Mike Tyson: 58ನೇ ವಯಸ್ಸಿನಲ್ಲಿ ಬಾಕ್ಸಿಂಗ್ ಅಖಾಡಕ್ಕೆ ಮರಳಿದ ಮೈಕ್ ಟೈಸನ್

0
246
Mike Tyson

Mike Tyson

ಮೈಕ್ ಟೈಸನ್ ಜಗತ್ತು ಕಂಡ ಶ್ರೇಷ್ಟ ಬಾಕ್ಸಿಮಗ್ ಪಟು. ತನ್ನ ಯೌವ್ವನದ ಸಮಯದಲ್ಲಿ ಮೈಟ್ ಟೈಸನ್ ಯಮನಿಗೂ ನಡುಕ ಹುಟ್ಟುವಂತೆ ಬಾಕ್ಸಿಂಗ್ ಮಾಡುತ್ತಿದ್ದರು. ಟೈಸನ್ ಬಾಕ್ಸಿಂಗ್ ರಿಂಗ್ ಗೆ ಬಂದು ಎದುರು ನಿಂತರೆ ಸಾಕು ಎದುರಾಳಿಗಳ ಕಾಲುನಡುಕುತ್ತಿದ್ದವು. ಬಾಕ್ಸಿಂಗ್ ರಿಂಗ್ ನ ಒಳಗೆ ಹಾಗೂ ಹೊರಗೆ ಸಹ ಟೈಸನ್ ಬಹಳ‌ ಅಗ್ರೆಸ್ಸಿವ್ ಆಗಿದ್ದರು. ಆದರೆ ಈಗ ಕಾಲ ಬದಲಾಗಿದೆ ಟೈಸನ್ ಗೆ ಈಗ 58 ವರ್ಷ ವಯಸ್ಸು. ಬಾಕ್ಸಿಂಗ್ ರಿಂಗ್ ಬಿಟ್ಟು 19 ವರ್ಷಗಳಾಗಿವೆ. ಆದರೆ ಈಗ ಟೈಸನ್ ಮರಳಿ ಬಾಕ್ಸಿಂಗ್ ರಿಂಗ್ ಗೆ ಬರುತ್ತುದ್ದಾರೆ.

ಜೋ ರೋಗನ್ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ್ದ ಟೈಸನ್ ಈಗ ನಾನು ಹಳೆಯ ಟೈಸನ್ ಅಲ್ಲ. ಹೊಡೆದಾಟಗಳು ಸಾಕಾಗಿವೆ ಎಂದಿದ್ದರು. ಆದರೆ ಟೈಸನ್ ಈಗ ಮನಸ್ಸು ಬದಲಾಯಿಸಿದ್ದಾರೆ. ಮತ್ತೆ ಬಾಕ್ಸಿಂಗ್ ಗ್ಲೌಸ್ ತೊಟ್ಟು ರಿಂಗ್ ಗೆ ಹೆಜ್ಜೆ ಇಡುತ್ತಿದ್ದಾರೆ. ಅದೂ ತಮಗಿಂತಲೂ 31 ವರ್ಷ ಕಿರಿಯ ಬಾಕ್ಸರ್ ಜೊತೆ ಗುದ್ದಾಡಲಿದ್ದಾರೆ.

ಆ ಐಪಿಎಲ್ ತಂಡ ನನ್ನನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ: ರಾಬಿನ್ ಉತ್ತಪ್ಪ

ಬಾಕ್ಸರ್ ಮತ್ತು ಯೂಟ್ಯೂಬರ್ ಆಗಿರುವ ಜೇಕ್‌ ಪೌಲ್‌ ವಿರುದ್ಧ ಸೆಣೆಸಲಿದ್ದಾರೆ. ಯೂಟ್ಯೂಬರ್ ಆಗಿರುವ ಜೇಕ್ ಪೌಲ್ ವೃತ್ತಿಪರ ಬಾಕ್ಸರ್ ಸಹ. ಹಲವು ಬಾಕ್ಸಿಂಗ್ ಮ್ಯಾಚ್ ಗಳಲ್ಲಿ ಎದುರಾಳಿಗಳನ್ನು ನಾಕೌಟ್ ಮಾಡಿದ್ದಾರೆ. ಜೇಕ್ ಪೌಲ್ ಹಲವು ತಿಂಗಳುಗಳಿಂದಲೂ ಟೈಸನ್ ತನ್ನ ವಿರುದ್ದ ಫೈಟ್ ಮಾಡಬೇಕು ಎಂದು ಹೇಳುತ್ತ, ಕೆಣಕುತ್ತಿದ್ದರು. ಪೌಲ್ ಅಭಿಮಾನಿಗಳು ಸಹ ಟೈಸನ್ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಪತ್ತಡ ಹೇರುತ್ತಲೇ ಬಂದಿದ್ದರು. ಕೊನೆಗೆ ಟೈಸನ್ ಫೈಟ್ ಗೆ ಒಪ್ಪಿಗೆ ನೀಡಿದ್ದಾರೆ.

ಜೂನ್ 20 ರಂದು ಟೆಕ್ಸಸ್ ನ ಎಟಿ ಆಂಡ್ ಟಿ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದ್ದು. ಪಂದ್ಯಕ್ಕಾಗಿ ವಿಶ್ವದಾದ್ಯಂತ ಅಭಿಮಾನಿಗಳು ಕಾತರರಾಗಿ ಕಾಯುತ್ತಿದ್ದಾರೆ. ವಿಶ್ವದಲ್ಲಿಯೇ ಅತಿ ಹೆಚ್ಚು ಮಂದಿ ವೀಕ್ಷಿಸಲಿರುವ ಬಾಕ್ಸಿಂಗ್ ಪಂದ್ಯ ಇದಾಗಿರಲಿದೆ. ಪಂದ್ಯದ ಟಿಕೆಟ್ ಗಳು ಈಗಾಗಲೇ ಮಾರಾಟವಾಗಿಬಿಟ್ಟಿವೆ. ಪಂದ್ಯದ ನೇರ ಪ್ರಸಾರದ ಹಕ್ಕುಗಳು ಸಹ ಭಾರಿ ಮೊತ್ತಕ್ಕೆ ಮಾರಾಟವಾಗಿವೆ.

LEAVE A REPLY

Please enter your comment!
Please enter your name here