Monthly Horoscope: ಸೆಪ್ಟೆಂಬರ್ ತಿಂಗಳ ಭವಿಷ್ಯ: ಯಾವ ರಾಶಿಯವರಿಗೆ ಶುಭ, ಯಾರಿಗೆ ಅಶುಭ?

0
135
Monthly Horoscope

Monthly Horoscope

ಆಗಸ್ಟ್ ತಿಂಗಳು ಮುಗಿದಿದೆ. ಸೆಪ್ಟೆಂಬರ್ ತಿಂಗಳು ಪ್ರಾರಂಭವಾಗಿದೆ. ಸಾಲು-ಸಾಲು ಹಬ್ಬಗಳು ಸಹ ಈ ತಿಂಗಳಿನಲ್ಲಿವೆ. ಸೆಪ್ಟೆಂಬರ್ ತಿಂಗಳಲ್ಲಿ ಕೆಲವು ಪ್ರಮುಖ ರಾಶಿಗಳಲ್ಲಿ ಗ್ರಹ ಚಲನೆಗಳು ಇವೆ. ಇವುಗಳಿಂದ ಕೆಲ ರಾಶಿಗಳಿಗೆ ಒಳಿತಾಗಲಿದೆ. ಕೆಲವು ರಾಶಿಗಳಿಗೆ ಕೆಡುಕು ಉಂಟಾಗಲಿದೆ. ಈ ಸೆಪ್ಟೆಂಬರ್ ತಿಂಗಳಲ್ಲಿ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳಿ.

ಮೇಷ

ಮೇಷ ರಾಶಿಯವರಿಗೆ ಹಣಕಾಸಿನ ವಿಷಯದಲ್ಲಿ ಹಿನ್ನಡೆ ಉಂಟಾಗಲಿದೆ. ಅನಾರೋಗ್ಯಕ್ಕೆ ಈಡಾಗಲಿದ್ದೀರಿ, ಆರೋಗ್ಯಕ್ಕಾಗಿ ಹಣ ಖರ್ಚು ಮಾಡಬೇಕಾಗಬಹುದು. ಏಕಾಗ್ರಹದ ಕೊರತೆ ಎದುರಾಗಲಿದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಹಿನ್ನಡೆ ಎದುರಾಗಲಿದೆ. ಆದರೆ ಶ್ರಮ ಪಟ್ಟರೆ ತಿಂಗಳ ಅಂತ್ಯದಲ್ಲಿ ನಡೆಯಲಿರುವ ಪರೀಕ್ಷೆಯಲ್ಲಿ ಸಂಪೂರ್ಣ ಯಶಸ್ಸು ಸಿಗಲಿದೆ. ಕುಟುಂಬದವರು ಹೆಮ್ಮೆ ಪಡುವ ಕೆಲಸ ಮಾಡಲಿದ್ದೀರಿ. ಉದ್ಯೋಗದ ಸ್ಥಳದಲ್ಲಿ ಕೆಲವು ಒತ್ತಡಮಯ ಸಮಯ ನಿರ್ಮಾಣ ಆಗಲಿದೆ. ತಾಳ್ಮೆಯಿಂದ ಎಲ್ಲವನ್ನೂ ಎದುರಿಸಿ. ತಿಂಗಳ ಮಧ್ಯಭಾಗದಲ್ಲಿ ಆದಾಯ ಬರಲಿದೆ. ಈ ತಿಂಗಳಲ್ಲಿ ಭಾಗ್ಯೋದಯ ಆಗುವ ಸಾಧ್ಯತೆ ಇದೆ. ಈ ವ್ಯವಹಾರ ಮಾಡುವವರಿಗೆ ಈ ತಿಂಗಳು ಉತ್ತಮ ಆಗಿರಲಿದೆ.

ವೃಷಭ

ವೃಷಭ ರಾಶಿಯವರಿಗೆ ಈ ತಿಂಗಳು ಶುಭ ಸಮಯ ಇರಲಿದೆ. ಕೆಲಸದಲ್ಲಿ ಬಡ್ತಿ ಸಿಗಲಿದೆ. ಉದ್ಯೋಗದಲ್ಲಿ ಗೌರವ ಪ್ರಾಪ್ತಿ ಆಗಲಿದೆ. ಆದರೆ ಮೇಲಧಿಕಾರಿಗಳಿಂದ ಕೆಲ ಸಮಸ್ಯೆ ಎದುರಿಸಬೇಕಾಗುತ್ತದೆ. ಅತಿಯಾದ ಕೆಲಸದಿಂದ ನೀವು ಆರೋಗ್ಯ ಸಮಸ್ಯೆ ವಿಶೇಷವಾಗಿ ಮಾಂಸಖಂಡ-ಸ್ನಾಯುಗಳು ಮತ್ತು ನರಗಳಿಗೆ ಸಂಬಂಧಿಸಿದ ನೋವು ಮತ್ತು ತೊಂದರೆ ಅನುಭವಿಸಲಿದ್ದೀರಿ. ಆರಂಭದ ದಿನಗಳಲ್ಲಿ ದಾಂಪತ್ಯದಲ್ಲಿ ವಿರಸ ಕಂಡು ಬರಲಿದೆ. ಸಂಗಾತಿಯೊಂದಿಗೆ ಸಣ್ಣ ವಿಷಯಕ್ಕೆ ಮುನಿಸಿಕೊಳ್ಳಲಿದ್ದೀರಿ. ಮಕ್ಕಳ ಬಗ್ಗೆ ಬೇಸರ ಮೂಡಲಿದೆ. ಮಕ್ಕಳ ಆರೋಗ್ಯಕ್ಕೂ ಹಣ ಖರ್ಚಾಗಲಿದೆ. ತಿಂಗಳ ಎರಡನೇ ಭಾಗದಲ್ಲಿ ಪರಿಸ್ಥಿತಿಗಳು ಹೆಚ್ಚು ಅನುಕೂಲಕರವಾಗಿರುತ್ತದೆ. ವಿದ್ಯಾರ್ಥಿಗಳಿಗೆ ಒಳ್ಳೆಯ ಸಮಯ ಇದೆ. ವಿದೇಶದಲ್ಲಿ ಓದುವ ಕನಸು ನನಸಾಗುವ ಸಾಧ್ಯತೆ ಇದೆ. ನೀವು ಹಣಕಾಸಿನ ವಿಷಯದಲ್ಲಿ ಎಚ್ಚರಿಕೆಯಿಂದ ಇರಬೇಕು ಇಲ್ಲವಾದರೆ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿಕೊಳ್ಳುವಿರಿ.

ಮಿಥುನ

ಈ ತಿಂಗಳು ಉದ್ಯೋಗದಲ್ಲಿ ಪ್ರಗತಿ ಆಗಲಿದೆ. ಕೆಲಸದಿಂದ ಲಾಭವೂ ಸಹ ಸಿಗಲಿದೆ. ದೂರದ ಸಂಬಂಧಿಗಳು, ಹಳೆಯ ಗೆಳೆಯರನ್ನು ಭೇಟಿ ಆಗಲಿದ್ದೀರಿ. ಕೆಲಸವೇ ನಿಮ್ಮ ಶಕ್ತಿ, ಯಾವುದೇ ಕ್ಷೇತ್ರದಲ್ಲಿದ್ದರೂ ಕೆಲಸ ಮುಂದುವರೆಸಿ ನೀವು ಹಾಕಿರುವ ಪರಿಶ್ರಮದ ಸಂಪೂರ್ಣ ಫಲಿತಾಂಶ ಸಿಗಲಿದೆ. ದಾಂಪತ್ಯ ಜೀವನದಲ್ಲಿ ಕೆಲ ಭಿನ್ನಾಭಿಪ್ರಾಯ ಬರಲಿವೆ. ನಿಮ್ಮ ಕೆಲಸ, ಪ್ರತಿಭೆಯನ್ನು ಗುರುತಿಸಿ ಸಾಮಾಜಿಕ ಸನ್ಮಾನ, ಗೌರವವನ್ನು ಮಾಡಲಾಗುತ್ತದೆ. ಈ ತಿಂಗಳು ನಿಮಗೆ ಹೆಚ್ಚು ಕೆಲಸ ಇರಲಿದೆ. ಅತಿಯಾದ ಕೆಲಸದಿಂದ ದೇಹ ಬಳಲ ಬಹುದು ಸಹ. ಮಾಡಿದ ಕೆಲಸಕ್ಕೆ ಫಲಿತಾಂಶ ದೊರೆತು ಆರ್ಥಿಕವಾಗಿ ನೀವು ಪ್ರಗತಿ ಹೊಂದುತ್ತೀರಿ. ವ್ಯಾಪಾರಿಗಳು ಒಳ್ಳೆಯ ಯಶಸ್ಸು ಗಳಿಸುವರು.

ಕರ್ಕಾಟಕ

ಕುಟುಂಬದ ಬಗ್ಗೆ ಅಸಮಾಧಾನ ಮೂಡಲಿದೆ. ಕುಟುಂಬದ ಬೆಂಬಲ ನಿಮಗೆ ಸಿಗದೇ ಹೋಗಬಹುದು. ತಿಂಗಳ ಮಧ್ಯ ಭಾಗದಲ್ಲಿ ನಿಮಗೆ ರಕ್ತ ಸಂಬಂಧಿಗಳ ಬೆಂಬಲ ಸಿಗಬಹುದು. ಜಮೀನು ವಿವಾದ ಭುಗಿಲೇಳಲಿದೆ. ಆದರೆ ನಿಮಗೆ ಈ ವಿವಾದದಿಂದ ಒಳಿತಾಗುವುದಿಲ್ಲ, ಭೂ ವಿವಾದಗಳಿಂದ ದೂರವೇ ಇರಿ. ಇಲ್ಲವಾದರೆ ಸಮಸ್ಯೆ ಎದುರಿಸಬೇಕಾಗುತ್ತದೆ. ಅಂದುಕೊಂಡಿದ್ದು ಆಗುವುದಿಲ್ಲ, ತಾಳ್ಮೆ ಕಳೆದುಕೊಳ್ಳಬೇಡಿ. ಆರ್ಥಿಕ ಪ್ರಗತಿ ಕಡಿಮೆ ಆಗುವುದು, ಆದರೆ ಆರ್ಥಿಕ ಮುಗ್ಗಟ್ಟು ಉಂಟಾಗದು. ತಿಂಗಳ ಕೊನೆಗೆ ಕೆಲವು ಮಂಗಳ ಕಾರ್ಯಗಳು ನಡೆಯಲಿವೆ. ನೀವು ಭಾಗಿಯಾಗಲಿದ್ದೀರಿ. ಕೆಲವು ಅನಾರೋಗ್ಯಗಳು ಕಾಡಲಿವೆ, ಆರೋಗ್ಯದ ಬಗ್ಗೆ ಜಾಗೃತೆಯಿಂದ ಇರಿ.

ಸಿಂಹ

ಈ ತಿಂಗಳು ಊಹಿಸಿದಕ್ಕಿಂತಲೂ ಸ್ವಲ್ಪ ಕಡಿಮೆ ಆದಾಯ ಇರಲಿದೆ. ಈ ತಿಂಗಳು ಕೆಲವು ಸಮಸ್ಯೆಗಳು ನಿಮಗೆ ಎದುರಾಗಲಿವೆ. ಸಮಸ್ಯೆಗಳಿಂದ ಧೃತಿಗೆಡಬೇಡಿ. ಆರಂಭದಲ್ಲಿ ಸಮಸ್ಯೆಗಳು ದೊಡ್ಡದು ಎನಿಸುತ್ತವೆ. ಆದರೆ ಕೊನೆಗೆ ನೀವೇ ಜಯಿಸಲಿದ್ದೀರಿ, ಪ್ರಯತ್ನ ಬಿಡಬೇಡಿ. ತಿಂಗಳ ಅಂತ್ಯಕ್ಕೆ ತುಸು ಅದೃಷ್ಟವೂ ಇರಲಿದೆ. ಆರಂಭದಲ್ಲಿ ಅನುಭವಿಸಿದ್ದ ಹಿನ್ನಡೆಗಳನ್ನು ಮರೆಯಲಿದ್ದೀರಿ. ಈ ತಿಂಗಳು ಹೆಚ್ಚು ಅನುಕೂಲಕರ ಆಗಿರುವುದಿಲ್ಲ. ಏಕಾಂಗಿ ಆದಂತೆ ಭಾಸವಾಗುತ್ತದೆ. ಹೆಚ್ಚು ಕೆಲಸ ಇರುವ ಕಾರಣ ಕುಟುಂಬಕ್ಕೆ ಸಮಯ ಕೊಡಲಾರಿರಿ. ಪೋಷಕರಿಗೆ ಆರೋಗ್ಯ ಸಮಸ್ಯೆ ಕಾಡಲಿದೆ. ತಿಂಗಳಾಂತ್ಯದಲ್ಲಿ ಕೆಲಸದ ಸ್ಥಳದಲ್ಲಿ ಗೌರವ ಪ್ರಾಪ್ತಿ ಆಗಲಿದೆ. ನಿಮ್ಮ ಕೆಲಸಕ್ಕೆ ಪ್ರಶಂಸೆ ಸಿಗಲಿದೆ.

ಕನ್ಯಾ

ಕುಟುಂಬಕ್ಕೆ ಹೆಚ್ಚು ಖರ್ಚು ಮಾಡಲಿದ್ದೀರಿ. ಮನೆಯವರಿಗೆ ನಿಮ್ಮ ಮೇಲೆ ಪ್ರೀತಿ ಹೆಚ್ಚಾಗುತ್ತದೆ. ನಿಮ್ಮ ಮುಂದಾಳತ್ವದಲ್ಲಿ ಮನೆಯಲ್ಲಿ ಕೆಲ ಮಂಗಳ ಕಾರ್ಯಗಳು, ಕಾರ್ಯಕ್ರಮಗಳು ನಡೆಯುವ ಸಾಧ್ಯತೆ ಇದೆ. ಸಾಕಷ್ಟು ಅತಿಥಿಗಳು ಆಗಮಿಸಲಿದ್ದಾರೆ. ನಿಮಗೆ ಸಂಬಂಧಿಗಳ ಬೆಂಬಲವೂ ಸಿಗಲಿದೆ. ತಿಂಗಳು ಮುಗಿಯುವುದರ ಒಳಗೆ ಯಾವುದಾದರೂ ಒಂದು ಶುಭ ಸುದ್ದಿ ಸಿಗಲಿದೆ. ನೀವು ಮಾಡಬೇಕೆಂದಿರುವ ಕಾರ್ಯದಲ್ಲಿ ನಿಮ್ಮ ಸಹೋದರನ ಬೆಂಬಲ ಸಿಗಲಿದೆ. ಆತ್ಮೀಯ ಗೆಳೆಯನೂ ಬೆಂಬಲ ನೀಡಲಿದ್ದಾನೆ. ಉದ್ಯೋಗ ಸ್ಥಳದಲ್ಲಿ ಹೊಸ ಅವಕಾಶಗಳು ನಿಮಗೆ ಸಿಗಲಿವೆ. ಅದರ ಸದುಪಯೋಗ ಪಡಿಸಿಕೊಳ್ಳಿ. ವ್ಯವಹಾರಸ್ಥರು ಮೋಸ ಹೋಗುವ ಸಾಧ್ಯತೆ ಇದೆ. ಪಾಲುದಾರ ವ್ಯಾಪಾರಸ್ಥರು ಎಚ್ಚರವಾಗಿರಿ.

ತುಲಾ

ಹೊಸ ಉದ್ಯೋಗ ನಿಮಗೆ ಸಿಗಬಹುದು, ಒಳ್ಳೆಯ ಉದ್ಯೋಗ ಸಾಧ್ಯತೆ ಇದೆ. ವ್ಯಾಪಾರಿಗಳಿಗೆ ತುಸು ಹಿನ್ನಡೆ ಆಗಲಿದೆ. ಎಚ್ಚರಿಕೆಯಿಂದ ಹೊಸ ವ್ಯಾಪಾರ ಆರಂಭಿಸಬೇಕಾಗುತ್ತದೆ. ವೃತ್ತಿಯಲ್ಲಿ ಕೆಲವು ಸಮಸ್ಯೆಗಳು ಕಾಡಲಿವೆ. ಕೆಲವರಿಂದ ಕಿರಿ-ಕಿರಿ ಉಂಟಾಗಲಿದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಹದಗೆಡಲಿದೆ, ಖರ್ಚುಗಳನ್ನು ಈಗಿನಿಂದಲೇ ನಿಯಂತ್ರಿಸಿ. ಕುಟುಂಬಸ್ಥರಿಂದ ಹಣ ಕೇಳುವ ಪರಿಸ್ಥಿತಿ ಬರಬಹುದು. ಕುಟುಂಬದವರು ಕೇಳಿದ್ದನ್ನು ನಿಮಗೆ ಕೊಡಲಾಗುವುದಿಲ್ಲ. ಆರ್ಥಿಕ ಸ್ಥಿರತೆ ಕಂಡುಕೊಳ್ಳುವತ್ತ ಗಮನ ಹರಿಸಿ, ಮದುವೆ ಮಾತುಕತೆ ಮುಂದುವರೆಯುತ್ತವೆ. ವಿವಾಹ ಯೋಗ ಇದೆ.

ವೃಶ್ಚಿಕ

ಆರ್ಥಿಕವಾಗಿ ಚೇತರಿಕೆ ಕಾಣಲಿದ್ದೀರಿ. ಊಹೆಗಿಂತಲೂ ಹೆಚ್ಚಿನ ಆದಾಯ ಬರಲಿದೆ. ಹಣವನ್ನು ಉಳಿತಾಯ ಮಾಡಿ, ಎಚ್ಚರಿಕೆ ಹೂಡಿಕೆ ಮಾಡಿ, ಮುಂದೆ ಬೇಕಾಗುತ್ತದೆ. ಹೊಸ ಆಸ್ತಿ ಅಥವಾ ಐಶಾರಾಮಿ ವಸ್ತು ಖರೀದಿಸಲು ಮುಂದಾಗಲಿದ್ದೀರಿ. ಅದು ಒಳ್ಳೆಯ ಆಲೋಚನೆ. ವ್ಯಾಪಾರವನ್ನು ದೊಡ್ಡದು ಮಾಡುವ ಯೋಜನೆ ಮಾಡಲಿದ್ದೀರಿ. ವಿದ್ಯಾರ್ಥಿಗಳಿಗೆ ಇದು ಒತ್ತಡದ ಸಮಯ. ಶಿಕ್ಷಣದಲ್ಲಿ ಕೆಲ ಹಿನ್ನಡೆ ಎದುರಾಗಲಿದೆ. ಹಣಕಾಸು ಒಳಹರಿವು ಹೆಚ್ಚಾದಂತೆ ನಿಮ್ಮ ಹಾಗೂ ಕುಟುಂಬದವರಿಗಾಗಿ ಹಣ ಖರ್ಚು ಮಾಡಲಿದ್ದೀರಿ. ಕೆಲವು ಆಸೆಗಳನ್ನು ಪೂರೈಸಿಕೊಳ್ಳಲಿದ್ದೀರಿ. ಭೂ ವಿವಾದ ಅಥವಾ ಯಾವುದೇ ನ್ಯಾಯಾಲಯದ ವ್ಯವಹಾರದಲ್ಲಿ ನಿಮಗೆ ಜಯ ಸಿಗಲಿದೆ. ಯಾವುದೇ ಭೂ ವ್ಯವಹಾರದಿಂದ ನಿಮಗೆ ಲಾಭವೇ ಆಗಲಿದೆ. ಒಟ್ಟಾರೆ ಈ ತಿಂಗಳು ಬಹಳ ಒಳ್ಳೆಯ ತಿಂಗಳಾಗಲಿದೆ.

ಧನು

ಈ ತಿಂಗಳು ಶ್ರಮದಾಯಕ ತಿಂಗಳಾಗಿರಲಿದೆ. ಕಷ್ಟಪಟ್ಟು ಕೆಲಸ ಮಾಡಿದರಷ್ಟೆ ನಿಮಗೆ ಪ್ರತಿಫಲ ಸಿಗಲಿದೆ. ಉದ್ಯೋಗ ಸ್ಥಳದಲ್ಲಿ ಕೆಲಸ ಹೆಚ್ಚಾಗಲಿದೆ. ಕೆಲಸಕ್ಕೆ ತಕ್ಕ ಪೂರ್ಣ ಪ್ರತಿಫಲ ಸಿಗದೇ ಹೋಗಬಹುದು. ಉದ್ಯೋಗ ಬದಲಾವಣೆಗೆ, ವರ್ಗಾವಣೆಗೆ ಇದು ಒಳ್ಳೆಯ ಸಮಯ. ವ್ಯಾಪಾರ ಪ್ರಾರಂಭಿಸಲು ಬಯಸಿದ್ದರೆ ಪೂರ್ಣ ಯೋಜನೆ ಮಾಡಿಕೊಳ್ಳಿ, ಆತುರವಾಗಿ ನದಿಗೆ ಧುಮುಕುವುದು ಬೇಡ. ಎಲ್ಲ ಲೆಕ್ಕಾಚಾರ ಮೊದಲೇ ಮಾಡಿಕೊಳ್ಳಿ. ಸಾಮಾಜಿಕವಾಗಿ ಗುರುತು ಪ್ರಾಪ್ತಿ ಆಗುತ್ತದೆ. ಸಮಾಜದಲ್ಲಿ ಗೌರವವು ಹೆಚ್ಚಾಗುತ್ತದೆ. ಹೊಸಬರು ಕೆಲವರು ನಿಮ್ಮೊಂದಿಗೆ ವ್ಯಾಪಾರ ಮಾಡಲು ಬರಲಿದ್ದಾರೆ. ವಿದೇಶ ಪ್ರವಾಸದ ಯೋಗವೂ ಇದೆ. ತಾಯಿಗೆ ಅನಾರೋಗ್ಯ ಉಂಟಾಗಲಿದೆ. ಇದು ನಿಮಗೆ ಸಮಸ್ಯೆ ತರಬಹುದು. ವಿನಾ ಕಾರಣ ಯಾವುದೇ ವಸ್ತುವನ್ನು ಮಾರಲು ಮುಂದಾಗಬೇಡಿ, ಭೂ ವ್ಯವಹಾರದಿಂದ ಅಂತರ ಕಾಯ್ದುಕೊಳ್ಳಿ. ಮನೆ ನಿರ್ವಹಣೆಗೆ ಹಣ ಖರ್ಚಾಗಲಿದೆ. ಸಹೋದರರಿಗೆ ಸಹಾಯ ಮಾಡಿ.

ಮಕರ

ಮಕರ ರಾಶಿಯವರು ವಾಹನ ಚಲಾಯಿಸುವ ಸಮಯದಲ್ಲಿ ಎಚ್ಚರಿಕೆಯಿಂದ ಇರಿ. ಈ ತಿಂಗಳಲ್ಲಿ ಅನಾರೋಗ್ಯ ಕಾಡಲಿದೆ. ಸೂಕ್ತ ಚಿಕಿತ್ಸೆ ಪಡೆದುಕೊಂಡು ಗುಣವಾಗಿ. ಹಸಿವು ಕಾಡಲಿದೆ. ಕೆಲಸಕ್ಕೆ ಸಂಬಂಧಿಸಿದಂತೆ ವಿದೇಶ ಪ್ರಯಾಣ ಮಾಡಲಿದ್ದೀರಿ. ಉದ್ಯಮಿಗಳಿಗೆ ಒಳ್ಳೆಯ ಸಮಯ. ವ್ಯಾಪಾರದಲ್ಲಿ ಪ್ರಗತಿ ಕಾಣಲಿದೆ. ಬೇರೆ ಬೇರೆ ಮೂಲಗಳಿಂದಲೂ ಹಣ ಹರಿದು ಬರಲಿದೆ. ಸಾಮಾಜಿಕ ಕಾರ್ಯಗಳಲ್ಲಿ ನೀವು ಭಾಗಿ ಆಗಲಿದ್ದೀರಿ. ನಿಮ್ಮ ವ್ಯಾಪಾರ ಹೆಚ್ಚಾಗಲಿದೆ, ಲಾಭ ಹೆಚ್ಚಾಗಲಿದೆ. ಸಹೋದರರೊಂದಿಗೆ, ದಾಯಾದಿಗಳೊಟ್ಟಿಗೆ ಸಂಬಂಧ ಸುಧಾರಣೆ ಆಗಲಿದೆ.

Weekly Horoscope: ಆಗಸ್ಟ್ ತಿಂಗಳ ಕೊನೆಯ ವಾರದಲ್ಲಿ ಹಲವು ರಾಶಿಯವರಿಗೆ ಅಶುಭ

ಕುಂಭ

ಈ ತಿಂಗಳು ತುಸು ಉತ್ತಮವಾಗಿರುತ್ತದೆ. ಮನೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಪೋಷಕರನ್ನು ಪ್ರವಾಸಕ್ಕೆ ಕಳಿಸಲಿದ್ದೀರಿ. ಮನೆಯನ್ನು ರಿಪೇರಿ ಮಾಡಿಸಲಿದ್ದೀರಿ. ನಿಮಗೂ ಸಹ ಪ್ರವಾಸ ಮಾಡುವ ಯೋಗ ಇದೆ. ನಿಮ್ಮ ಸಹೋದರರೊಟ್ಟಿಗೆ ಸಮಯ ಕಳೆಯಲಿದ್ದೀರಿ. ಪೋಷಕರ ಬೆಂಬಲ ನಿಮಗೆ ಸಿಗಲಿದೆ. ನಿಮಗೆ ಕೆಲವು ಸಣ್ಣ-ಪುಟ್ಟ ಅನಾರೋಗ್ಯ ಕಾಡಲಿದೆ. ವೈದ್ಯರ ಸಲಹೆ ಪಡೆದು ಸರಿ ಮಾಡಿಕೊಳ್ಳಿ. ಕೆಲಸದ ಮೇಲೆ ಆರೋಗ್ಯದ ಪರಿಣಾಮ ಬೀರಲಿದೆ. ಒಳ್ಳೆಯ ಉದ್ಯೋಗಿ ಎನಿಸಿಕೊಳ್ಳಲಿದ್ದೀರಿ. ಉದ್ಯೋಗದ ಸ್ಥಳದಲ್ಲಿ ನಿಮಗೆ ಗೌರವ, ಬೆಂಬಲ ಸಿಗಲಿದೆ. ಸಂಬಳ ಹೆಚ್ಚಾಗುವ ಸಾಧ್ಯತೆ ಇದೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ.

ಮೀನ

ಮೀನ ರಾಶಿಗೆ ಈ ತಿಂಗಳು ಮಿಶ್ರಫಲ ಸಿಗಲಿದೆ. ಪೋಷಕರ ಆರೋಗ್ಯದಲ್ಲಿ ಏರು-ಪೇರು ಆಗಲಿದೆ. ಮಾನಸಿಕವಾಗಿ ಕೆಲವು ನೋವುಗಳು ಕಾಡಲಿವೆ. ಹಣದ ಖರ್ಚು ಹೆಚ್ಚಾಗಲಿದೆ. ಇದು ನಿಮಗೆ ಬೇಸರ ತರಿಸಲಿದೆ. ಹೊಸ ವಸ್ತು ಖರೀದಿ ಮಾಡುವ ಸಾಧ್ಯತೆ ಇದೆ. ಹಿರಿಯರ, ಜ್ಞಾನಿಗಳ ಸಲಹೆ ಪಡೆಯದೇ ಯಾವುದೇ ಕೆಲಸಕ್ಕೆ ಕೈ ಹಾಕಬೇಡಿ. ಮನೆಯಲ್ಲಿ ನಿಮ್ಮ ಮುಂದಾಳತ್ವದಲ್ಲಿ ಮಂಗಳ ಕಾರ್ಯ ನಡೆಯಲಿದೆ. ಮನೆಯಲ್ಲಿ ಸಂತಸದ ವಾತಾವರಣ ಮೂಡಲಿದೆ. ಕುಟುಂಬ ಸದಸ್ಯರು ಒಂದಾಗಲಿದ್ದಾರೆ. ನಿಮ್ಮ ಕೆಲಸಗಳಿಗೆ ಬೆಂಬಲ ಸಿಗಲಿದೆ. ಕೊಟ್ಟ ಹಣ ವಾಪಸ್ ಬರುವುದಿಲ್ಲ ಎಚ್ಚರಿಕೆಯಿಂದ ಇರಿ. ನಿಮ್ಮ ಆರ್ಥಿಕ ಸ್ಥಿತಿ ಮತ್ತೆ ಹಿನ್ನಡೆಗೆ ಜಾರಲಿದೆ. ಸ್ನೇಹಿತರ ಬಗ್ಗೆ ಜಾಗರೂಕತೆಯಿಂದ ಇರಿ.

LEAVE A REPLY

Please enter your comment!
Please enter your name here