Micro Car
ಕಾರುಗಳಿಗಿಂತಲೂ ದುಬಾರಿಯಾದ ಎಷ್ಟೋ ಕಾರುಗಳು ಮಾರುಕಟ್ಟೆಯಲ್ಲಿವೆ, ಎಷ್ಟೇ ಲಕ್ಷಾಂತರ ರೂಪಾಯಿ ಹಣ ಕೊಟ್ಟರೂ ಸಹ ಕಾರು ಕೊಡುವ ಸುರಕ್ಷತೆ, ಆರಾಮದಾಯಕ ಪ್ರಯಾಣ, ಐಶಾರಾಮಿ ಅನುಭವವನ್ನು ಬೈಕ್ ಗಳು ಕೊಡುವುದಿಲ್ಲ. ಇದೇ ಕಾರಣಕ್ಕೆ ಎಷ್ಟೋ ಮಂದಿ ತುಸು ಬೆಲೆ ಹೆಚ್ಚಾದರೂ ಪರವಾಗಿಲ್ಲವೆಂದು ಕಾರು ಖರೀದಿಗೆ ಮುಂದಾಗುತ್ತಾರೆ. ಆದರೆ ಇದೀಗ ಬೆಂಗಳೂರಿನ ಸಂಸ್ಥೆಯೊಂದು ಬೈಕಿನ ಬೆಲೆಗೆ, ಬೈಕನ್ನೇ ಹೋಲುವ ಕಾರನ್ನು ತಯಾರಿಸಿದೆ!
ಪ್ರಣವ್ ಹಾಗೂ ಪ್ರಕಾಶ್ ಹೆಸರಿನ ಬೆಂಗಳೂರಿನ ಅಪ್ಪ ಮಕ್ಳಳು ತಮ್ಮ ವಿಂಗ್ಸ್ ಇವಿ ಸಂಸ್ಥೆಯ ಮೂಲಕ ಮೈಕ್ರೊ ಕಾರುಗಳನ್ನು ತಯಾರು ಮಾಡಿದ್ದಾರೆ. ಇಬ್ಬರು ಮಾತ್ರ ಪ್ರಯಾಣ ಮಾಡಬಹುದಾದ ಈ ಮೈಕ್ರೊ ಕಾರು ಬೈಕ್ ಗಿಂತಲೂ ತುಸುವೇ ಅಗಲ ಇದೆ. ಆಟೋಗಿಂತಲೂ ಚಿಕ್ಕದಾಗಿದೆ. ಬೈಕ್ ನಷ್ಟೆ ಸ್ಥಳಾವಕಾಶ ಬೇಡುವ ಈ ಮೈಕ್ರೋ ಕಾರಿಗೆ ನಾಲ್ಕು ಚಕ್ರಗಳಿದ್ದು, ಪೆಟ್ರೋಲ್ ಬದಲಿಗೆ ಈ ಕಾರು ವಿದ್ಯುತ್ ಚಾಲಿತವಾಗಿದೆ.
ಪ್ರಕಾಶ್ ಮತ್ತು ಪ್ರಣವ್ ತಂದೆ-ಮಗನ ಜೋಡಿ ತಮ್ಮ ಮೈಕ್ರೋ ಕಾರಿಗೆ ರಾಬಿನ್ ಎಂದು ಹೆಸರಿಟ್ಟಿದ್ದಾರೆ. ಕಂಪ್ಯೂಟರ್ ಸೈನ್ಸ್ ನಲ್ಲಿ ಪಿಎಚ್ ಡಿ ಮಾಡಿರುವ ಪ್ರಣವ್ ಈ ರಾಬಿನ್ ಮೈಕ್ರೋ ಕಾರಿನ ಹಿಂದಿನ ಪ್ರಮುಖ ಶಕ್ತಿಯಾಗಿದ್ದು ಈ ಕಾರು ARAI ನಡೆಸಿದ ಎಲ್ಲ ಸುರಕ್ಷತಾ ಪರೀಕ್ಷೆಗಳನ್ನು ದಾಟಿ ಯಶಸ್ವಿಯಾಗಿದೆ ಎಂದಿದ್ದಾರೆ. ಇಂಧೋರ್ ನಲ್ಲಿ ಈ ಕಾರಿನ ನಿರ್ಮಾಣ ಘಟಕವನ್ನು ಸ್ಥಾಪಿಸಲಾಗಿದ್ದು, ಈ ನಿರ್ಮಾಣ ಘಟಕದಲ್ಲಿ ಒಂದು ವರ್ಷಕ್ಕೆ 10 ಸಾವಿರ ಕಾರುಗಳನ್ನು ತಯಾರಿಸಬಹುದಾಗಿದೆ.
Ethanol: ಶೀಘ್ರವೇ ಬರಲಿವೆ ಎಥೆನಾಲ್ ಚಾಲಿತ ವಾಹನಗಳು, ಸಚಿವ ಗಡ್ಕರಿ ವಿಶ್ವಾಸ
ಈ ಕಾರಿನ ಮಾದರಿಗಳಷ್ಟೆ ಈಗ ತಯಾರಾಗಿದ್ದು, 2025 ರ ಆರಂಭದಲ್ಲಿ ಈ ಕಾರು ಮಾರುಕಟ್ಟೆಯಲ್ಲಿ ಲಾಂಚ್ ಆಗಲಿದೆ. ವಿಶೇಷವಾಗಿ ಈ ಕಾರು ಮೊದಲಿಗೆ ಬೆಂಗಳೂರಿನಲ್ಲೇ ಲಾಂಚ್ ಆಗಲಿದೆ. ಆ ನಂತರ ಅದೇ ವರ್ಷ ಚೆನ್ನೈ, ಹೈದರಾಬಾದ್, ಪುಣೆಗಳಲ್ಲಿಯೂ ಲಾಂಚ್ ಆಗಲಿದೆ. ಅಂದಹಾಗೆ ಈ ಕಾರಿನ ಬೆಲೆಯಲ್ಲಿ ಕಡಿಮೆ ಇಡುವ ಬಗ್ಗೆ ಪ್ರಣವ್ ಹಾಗೂ ಪ್ರಕಾಶ್ ನಿರ್ಧರಿಸಿದ್ದು, 2 ಲಕ್ಷ, 2.50 ಲಕ್ಷ ಎರಡು ಬೆಲೆಯ ಎರಡು ಪ್ರತ್ಯೇಕ ಮಾಡೆಲ್ ಗಳನ್ನು ಮಾರುಕಟ್ಟೆಗೆ ತರುವ ಆಲೋಚನೆ ತಂದೆ-ಮಗನಿಗೆ ಇದೆ.
ಭಾರತದ ಮಾತ್ರವೇ ಅಲ್ಲದೆ ವಿಶ್ವದ ಟೆಕ್ ಹಾಗೂ ಬ್ಯುಸಿನೆಸ್ ಹಬ್ ಆಗಿರುವ ಸಿಲಿಕಾನ್ ವ್ಯಾಲಿಯಲ್ಲಿ ಕೆಲವರಿಂದ ದೊಡ್ಡ ಮೊತ್ತದ ಹೂಡಿಕೆ ಹಣವನ್ನು ಈ ತಂದೆ-ಮಗ ತೆಗೆದುಕೊಂಡು ಬಂದಿದ್ದು, ತಮ್ಮ ಪ್ರಾಡಕ್ಟ್ ಅನ್ನು ಜನಪ್ರಿಯಗೊಳಿಸುವ ಇರಾದೆಯಲ್ಲಿದ್ದಾರೆ. ಈ ಮೈಕ್ರೋ ಕಾರು ಜನಪ್ರಿಯವಾದರೆ ಬೈಕುಗಳ ಜಮಾನ ಮುಗಿಯುತ್ತದೆ.