Raveena Tandon
ಕನ್ನಡದ ʼಕೆಜಿಎಫ್ 2′ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಸ್ಟಾರ್ ನಟಿ ರವೀನಾ ಟಂಡನ್‌ರ ವಿಡಿಯೋ ಒಂದು ಇತ್ತೀಚೆಗೆ ವೈರಲ್ ಆಗಿತ್ತು. ಹಲವಾರು ಜನ ರವೀನಾ ಟಂಡನ್‌ರನ್ನು ಮುತ್ತಿಕೊಂಡು ಜೋರು ಧ್ವನಿಯಲ್ಲಿ ಮಾತನಾಡುತ್ತಿದ್ದರು. ʼಹೊಡೆಯಿರಿ, ಬಿಡಬೇಡಿʼ ಎಂದು ಕೂಗುತ್ತಿದ್ದರು ಅದೇ ವಿಡಿಯೋನಲ್ಲಿ ರವೀನಾ ಟಂಡನ್ ಸಹ ಕ್ಷಮೆ ಕೇಳುತ್ತಿದ್ದರು, ಹೊಡೆಯಬೇಡಿ ಎಂದು ಮನವಿ ಮಾಡುತ್ತಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಜನ ರವೀನಾ ಟಂಡನ್ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಇದೀಗ ಮುಂಬೈ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ರವೀನಾ ಟಂಡನ್ ರ ಮುಂಬೈನ ರವೀನಾರ ಮನೆಯ ಬಳಿ ಕಾರು ರಿವರ್ಸ್ ತೆಗೆಯುವಾಗ ಮೂವರು ಮುಸ್ಲಿಂ ಮಹಿಳೆಯರಿಗೆ ಟಚ್ ಆಗಿದೆ. ಯಾರಿಗೂ ಏನೂ ಹಾನಿ ಆಗಿಲ್ಲ. ಆದರೆ ಮೂವರು ಮಹಿಳೆಯರು ಡ್ರೈವರ್ ಜೊತೆ ಜಗಳ ಆರಂಭಿಸಿದ್ದಾರೆ. ಅದಕ್ಕೆ ಸ್ಥಳೀಯರು ಸಹ ಸೇರಿಕೊಂಡಿದ್ದಾರೆ. ಕೊನೆಗೆ ಕೆಲವರು ಡ್ರೈವರ್ ಅನ್ನು ಹೊಡೆಯಲು ಹೋದಾಗ ಕಾರಿನಲ್ಲಿಯೇ ಇದ್ದ ರವೀನಾ ಟಂಡನ್ ಜನರನ್ನು ಶಾಂತಗೊಳಿಸಲು ಯತ್ನಿಸಿದ್ದಾರೆ. ಈ ವೇಳೆ ಜನರು ರವೀನಾ ಟಂಡನ್‌ರ ಡ್ರೈವರ್ ಮೇಲೆ ಹಲ್ಲೆಗೆ ಮುನ್ನುಗ್ಗಿದ್ದಾರೆ. ಈ ವಿಡಿಯೋ ವೈರಲ್ ಆಗಿ ಜನ ರವೀನಾ ಟಂಡನ್‌ರನ್ನೇ ಹೊಡೆದಿದ್ದಾರೆ ಎಂದು ಸುದ್ದಿಯಾಗಿತ್ತು.
ಸಲ್ಮಾನ್ ಖಾನ್ ಮನೆ ಬಳಿ ಗುಂಡಿನ ದಾಳಿ, ಪೊಲೀಸರಿಂದ ತನಿಖೆ
ಇದೀಗ ಮುಂಬೈನ ಖಾರ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ, ವಿಚಾರಣೆ ನಡೆಸಿದ್ದಾರೆ. ಎರಡೂ ಕಡೆಯವರನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಿಸಿದ್ದಾರೆ. ಎರಡೂ ಕಡೆಯವರು ಸಹ ಪರಸ್ಪರರ ವಿರುದ್ಧ ದೂರು ನೀಡಲು ನಿರಾಕರಿಸಿದ್ದಾರೆ. ಅಲ್ಲದೆ ಈ ಘಟನೆಯಲ್ಲಿ ರವೀನಾರ ಮೇಲೆ ಹಲ್ಲೆ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಯಾವ ವ್ಯಕ್ತಿಗೂ ಸಹ ಗಾಯಗಳು ಸಹ ಆಗಿಲ್ಲ ಎಂದಿದ್ದಾರೆ.
ರವೀನಾರ ಮೇಲೆ ಹಲ್ಲೆ ನಡೆದಿದೆ ಎಂದು ವಿಡಿಯೋ ವೈರಲ್ ಆದಾಗ ವ್ಯಕ್ತಿಯೊಬ್ಬ ಖಾಸಗಿ ವಿಡಿಯೋ ಮಾಡಿ ಹರಿಬಿಟ್ಟಿದ್ದ, ರವೀನಾರ ಡ್ರೈವರ್ ತನ್ನ ತಾಯಿ, ತಂಗಿ ಹಾಗೂ ಸೋದರ ಸಂಬಂಧಿಯ ಮೇಲೆ ಕಾರು ಹರಿಸಿದ್ದಾನೆ ಎಂದು ಆರೋಪಿಸಿದ್ದ. ಅಲ್ಲದೆ ಕಾರಿನಲ್ಲಿದ್ದ ರವೀನಾ ಮದ್ಯದ ನಶೆಯಲ್ಲಿದ್ದರು, ಅವರು ಕಾರಿನಿಂದ ಹೊರಬಂದು ನನ್ನ ತಾಯಿಗೆ ಅವಾಚ್ಯವಾಗಿ ಬೈದು ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದ. ಖಾರ್ ಪೊಲೀಸರಿಗೆ ದೂರು ನೀಡಲು ಹೋದರೆ ಅವರು ದೂರು ಸ್ವೀಕರಿಸಲಿಲ್ಲ ಎಂದಿದ್ದ. ಆದರೆ ಈಗ ಪೊಲೀಸರು ಹೇಳಿರುವಂತೆ ಎರಡೂ ಕಡೆಯವರು ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ.