Maruti Suzuki
ಮಾರುತಿ ಸುಜುಕಿ ಭಾರತದ ನಂಬರ್ 1 ಕಾರು ಉತ್ಪಾದಕ ಹಾಗೂ ಮಾರಾಟ ಸಂಸ್ಥೆ. ಮಾರುತಿಯ ಕಾರುಗಳ ಅರ್ಧದಷ್ಟು ಸಹ ಬೇರೆ ಸಂಸ್ಥೆಯ ಕಾರುಗಳು ಮಾರಾಟವಾಗುವುದಿಲ್ಲ. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಈ ಅಂತರ ಕಡಿಮೆ ಆಗುತ್ತಿದೆಯಾದರೂ ಈಗಲೂ ಮಾರುತಿಯೇ ಭಾರತದಲ್ಲಿ ನಂಬರ್ 1. ಮಾರುತಿ ಕೆಲವು ಅತ್ಯುತ್ತಮ ವಿನ್ಯಾಸ, ಕಂಫರ್ಟ್ ಹೊಂದಿರುವ ಕಾರುಗಳನ್ನು ಮಾರುಕಟ್ಟೆಗೆ ತಂದಿದೆ. ಆದರೆ ಇತ್ತೀಚೆಗೆ ಯಾಕೋ ಮಾರುತಿ, ತನ್ನ ಕಾರುಗಳ ವಿನ್ಯಾಸದ ಮೇಲೆ ಆಸಕ್ತಿ ಕಳೆದುಕೊಂಡಂತೆ ಕಾಣುತ್ತಿದೆ.
ಮಾರುತಿ, ಕಡಿಮೆ ಬಜೆಟ್ ಕಾರು ವಿಭಾಗದಲ್ಲಿ ರಾಜನಾಗಿ ಮೆರೆಯುತ್ತಿದೆ. ಆದರೆ ಟಾಟಾ, ಸೀಟ್ರನ್, ಕಿಯಾ, ಹ್ಯುಂಡೈ ಗಳಿಂದ ಈ ವಿಭಾಗದಲ್ಲಿ ತುಸು ಪ್ರತಿಸ್ಪರ್ಧೆ ಎದುರಿಸುತ್ತಿದೆ. ವಿಶೇಷವಾಗಿ ಟಾಟಾ ಸಂಸ್ಥೆಯ ಕಡಿಮೆ ಬಜೆಟ್ ನ ಪಂಚ್ ಮತ್ತು ನೆಕ್ಸಾನ್ ಕಾರುಗಳು ಮಾರುತಿಗೆ ತುಸು ಪ್ರತಿಸ್ಪರ್ಧೆ ಒಡ್ಡುತ್ತಿವೆ. ಅದರಲ್ಲೂ ಪಂಚ್ ಕಾರಿಗೆ ಮಾರುತಿ ಬಳಿ ಎದುರಾಳಿಯೇ ಇಲ್ಲದಂತಾಗಿದೆ. ಇದೇ ಕಾರಣಕ್ಕೆ ಇದೀಗ ಪಂಚ್ ಕಾರಿಗೆ ಎದುರಾಳಿಯಾಗಿ ‘ಹಸ್ಟ್ಲರ್ ಸ್ಪೈಡ್’ ಹೆಸರಿನ ಕಾರು ಬಿಡುಗಡೆ ಮಾಡಲು ಮುಂದಾಗಿದೆ.
ಮಿನಿ SUV ಸೆಗ್ಮೆಂಟ್ ನಲ್ಲಿ ಈ ಕಾರು ಬಿಡುಗಡೆ ಮಾಡಲು ಮಾರುತಿ ಸಂಸ್ಥೆ ಮುಂದಾಗಿದ್ದು, ಕಾರಿನ ಪರೀಕ್ಷಾರ್ಥ ಚಾಲನೆ ನಡೆಸಲಾಗುತ್ತಿದೆ. ಕಾರಿನ ಕೆಲವು ಚಿತ್ರಗಳು, ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೋಡಿದವರು ಇದೆಂಥಹಾ ಕಾರು ಎಂದು ಮೂಗು ಮುರಿಯುತ್ತಿದ್ದಾರೆ. ಈ ಕಾರಿನ ವಿನ್ಯಾಸದ ಮೇಲೆ ಮಾರುತಿ ಹೆಚ್ಚೇನು ಶ್ರಮ ಹಾಕಿದಂತಿಲ್ಲ. ವ್ಯಾಗನಾರ್ ನ ವಿನ್ಯಾಸಕ್ಕೆ ತುಸು ಬದಲಾವಣೆ ಮಾಡಿ ಹಸ್ಟ್ಲರ್ ಕಾರಿಗೆ ಬಳಸಿಕೊಳ್ಳಲಾಗಿದೆ. ಮಾಡಲಾಗಿರುವ ಬದಲಾವಣೆಯೂ ಅಷ್ಟೇನೂ ಗಮನ ಸೆಳೆಯುತ್ತಿಲ್ಲ.
Refex Eveelz: ಎಂಜಿ ಜೊತೆ ಕೈಜೋಡಿಸಿದ ಬೆಂಗಳೂರಿನ ಜನಪ್ರಿಯ ಟ್ಯಾಕ್ಸಿ ಸಂಸ್ಥೆ
ಮಾರುತಿ ಸುಜುಕಿಯ ಹಸ್ಟ್ಲರ್ ಕಾರು ಕೆಲವೇ ತಿಂಗಳುಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಆಗಲಿದೆ. ಕೆಲ ತಿಂಗಳ ಹಿಂದಷ್ಟೆ ಮಾರುತಿಯ ಗೂರ್ಖ ಕಾರು ಬಿಡುಗಡೆ ಆಗಿತ್ತು. ಆ ಕಾರು ಬಿಡುಗಡೆಗೆ ಮುನ್ನ ಹೈಪ್ ಸೃಷ್ಟಿಸಿತ್ತು, ಆದರೆ ಬಿಡುಗಡೆ ಬಳಿಕ ಕಾರಿನ ವಿನ್ಯಾಸದ ಬಗ್ಗೆ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದರು. ಜಿಪ್ಸಿ ವಿಷಯದಲ್ಲಿಯೂ ಹೀಗೆಯೇ ಆಯ್ತು. ಸ್ವಿಫ್ಟ್, ಬಲಿನೊ, ಬ್ರಿಜಾ, ಎರ್ಟಿಗಾ, ಗ್ರ್ಯಾಂಡ್ ವಿಟಾರ ಅಂಥಹಾ ಕೆಲವು ಅತ್ಯುತ್ತಮ ವಿನ್ಯಾಸದ ಕಾರುಗಳನ್ನು ಬಿಡುಗಡೆ ಮಾಡಿರುವ ಮಾರುತಿಣ ಇತ್ತೀಚೆಗೆ ಬಿಡುಗಡೆ ಮಾಡುತ್ತಿರುವ ಕಾರುಗಳ ವಿನ್ಯಾಸದ ಬಗ್ಗೆ ಹೆಚ್ಚು ಗಮನ ಹರಿಸುತ್ತಿಲ್ಲ ಎನಿಸುತ್ತದೆ.