Site icon Samastha News

Healthy recipe: ನಾಲಗೆಗೆ ರುಚಿ, ದೇಹಕ್ಕೆ ಹಿತ, ಮಾಡಿ ತಿನ್ನಿ ನುಗ್ಗೇಕಾಯಿ ಚಟ್ನಿ

Healthy Receipe

Healthy recipe

ನಮ್ಮ ಆರೋಗ್ಯ ನಾವು ತಿನ್ನುವ ಆರೋಗ್ಯದಲ್ಲಿದೆ. ನಾವು ಯಾವ ರೀತಿಯ ಆಹಾರ ತಿನ್ನುತ್ತೇವೆಯೋ ನಾವು ಹಾಗೆಯೇ ಆಗುತ್ತೀವಿ. ಒಳ್ಳೆಯ ಆರೋಗ್ಯ ಬೇಕೆಂದರೆ ಆರೋಗ್ಯವನ್ನು ನೀಡುವ ಆಹಾರವನ್ನು ನಾವು ತಿನ್ನಬೇಕಾಗುತ್ತದೆ. ಅಡುಗೆ ಎಂದರೆ ಕೆಲವರ ಪಾಲಿಗೆ ಅದೇ ಈರುಳ್ಳಿ, ಆಲೂಗಟ್ಟೆ, ಟೊಮ್ಯಾಟೊ, ದನಿಯಾ ಪುಡಿಗಳು ನೆನಪಿಗೆ ಬರುತ್ತದೆ. ಆದರೆ ನಿಜವಾದ ಆರೋಗ್ಯ ಇರುವುದು ಸೊಪ್ಪು ಹಾಗೂ ಇತರೆ ತರಕಾರಿಗಳಲ್ಲಿ. ಉತ್ತಮ ಆರೋಗ್ಯ ಬೇಕೆಂದರೆ ಪ್ರೋಟೀನ್ ಯುಕ್ತ ವಸ್ತುಗಳನ್ನು ನಮ್ಮ ಆಹಾರದಲ್ಲಿ ಬಳಸಬೇಕು.

ಈಗಂತೂ ಅವಕಾಡೊ, ಪ್ರೋಟೀನ್ ರಿಚ್ ಮಶ್ರೂಮ್, ಟೋಫು ಇನ್ನೂ ಕೆಲವು ಪ್ರೋಟೀನ್ ರಿಚ್ ಸಾಮಗ್ರಿಗಳನ್ನು ಸಾವಿರಾರು ರೂಪಾಯಿ ನೀಡಿ ಅಡುಗೆಯಲ್ಲಿ ಬಳಸಿ ತಿನ್ನುತ್ತಿದ್ದಾರೆ ಹಣ ಇದ್ದವರು. ಆದರೆ ಮಧ್ಯಮ ವರ್ಗ, ಬಡವರಿಗೆ ಅದು ಅಸಾಧ್ಯ. ಹಾಗಾಗಿ ಸ್ಥಳೀಯವಾಗಿ ಸಿಗುವ ಸಾಮಗ್ರಿಗಳನ್ನೇ ಬಳಸಿ ನಮ್ಮ ಆರೋಗ್ಯ ಉತ್ತಮ ಪಡಿಸುವ ಖಾದ್ಯಗಳನ್ನು ತಯಾರಿಸಿಕೊಳ್ಳಬೇಕು. ಹೀಗೆ ಸ್ಥಳೀಯವಾಗಿ ಸಿಗುವ ಆದರೆ ಹೆಚ್ಚಿನ ಜನ ನಿರ್ಲಕ್ಷ್ಯ ತೋರಿರುವ ಆಹಾರ ಪದಾರ್ಥವೆಂದರೆ ಅದು ನುಗ್ಗೆ ಸೊಪ್ಪು.

ನುಗ್ಗೆಕಾಯಿಗಳನ್ನು ಸಾಂಬಾರ್​ಗೆ ಬಳಸಲಾಗುತ್ತದೆ. ಅದು ರುಚಿಕರವೂ ಹೌದು. ಆದರೆ ನುಗ್ಗೆ ಸೊಪ್ಪನ್ನು ಆಹಾರದಲ್ಲಿ ಬಳಸುವುದು ಬಹಳ ಕಡಿಮೆ. ನಿಜ ಹೇಳಬೇಕೆಂದರೆ ನುಗ್ಗೆಕಾಯಿಗಿಂತಲೂ ದುಪ್ಪಟ್ಟು ಆರೋಗ್ಯಕ್ಕೆ ಒಳ್ಳೆಯದು ನುಗ್ಗೆ ಸೊಪ್ಪು. ಇದು ಕಣ್ಣು, ಲಿವರ್, ಕಿಡ್ನಿಗಳಿಗೆ ಬಹಳ ಒಳ್ಳೆಯದು. ಒಟ್ಟಾರೆ ದೇಹದ ಆರೋಗ್ಯಕ್ಕೂ ಹಿತಕರ. ಈಗ ನುಗ್ಗೆ ಸೊಪ್ಪಿನಿಂದ ಮಾಡುವ ಚಟ್ನಿಯ ರೆಸಿಪಿಯೊಂದನ್ನು ಇಲ್ಲಿ ನೋಡೋಣ.

ನುಗ್ಗೆಕಾಯಿ ಚಟ್ನಿ ರೆಸಿಪಿ

ಬೇಕಾಗುವ ಸಾಮಗ್ರಿಗಳು: ನುಗ್ಗೆಕಾಯಿ ಸೊಪ್ಪು, ಹಸಿ ಮೆಣಸಿನಕಾಯಿ, ಕರಿಬೇವಿನ ಎಲೆ, ಕೊತ್ತಂಬರಿ ಸೊಪ್ಪು, ಕೊಬ್ಬರಿ ತುರಿ, ಉದ್ದಿನಬೇಳೆ, ಕಡಲೆ ಬೇಳೆ, ಹುಣಸೆ ಹಣ್ಣಿನ ರಸ, ಮೆಂತ್ಯೆ ಕಾಳು, ಉಪ್ಪು, ತುಸು ಎಣ್ಣೆ,

ಮೊದಲಿಗೆ ಬಾಣಲೆಯಲ್ಲಿ ತುಸುವೇ ಎಣ್ಣೆ ಹಾಕಿಕೊಳ್ಳಿ. ಎಣ್ಣೆಕಾದ ಬಳಿಕ ಅದಕ್ಕೆ ಸ್ವಲ್ಪ ಉದ್ದಿನ ಬೇಳೆ, ಕಡಲೆ ಬೇಳೆ ಹಾಕಿಕೊಂಡು ತುಸು ಹುರಿದುಕೊಳ್ಳಬೇಕು. ಸ್ವಲ್ಪ ಮೆಂತ್ಯೆ ಕಾಳು ಸೇರಿಸಿಕೊಳ್ಳಬೇಕು. ಹತ್ತಾರು ಕರಿಬೇವಿನ ಎಲೆ ಸೇರಿಸಿ ಸ್ವಲ್ಪ ಸಮಯ ಬಾಡಿಸಿಕೊಳ್ಳಿ. ಒಂದು ನಿಮಿಷವಾದ ಬಳಿಕ ಬಾಣಲೆಗೆ ತೊಳೆದಿಟ್ಟಿರುವ ನುಗ್ಗೆಸೊಪ್ಪನ್ನು ಸೇರಿಸಿಕೊಳ್ಳಿ. ಸೊಪ್ಪು ಫ್ರೈ ಆಗಲು ತುಸು ಸಮಯ ಬೇಕು, ಎರಡು ನಿಮಿಷ ಫ್ರೈ ಆದ ಬಳಿಕ ಹಸಿ ಮೆಣಸಿನ ಕಾಯಿ ಸೇರಿಸಿ. ಬಳಿಕ ಅದಕ್ಕೆ ತುರಿದಿಟ್ಟುಕೊಂಡಿರುವ ತೆಂಗಿನ ತುರಿ ಸೇರಿಸಿ, ಅದಕ್ಕೆ ತುಸು ಹುಣಸೆ ಹಣ್ಣಿನ ರಸ ಸೇರಿಸಿ, ಕೊನೆಗೆ ಕೊಂಬರಿ ಸೊಪ್ಪು ಸೇರಿಸಿ ಕೆಲ ಸಮಯ ಕೈಯಾಡಿಸಿ.

Cold Water: ತಣ್ಣೀರು ಸ್ನಾನದ ಲಾಭಗಳು ಒಂದೆರಡಲ್ಲ

ಅದಾದ ಮೇಲೆ ಆ ಮಿಶ್ರಣವನ್ನೆಲ್ಲ ಒಂದು ಮಿಕ್ಸಿ ಜಾರ್​ಗೆ ಹಾಕಿಕೊಳ್ಳಿ, ಮಿಕ್ಸ್ ಮಾಡುವ ಮುನ್ನ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಳ್ಳಿ. ಮಿಕ್ಸಿ ಮಾಡಿದ ಮೇಲೆ ರುಚಿಯಾದ ನುಗ್ಗೆಸೊಪ್ಪು ಚಟ್ನಿ ತಯಾರಾಗಿರುತ್ತದೆ.

Exit mobile version