Nokia Mobile
ನೋಕಿಯಾ ಫೋನ್ ಯಾರಿಗೆ ನೆನಪಿಲ್ಲ. ಮೊಬೈಲ್ ಕ್ಷೇತ್ರದಲ್ಲಿ ಈ ಕಂಪೆನಿ ಸೃಷ್ಟಿಸಿದ್ದ ಕ್ರಾಂತಿ ಇನ್ಯಾವುದೇ ಸಂಸ್ಥೆಗಳು ಹಿಂದಿಕ್ಕಲಾರವು. ಈಗ 30 ವರ್ಷ ದಾಟಿದ ಬಹುತೇಕರ ಮೊದಲ ಮೊಬೈಲ್ ನೋಕಿಯಾ ಆಗಿತ್ತು. ಅತ್ಯಂತ ಗಟ್ಟಿ ಹೊರಮೈ ಹೊಂದಿದ್ದ, ಬಳಕೆಯಲ್ಲಿ ಸುಲಭವಾಗಿದ್ದ ಈ ಫೋನ್ ಗಳು ಬೆಲೆಯಲ್ಲಿಯೂ ಜೇಬಿಗೆ ಹಿತವಾಗಿದ್ದವು. ಆದರೆ ಸ್ಮಾರ್ಟ್ ಫೋನ್ ಯುಗದಲ್ಲಿ ಈ ಫೋನ್ ಗಳನ್ನು ಆಂಡ್ರಾಯ್ಡ್ ಫೋನ್ ಗಳು ಹಿಂದಿಕ್ಕಿದವು.
ಆಂಡ್ರಾಯ್ಡ್ ರೇಸ್ ನಲ್ಲಿ ಹಿಂದೆ ಬಿದ್ದ ನೋಕಿಯಾ, ಮೊಬೈಲ್ ನಿರ್ಮಾಣವನ್ನೇ ನಿಲ್ಲಿಸಿತ್ತು. ಆದರೆ ಇತ್ತೀಚೆಗೆ ಮತ್ತೆ ಮಾರುಕಟ್ಟೆಗೆ ಪ್ರವೇಶಿಸಿದೆ. ಈ ಬಾರಿ ತನ್ನ ಹಳೆಯ ಐಕಾನಿಕ್ ಫೋನ್ ಗಳನ್ನೇ ಹೊಸ ತಲೆಮಾರಿನವರಿಗೆ ಇಷ್ಟವಾಗುವಂತೆ ರೀ ಡಿಸೈನ್ ಮಾಡಿ ತಂದಿದೆ. 2000 ದಶಕದಲ್ಲಿ ಎಲ್ಲರ ಮೆಚ್ಚಿನ ಫೋನ್ ಆಗಿದ್ದ ನೋಕಿಯಾ 1100 ಫೋನ್ ಅನ್ನು ಹೊಸ ಡಿಸೈನ್ ಜೊತೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ ನೋಕಿಯಾ.
ನೋಕಿಯಾ 1100 5ಜಿ ಫೋನನ್ನು ನೋಕಿಯಾ ಮಾರುಕಟ್ಟೆಗೆ ತಂದಿದೆ. ಈ ಮೊಬೈಲ್ ನೋಡಲಯ ಸುಂದರವಾಗಿದ್ದು, ಕೀ ಬೋರ್ಡ್ ಮತ್ತು ಸ್ಕ್ರೀನ್ ಎರಡನ್ನೂ ಸಹ ಹೊಂದಿರುವುದು ವಿಶೇಣ. 8 ಜಿಬಿ ಶಕ್ತಿಶಾಲಿ ರ್ಯಾಮ್, 60 ಜಿಬಿ ಮೆಮೊರಿಯನ್ನು ಈ ಫೋನ್ ಒಳಗೊಂಡಿದೆ. ಸಮಕಾಲೀನ ಕೆಲವು ಫೋನ್ ಗಳಿಗೆ ಹೋಲೊಸಿದರೆ ಈ ಫೋನ್ ಗಟ್ಟಿಯಾಗಿಯೂ, ಶಕ್ತಿಯುತವಾಗಿಯೂ ಇದೆ.
ನುಗ್ಗೆಕಾಯಿ ಎಲೆಯ ಉಪಯೋಗಗಳು ಒಂದೆರಡಲ್ಲ, ಇಲ್ಲಿ ತಿಳಿಯರಿ
2k ರೆಸಲ್ಯೂಷನ್ ನ ಮೊಬೈಲ್ ಸ್ಕ್ರೀನ್ ಅನ್ನು ಈ ಫೋನ್ ಒಳಗೊಂಡಿದ್ದು ಅದ್ಭುತವಾದ ಕ್ಲಾರಿಟಿ ನೋಡಲು ಸಿಗುತ್ತದೆ. ಆಂಡ್ರಾಯ್ಡ್ ಫೋನ್ ಗಳಲ್ಲು ದೊರಕುವ ಬಹುತೇಕ ಆಯ್ಕೆಗಳು ಈ ಫೋನ್ ನಲ್ಲಿ ಲಭ್ಯವಿದ್ದು, ಕಡಿಮೆ ದರಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಆಂಡ್ರಾಯ್ಡ್ ಫೋನ್ ಗಳಿಗೆ ಸ್ಪರ್ಧೆ ನೀಡಲಾಗದೆ ಹಿನ್ನೆಲೆಗೆ ಸರಿದಿದ್ದ ನೋಕಿಯಾ ಈಗ ಹೊಸ ಫೋನ್ ಗಳ ಮೂಲಕ ಮತ್ತೆ ಮಾರುಕಟ್ಟೆಗೆ ಬಂದಿದೆ. ಒಂದು ಕಾಲದಲ್ಲಿ ಬಹು ಬೇಡಿಕೆಯ ಫೋನ್ ಆಗಿದ್ದ 1100 ಫೋನ್ ಅನ್ನು ಮತ್ತೆ ಬಿಡುಗಡೆ ಮಾಡಿದೆ ನೋಕಿಯಾ.