Site icon Samastha News

Mobile: ಚೀನಾದ ಮೊಬೈಲ್ ಸಂಸ್ಥೆಗಳ ಮೇಲೆ ಭಾರಿ ಆಕ್ರೋಶ, ನಿಷೇಧಕ್ಕೆ ಆಗ್ರಹ

Mobile

Mobile

ಫ್ಲಿಪ್’ಕಾರ್ಟ್, ಅಮೆಜಾನ್ ಗಳ ಹಬ್ಬದ ಸೇಲ್ ಗಳು ಇತ್ತೀಚೆಗಷ್ಟೆ ನಡೆದಿದ್ದು, ಮೊಬೈಲ್, ಲ್ಯಾಪ್ ಟಾಪ್, ಬ್ಯೂಟಿ ಪ್ರಾಡಕ್ಟ್ ಇನ್ನಿತರೆಗಳ ಮೇಲೆ ಭಾರಿ ರಿಯಾಯಿತಿ ನೀಡಲಾಗಿತ್ತು. ಅದರಲ್ಲೂ ಮೊಬೈಲ್, ಇಯರ್ ಬಡ್ ಇನ್ನಿತರೆಗಳಂತೂ ಅದ್ಭುತವಾಗಿ ಮಾರಾಟವಾದವು‌. ಅದರ ಬೆನ್ನಲ್ಲೆ ಇದೀಗ ಭಾರತದ ಸಗಟು ವ್ಯಾಪಾರಿಗಳಯ (ರೀಟೇಲರ್) ಗಳು ಚೈನಾದ ಮೊಬೈಲ್ ಸಂಸ್ಥೆಗಳ ಮೇಲೆ ಆಕ್ರೋಶ ಹೊರಹಾಕಿದ್ದು , ಚೈನಾ ಸಂಸ್ಥೆಗಳ ಪರವಾನಗಿ ರದ್ದು ಮಾಡಬೇಕೆಂದು ಆಗ್ರಹಿಸಿದ್ದಾರೆ.

ಭಾರತದಲ್ಲಿ ಭರ್ಜರಿಯಾಗಿ ಮಾರಾಟವಾಗುವ ಚೀನಾದ ಬ್ರ್ಯಾಂಡ್’ಗಳಾದ ಒನ್ ಪ್ಲಸ್, ಐಕೂ, ಪೋಕೊ ಮೊಬೈಲ್ ಗಳನ್ನು ರದ್ದು ಮಾಡಬೇಕು, ಈ ಸಂಸ್ಥೆಗಳ ಪರವಾನಗಿ ರದ್ದು ಮಾಡಬೇಕು ಎಂದು ಆಲ್ ಇಂಡಿಯಾ ಮೊಬೈಲ್ ರೀಟೇಲರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ‌. ಚೈನಾ ಕಂಪೆನಿಗಳು ನಿಯಮ ಮೀರಿ ಭಾರತದಲ್ಲಿ ತಮ್ಮ ಮೊಬೈಲ್ ಗಳನ್ನು ಮಾರಾಟ ಮಾಡುತ್ತಿದೆ ಎಂದು ರೀಟೇಲರ್ ಅಸೋಸಿಯೇಷನ್ ಆರೋಪ ಮಾಡಿದೆ.

ಈ ಕಂಪೆನಿಗಳಯ ನಿಯಮ ಬಾಹಿರ ವ್ಯಾಪಾರ ತಂತ್ರಗಳನ್ನು ಬಳಸಿ ತೆರಿಗೆ ವಂಚನೆ ಮಾಡುತ್ತಿವೆ ಅಲ್ಲದೆ ರೀಟೇಲ್ ವ್ಯಾಪಾರಿಗಳ ವ್ಯಾಪಾರಕ್ಕೆ ಉದ್ದೇಶಪೂರ್ವಕವಾಗಿ ಸಮಸ್ಯೆ ಒಡ್ಡುತ್ತಿವೆ. ಸ್ಪರ್ಧಾತ್ಮಕ ವ್ಯಾಪಾರದ ನಿಯಮ ಮೀರಿ ಅನೈತಿಕ ವ್ಯಾಪಾರದಲ್ಲು ಚೈನಾದ ಮೊಬೈಲ್ ಕಂಪೆನಿಗಳು ತೊಡಗಿಕೊಂಡಿವೆ ಎಂದು ಅಸೋಸೊಯೇಷನ್ ಆರೋಪ ಮಾಡಿದೆ. ಇದರ ಜೊತೆಗೆ ಕಾಂಪಿಟೇಶನ್ ಕಮಿಷನ್ ಆಫ್ ಇಂಡಿಯಾ (ಸ್ಪರ್ಧಾತ್ಮಕ ವ್ಯಾಪಾರ ಆಯೋಗ) ಕ್ಕೆ ಆಲ್ ಇಂಡಿಯಾ ಟ್ರೇಡರ್ಸ್ ಅಸೋಸೊಯೇಷನ್ ದೂರು ನೀಡಿದ್ದು, ಫ್ಲಿಪ್’ಕಾರ್ಟ್ ಹಾಗೂ ಅಮೆಜಾನ್’ನ ಆಫರ್ ಸೇಲ್,‌ ಸೀಸನ್ ಸೇಲ್ ಗಳನ್ನು ರದ್ದುಗೊಳಿಸುವಂತೆ ಕೋರಿದೆ. ಈ ಸೇಲ್ ಗಳಲ್ಲಿ ರಿಯಾಯಿತಿಗಳಲ್ಲಿ ಹೆಸರಲ್ಲಿ ಗ್ರಾಹಕರಿಗೆ ಮೋಸ ಮಾಡಲಾಗುತ್ತಿದೆ, ಕೆಲವು ಬ್ರ್ಯಾಂಡ್ ನ ವಸ್ತುಗಳನ್ನು ಗ್ರಾಹಕರಿಗೆ ಹೆಚ್ಚು ತೋರಿಸುವ‌ ಮೂಲಕ ಇತರೆ ಬ್ರ್ಯಾಂಡ್ ಗಳಿಗೆ ಅನ್ಯಾಯ ಮಾಡಲಾಗುತ್ತಿದೆ. ಒಟ್ಟಾರೆಯಾಗಿ ಅನೈತಿಕ ಮಾದರಿ ವ್ಯಾಪಾತವನ್ನು ಈ ಸಂಸ್ಥೆಗಳು ಮಾಡುತ್ತಿವೆ ಎಂದು ಆರೋಪ ಮಾಡಿವೆ.

Vodafone: ಹೋರಾಟ ಮುಂದುವರೆಸಿದ ವೋಡಾಫೋನ್, ದೊಡ್ಡ ಡೀಲ್​ಗೆ ಸಹಿ

ಆನ್’ಲೈನ್ ಸೇಲ್ ಅನ್ನು ನೆಚ್ಚಿಕೊಂಡಿರುವ‌ ಚೈನೀಸ್ ಮೊಬೈಲ್ ಸಂಸ್ಥೆಗಳು ಬೇಕೆಂದೇ ರೀಟೇಲ್ ಶಾಪ್’ಗಳಿಗೆ ಕಡಿಮೆ ಮೊಬೈಲ್ ನೀಡಿ ಮಾರುಕಟ್ಟೆ ಒತ್ತಡ ಸೃಷ್ಟಿಸಿ ಆ ಬಳಿಕ ಆನ್’ಲೈನ್ ನಲ್ಲಿ ರಿಯಾಯಿತಿ ದರ ಘೋಷಣೆ ಮಾಡಿ ಮಾರಾಟ ಮಾಡುತ್ತಿವೆ. ಇದರಿಂದ ರೀಟೇಲ್ ವ್ಯಾಪಾರಿಗಳಿಗೆ ಸಮಸ್ಯೆ ಆಗುತ್ತಿದೆ ಎಂದಿ ರೀಟೇಲ್ ಮಾರಾಟಗಾರರ ಅಸೋಸಿಯೇಷನ್ ಆರೋಪ ಮಾಡಿದೆ.

Exit mobile version