Site icon Samastha News

Personal Finance: ಖಾತೆಯಲ್ಲಿರಲಿ ಹಣ, ಬರುತ್ತಿದೆ ಹೂಡಿಕೆಗೆ ಸುವರ್ಣಾವಕಾಶ

Personal Finance

Personal Finance

ಹಣದ ಹೂಡಿಕೆಗೆ ಈಗ ಸಾಕಷ್ಟು ಹೊಸ ಅವಕಾಶಗಳು ಸೃಷ್ಟಿಯಾಗಿವೆ, ಮಾತ್ರವಲ್ಲದೆ ಹೂಡಿಕೆ ಹಿಂದೆಂದಿಗಿಂತಲೂ ಸರಳವೂ ಆಗಿದೆ. ಅದರಲ್ಲೂ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಅತ್ಯಂತ ಸುಲಭವಾಗಿದೆ. ವೈಯಕ್ತಿಕ ಶಿಸ್ತು, ಸಾಮಾನ್ಯ ಎಚ್ಚರಿಕೆ ಇದ್ದರೂ ಸಾಕು ಷೇರು ಮಾರುಕಟ್ಟೆ ಹೂಡಿಕೆಯಲ್ಲಿ ಒಳ್ಳೆಯ ಲಾಭ ಗಳಿಸಬಹುದು. ಷೇರು ಮಾರುಕಟ್ಟೆಯಲ್ಲಿ ಹೊಸದಾಗಿ ಹೂಡಿಕೆ ಮಾಡಲಿಚ್ಛಿಸುವವರಿಗೆ ಸುವರ್ಣಾವಕಾಶವೊಂದು ಬರುತ್ತಿದೆ.

ಮಾರುಕಟ್ಟೆ ಕಳೆದ ಒಂದು ತಿಂಗಳಿನಿಂದಲೂ ಸಾಕಷ್ಟು ಏರಿಳಿತಗಳನ್ನು ಕಾಣುತ್ತಿದೆ‌. ಈ ಏರಿಳಿತಕ್ಕೆ ಲೋಕಸಭೆ ಚುನಾವಣೆ ಮುಖ್ಯ ಲಾರಣ ಎನ್ನಲಾಗುತ್ತಿದೆ. ಇಂದು (ಮೇ 09 ) ಷೇರು ಮಾರುಕಟ್ಟೆ ತೀವ್ರ ಕುಸಿತ ಕಂಡಿದೆ. ನಿಫ್ಟಿ 345 ಪಾಯಿಂಟ್ಸ್ ಕುಸಿದಿದ್ದರೆ, ಸೆನ್ಸೆಕ್ಸ್ 1062 ಪಾಯಿಂಟ್ಸ್ ಕುಸಿದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ಪರಿಣತರು ಊಹಿಸಿದ್ದಾರೆ.

ಅತ್ಯಂತ ಪ್ರಬಲ ಕಾರಣವಿಲ್ಲದೆ  ಷೇರು ಮಾರುಕಟ್ಟೆ ಕುಸಿದಾಗ ಹೊಸ ಹೂಡಿಕೆದಾರರಿಗೆ ಅದು ದೊಡ್ಡ ಲಾಭ ಗಳಿಸುವ ಅವಕಾಶ ಸೃಷ್ಟಿಯಾದಂತೆ. ಇಂದು ಕುಸಿದಿರುವ ಮಾರುಕಟ್ಟೆ ತನ್ನ ಕರಡಿಯಾಟ (ಕುಸಿತ)ವನ್ನು ಇನ್ನಷ್ಟು ದಿನ ಮುಂದುವರೆಸುವ ಸಣ್ಣ ಸೂಚನೆಯನ್ನು ನೀಡಿದೆ. ಒಂದೊಮ್ಮೆ ಮುಂದಿನ ವಾರವೂ ಇದೇ ರೀತಿ ಕುಸಿತ ಮುಂದುವರೆದಲ್ಲಿ ಹೊಸ ಹೂಡಿಕೆದಾರರು ಲಾಭದ ಗ್ಯಾರೆಂಟಿ ಇಟ್ಟುಕೊಂಡೇ ಮಾರುಕಟ್ಟೆ ಪ್ರವೇಶಿಸಬಹುದಾಗಿದೆ.

Royal Enfield: ರಾಯಲ್ ಎನ್​ಫೀಲ್ಡ್ ಗೆ ಠಕ್ಕರ್ ಕೊಡುತ್ತಿದೆ ಈ ಬೈಕ್: ಅದೇ ಬೆಲೆ, ಹೆಚ್ಚು ಪವರ್

ಈಗ ಮಾರುಕಟ್ಟೆ ಕುಸಿತ ಕಾಣುತ್ತಿರುವುದಕ್ಕೆ ಲೋಕಸಭೆ ಚುನಾವಣೆಯೇ ಮುಖ್ಯ ಕಾರಣ ಎನ್ನಲಾಗುತ್ತಿದೆ. ವಿದೇಶಿ ಹಾಗೂ ಭಾರತದ ಪ್ರಮುಖ ಹೂಡಿಕೆದಾರರಲ್ಲಿ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಗೊಂದಲ ಮೂಡಿರುವ ಕಾರಣ ಷೇರು ಪೇಟೆ ಕುಸಿಯುತ್ತಿದೆ ಎನ್ನಲಾಗುತ್ತಿದೆ‌. ಇದರ ಜೊತೆಗೆ ಇನ್ನೂ ಕೆಲವು ಕಾರಣಗಳನ್ನು ವಿಶ್ಲೇಷಕರು ಗುರುತಿಸಿದ್ದಾರೆ. ಜೊತೆಗೆ ಹೂಡಿಕೆಗೆ ಉತ್ತಮ ಸಮಯ ಹತ್ತಿರವಿದೆ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ.

Exit mobile version