Bengaluru
ಬೆಂಗಳೂರು ಮಾತ್ರವೇ ಅಲ್ಲ ಭಾರತದ ಎಲ್ಲ ಪ್ರಮುಖ ನಗರಗಳಲ್ಲಿ ಬಾಡಿಗೆಗೆ ಮನೆ ಪಡೆಯಲು ಅಡ್ವಾನ್ಸ್ ಹಣ ನಿಡುವುದು ಸಾಮಾನ್ಯ. ಆದರೆ ಬೆಂಗಳೂರಿನಲ್ಲಿ ಅಡ್ವಾನ್ಸ್ ರಹಿತ ಬಾಡಿಗೆ ಮನೆ ಯೋಜನೆ ಟ್ರೆಂಡ್ ಆಗುತ್ತಿದೆ. ಬಾಡಿಗೆಗೆ ಮನೆ ಪಡೆಯುವ ಬಾಡಿಗೆದಾರರು ಮನೆ ಮಾಲೀಕರಿಗೆ ಅಡ್ವಾನ್ಸ್ ನೀಡುವ ಅವಶ್ಯಕತೆ ಇಲ್ಲ ಕೇವಲ ಬಾಡಿಗೆ ನೀಡಿದರೆ ಸಾಕು.
ಕೋವಿಡ್ ಸಮಯದಲ್ಲಿ ಖಾಲಿಯಾಗಿದ್ದ ಬೆಂಗಳೂರಿನ ಬಹುತೇಕ ಬಾಡಿಗೆ ಮನೆಗಳು ಈಗ ಮತ್ತೆ ಭರ್ತಿಯಾಗಿವೆ. ಎಲೆಕ್ಟ್ರಾನಿಕ್ ಸಿಟಿ, ಕೋರಮಂಗಲ, ಜಯನಗರ, ಬನಶಂಕರಿ ಇತರೆ ಕೆಲವು ಏರಿಯಾಗಳಲ್ಲಿಯಂತೂ ಬಾಡಿಗೆ ದರ ಪ್ರತಿ ತಿಂಗಳೂ ಹೆಚ್ಚಾಗುತ್ತಿದೆ. ಇದು ಬಾಡಿಗೆದಾರರಿಗೆ ಸಮಸ್ಯೆಯಾಗಿ ಪರಿಣಮಿಸಿದ್ದು ಇದೇ ಕಾರಣಕ್ಕೆ ಅಡ್ವಾನ್ಸ್ ರಹಿತ ಬಾಡಿಗೆ ಮನೆಗಳು ಬಾಡಿಗೆದಾರರಿಗೆ ತುಸುವಾದರೂ ನೆಮ್ಮದಿ ನೀಡುತ್ತಿವೆ.
ಆನ್ ಲೈನ್ ಬಾಡಿಗೆ ಮನೆ ಹುಡುಕುವ ವೇದಿಕೆಯಾದ ನೋ ಬ್ರೋಕರ್ ಸಂಸ್ಥೆಯು ಈ ಅಡ್ವಾನ್ಸ್ ರಹಿತ ಬಾಡಿಗೆ ಯೋಜನೆ ಪ್ರಾರಂಭಿಸಿದ್ದು, ಬೆಂಗಳೂರಿನ ಹಲವು ಮನೆ ಮಾಲೀಕರು ಈ ಯೋಜನೆ ಅಡಿ ಮನೆ ಬಾಡಿಗೆಗೆ ನೀಡಲು ಒಪ್ಪಿ ನೊಂದಣಿ ಮಾಡಿಸಿಕೊಂಡಿದ್ದಾರೆ. ಹಲವು ಬಾಡಿಗೆದಾರರು ನೋ ಬ್ರೋಕರ್ ಮೂಲಕ ಈಗಾಗಲೇ ಅಡ್ವಾನ್ಸ್ ರಹಿತವಾಗಿ ಮನೆ ಬಾಡಿಗೆಗೆ ಪಡೆದಿದ್ದಾರೆ ಎಂದಿದೆ ನೋ ಬ್ರೋಕರ್ ಸಂಸ್ಥೆ.
Modern Art: 5.83 ಲಕ್ಷಕ್ಕೆ ಮಾರಾಟವಾಯ್ತು 2 ವರ್ಷದ ಬಾಲಕ ಬಿಡಿಸಿದ ಚಿತ್ರ
ದೆಹಲಿ ಅಂಥಹಾ ನಗರಗಳಲ್ಲಿ ಅಡ್ವಾನ್ಸ್ ಹಣ ಎರಡು ಅಥವಾ ಮೂರು ತಿಂಗಳ ಬಾಡಿಗೆ ಮೊತ್ತದಷ್ಟಿರುತ್ತದೆ. ಆದರೆ ಬೆಂಗಳೂರಿನಲ್ಲಿ ಹತ್ತು ತಿಂಗಳ ಬಾಡಿಗೆ ಮೊತ್ತವನ್ನು ಅಡ್ವಾನ್ಸ್ ರೂಪದಲ್ಲಿ ಒಟ್ಟಿಗೆ ಮುಂಗಡವಾಗಿ ಪಡೆಯಲಾಗುತ್ತದೆ. ಇದು ಊರು ಬಿಟ್ಟು ಊರಿಗೆ ದುಡಿಯಲು ಬಂದ ಜನರಿಗೆ ಹೊರೆಯಾಗಿ ಪರಿಣಮಿಸಿತ್ತು. ಈ ಅಡ್ವಾನ್ಸ್ ರಹಿತ ವ್ಯವಸ್ಥೆ ವ್ಯಾಪಕವಾದರೆ ಬಾಡಿಗೆ ಪಡೆಯುವವರು ತುಸುವಾದರೂ ನೆಮ್ಮದಿ ಕಾಣಬಹುದೇನೋ?