಾನದ ಆಯ್ಕೆಗಳ ವಿಷಯಕ್ಕೆ ಬಂದರೆ ಎಕ್’ಯುವಿ 3ಎಕ್ಸ್ಓ, ಬ್ರೆಜಾಗಿಂತ ತುಸುವಷ್ಟೆ ಮುಂದೆ ನಿಲ್ಲುತ್ತದೆ. ಮಹೀಂದ್ರಾ ತನ್ನ ಎಲ್ಲ ಕಾರುಗಳಲ್ಲಿ ಉತ್ತಮ ತಂತ್ರಜ್ಞಾನ ಮತ್ತು ಸೇಫ್ಟಿ ಫೀಚರ್’ಗಳನ್ನು ನೀಡಿದೆ. ಬ್ರೆಜಾ ಸಹ ಹೊಸ ಮಾಡೆಲ್’ನಲ್ಲಿ 360 ಕ್ಯಾಮೆರಾ, 6 ಏರ್ಬ್ಯಾಗ್ ಗಳನ್ನು ನೀಡಿದೆ.ಎಕ್’ಯುವಿ 3ಎಕ್ಸ್ಓ ನಲ್ಲಿ ಕಡಿಮೆ ದರದಲ್ಲಿಯೇ ಮೇಲಿನ ಆಯ್ಕೆಗಳಜೊತೆಗೆ ಹಿಲ್ ಅಸಿಸ್ಟ್, ಡಿಸೆಂಟ್ ಕಂಟ್ರೋಲ್ ಗಳನ್ನು ಸಹ ನೀಡಿದೆ.