Site icon Samastha News

Narendra Modi: ತಲೆ ಬಾಗಿ ಕ್ಷಮೆ ಕೇಳುತ್ತೀನಿ, ಕ್ಷಮಿಸಿಬಿಡಿ: ನರೇಂದ್ರ ಮೋದಿ

Narendra Modi

Narendra Modi

ಪ್ರಧಾನಿ ನರೇಂದ್ರ ಮೋದಿ ಕ್ಷಮೆ ಕೇಳಿದ್ದಾರೆ. ಛತ್ರಪತಿ ಶಿವಾಜಿ ಹಾಗೂ ಛತ್ರಪತಿ ಶಿವಾಜಿ ಅನುಯಾಯಿಗಳಿಗೆ ಪ್ರಧಾನಿಗಳು ಕ್ಷಮೆ ಕೇಳಿದ್ದಾರೆ. ಕೆಲ ತಿಂಗಳ ಹಿಂದೆ, ಪ್ರಧಾನಿ ಮೋದಿ ಅವರಿಂದಲೇ ಉದ್ಘಾಟನೆಯಾಗಿದ್ದ ಛತ್ರಪತಿ ಶಿವಾಜಿ ಪ್ರತಿಮೆ ಮುರಿದು ಬಿದ್ದಿತ್ತು. ಇದು ತೀವ್ರ ಟೀಕೆಗೆ ಗುರಿಯಾಗಿತ್ತು. ಹಲವು ಬಿಜೆಪಿ ಬೆಂಬಲಿಗರು ಸಹ ಛತ್ರಪತಿ ಶಿವಾಜಿ ಪ್ರತಿಮೆಯ ಕಳಪೆ ಗುಣಮಟ್ಟವನ್ನು ಟೀಕಿಸಿದ್ದರು. ಇದೀಗ ಆ ಬಗ್ಗೆ ಮಾತನಾಡಿರುವ ಮೋದಿ, ಛತ್ರಪತಿ ಶಿವಾಜಿಯವರ ಕ್ಷಮೆ ಕೇಳುವುದಾಗಿ ಹೇಳಿದ್ದಾರೆ.

ಎಂಟು ತಿಂಗಳ ಹಿಂದೆ ಮಹಾರಾಷ್ಟ್ರದ ಸಿಂಧುದುರದಗ ರಾಜ್ ಕೋಟ್ ನ ಕೋಟೆಯ ಬಳಿ 32 ಅಡಿಗಳ ಬೃಹತ್ ಶಿವಾಜಿ ಪ್ರತಿಮೆಯನ್ನು ಸ್ವತಃ ನರೇಂದ್ರ ಮೋದಿ, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಇನ್ನಿತರೆ ಬಿಜೆಪಿ ಮುಖಂಡರು, ಸಚಿವರುಗಳು ಸೇರಿ ಉದ್ಘಾಟನೆ ಮಾಡಿದ್ದರು. ಆದರೆ ಕಳಪೆ ಕಾಮಗಾರಿಯಿಂದಾಗಿ ಕೇವಲ ಎಂಟು ತಿಂಗಳಲ್ಲಿಯೇ ಆ ಪ್ರತಿಮೆ ಚೂರು ಚೂರಾಗಿ ಧರೆಗೆ ಉರುಳಿತ್ತು.

ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ಸನಿಹದಲ್ಲೇ ಇದ್ದು, ಈ ಸಮಯದಲ್ಲಿ ನಡೆದ ಈ ಘಟನೆ ತೀವ್ರ ಟೀಕೆಗೆ ಗುರಿಯಾಗಿತ್ತು‌. ಇಂದು (ಆಗಸ್ಟ್ 30) ಮಹಾರಾಷ್ಟ್ರದ ಪಲ್ಗಾರ್ ನಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ನರೇಂದ್ರ ಮೋದಿ, ‘ಶಿವಾಜಿ ನಮ್ಮ ಪಾಲಿಗೆ ಕೇವಲ ರಾಜ ಮಾತ್ರ ಅಲ್ಲ, ಅವರು ನಮಗೆ ದೇವರು. ನನ್ನ ಆರಾಧ್ಯ ದೈವದ ಪಾದಗಳಿಗೆ ಕೈ ಮುಗಿದು ನಾನು ಕ್ಷಮೆ ಕೇಳುತ್ತಿದ್ದೇನೆ’ ಎಂದಿದ್ದಾರೆ ಮೋದಿ.

ಮುಂದುವರೆದು ಮಾತನಾಡಿ, ‘ನಮ್ಮ ಮೌಲ್ಯಗಳು ಭಿನ್ನ ಆಗಿರಬಹುದು ಆದರೆ ನಮ್ಮ ದೇವರಿಗಿಂತಲೂ ಯಾವುದೂ ಸಹ ದೊಡ್ಡದಲ್ಲ. ಶಿವಾಜಿ ಪ್ರತಿಮೆ ಭಗ್ನವಾದ ಬಗ್ಗೆ, ನಾನು ಇಲ್ಲಿಗೆ ಬಂದ ಕೂಡಲೆ ನಾನು ಶಿವಾಜಿ ಮಹಾರಾಜರ ಬಳಿ ಕ್ಷಮೆ ಯಾಚಿಸಿಕೊಂಡೆ. ಮಾತ್ರವಲ್ಲದೆ, ಶಿವಾಜಿ ಮಹಾರಾಜರ ಪ್ರತಿಮೆ ಭಗ್ನವಾಗಿದಕ್ಕೆ ಯಾರು ಯಾರಿಗೆ ಬೇಸರ ಆಗಿದೆಯೋ ಅವರಿಗೆಲ್ಲರಿಗೂ ನಾನು ಕ್ಷಮೆ ಕೇಳುತ್ತೇನೆ’ ಎಂದಿದ್ದಾರೆ ಮೋದಿ.

Highway: ಮೈಸೂರು ಹೆದ್ದಾರಿ, ಬೈಕರ್ ಗಳು ಚಾಪೆ ಕೆಳಗೆ ಪೊಲೀಸರು ರಂಗೋಲಿ ಕೆಳಗೆ

ಅದೇ ವಿಷಯವನ್ನು ಮುಂದುವರೆಸಿ, ಕೆಲವರು ವೀರ್ ಸಾವರ್ಕರ್ ಅವರನ್ನು ಅವಮಾನಿಸುತ್ತಲೇ ಇರುತ್ತಾರೆ. ಆದರೆ ಅವರಿಗೆ ಕ್ಷಮೆ ಕೇಳುವ ಗುಣವಿಲ್ಲ ಎಂದು ವಿಪಕ್ಷವನ್ನು ಟೀಕಿಸಿದ್ದಾರೆ.

Exit mobile version