Science
ಈ ವಿಶ್ವದಲ್ಲಿ ಮನುಷ್ಯ ಒಂಟಿಯೇ, ಇಡೀ ಸೌರ ಮಂಡಲದಲ್ಲಿ ಮತ್ತೊಂದು ಭೂಮಿ ಇಲ್ಲವೆ, ಅಲ್ಲಿ ಮನುಷ್ಯನಿಲ್ಲವೆ ಎಂಬ ಅನುಮಾನ ಮನುಷ್ಯನಿಗೆ ಸದಾ ಇದ್ದದ್ದೆ. ಇದೀಗ ಖಗೋಳ ವಿಜ್ಞಾನಿಗಳು ಭೂಮಿಯ ರೀತಿಯಲ್ಲಿಯೇ ಒರುವ ಮತ್ತೊಂದು ಗ್ರಹವನ್ನು ಪತ್ತೆ ಹಚ್ಚಿದ್ದಾರೆ. ಆ ಹೊಸ ಭೂಮಿಯ ಮೇಲೆ ಹಗಲು-ರಾತ್ರಿಯ ಪರಿಕಲ್ಪನೆ ನಮ್ಮ ಭೂಮಿಗಿಂತಲೂ ಬಹಳ ಭಿನ್ನ.
ಭೂಮಿಯಿಂದ 55 ಜ್ಯೋತಿರ್ವರ್ಷ (ಒಂದು ಜ್ಯೋತಿರ್ವರ್ಷ= 9 ಟ್ರಿಲಿಯನ್ ಕಿ.ಮೀ) ದೂರದಲ್ಲಿ ಈ ಭೂಮಿಯನ್ನು ಹೋಲುಬ ಗ್ರಹವನ್ನು ಪತ್ತೆ ಮಾಡಲಾಗಿದೆ. ಭೂಮಿಯಷ್ಟೆ ಗಾತ್ರವನ್ನು ಈ ಗ್ರಹವೂ ಹೊಂದಿದೆ. ಈ ಗ್ರಹಕ್ಕೆ ಸ್ಪೆಕ್ಯುಲೋಸ್ 3 ಬಿ ಎಂದು ನಾಮಕರಣವನ್ನು ವಿಜ್ಞಾನಿಗಳು ಮಾಡಿದ್ದಾರೆ. ಈಗ ಪತ್ತೆಯಾಗಿರುವ ಗ್ರಹ ಭೂಮಿಯಂತೆ ಇದೆಯಾದರೂ, ಅಲ್ಲಿಯ ರಾತ್ರಿ-ಹಗಲಿಗೂ, ನಮ್ಮ ಭೂಮಿಯ ರಾತ್ರಿ-ಹಗಲಿಗೂ ಭಾರಿ ಅಂತರವಿದೆ.
ಹೊಸದಾಗಿ ಪತ್ತೆಯಾಗಿರುವ ಗ್ರಹವು ತನ್ನ ಸಮೀಪದ ನಕ್ಷತ್ರವನ್ನು ಕೇವಲ 17 ಗಂಟೆಗಳಲ್ಲಿ ಸುತ್ತು ಹಾಕುತ್ತದೆ. ಅಂದರೆ ಅಲ್ಲಿಯ ಒಂದು ವರ್ಷ ಭೂಮಿಯ ಒಂದು ದಿನಕ್ಕಿಂತಲೂ ಕಡಿಮೆ ಅವಧಿಯದ್ದಾಗಿರುತ್ತದೆ. ಅಲ್ಲದೆ ಆ ಹೊಸ ಗ್ರಹ ತನನ್ನು ತಾನು ಪರಿಭ್ರಮಿಸುವುದಿಲ್ಲ, ಬದಲಿಗೆ ಚಂದ್ರನ ರೀತಿ ಏಕ ಮುಖ ಪರಿಭ್ರಮಣೆ ಅಂದರೆ, ಸ್ಥಿರವಾಗಿ ನಕ್ಷತ್ರದ ಸುತ್ತು ಹಾಕುತ್ತದೆ ಹಾಗಾಗಿ, ಆ ಗ್ರಹದ ಒಂದು ಭಾಗಕ್ಕೆ ಸದಾ ಹಗಲಿದ್ದರೆ ಇನ್ನೊಂದು ಭಾಗಕ್ಕೆ ಸದಾ ಕತ್ತಲೆ ಅದು ಬದಲಾಗುವುದೇ ಇಲ್ಲ.
Kannada News: ಇಬ್ಬರ ಕೊಂದ ಬಾಲಕನಿಗೆ 15 ಗಂಟೆಯಲ್ಲಿ ಜಾಮೀನು, ಪ್ರಬಂಧ ಬರೆಯುವ ‘ಶಿಕ್ಷೆ’
ಬಾಹ್ಯಾಕಾಶ ವಿಜ್ಞಾನದಲ್ಲಿ ಪ್ರತಿ ದಿನವೂ ಹೊಸ ಹೊಸ ಅನ್ವೇಷಣೆಗಳು ಆಗುತ್ತಲೇ ಇವೆ. ಶಕ್ತಿಶಾಲಿ ಟೆಲಿಸ್ಕೋಪ್ ಗಳ ನಿರ್ಮಾಣ, ಲೇಸರ್ ಗಳ ಬಳಕೆಯಿಂದ ಹೊಸ ಹೊಸ ಅನ್ವೇಷಣೆಗಳು ಸಾಧ್ಯವಾಗುತ್ತಿದೆ.