Online fraud
ಮನುಷ್ಯ ಹುಟ್ಟಿ, ಹಣ ಸಂಪಾದನೆ ಪ್ರಾರಂಭಿಸಿ, ಅದನ್ನು ಕೆಲವರು ಕಳ್ಳತನ ಮಾಡಿ ಬದುಕಬಹುದು ಎಂದು ಅರಿತುಕೊಂಡಾಗಿನಿಂದ ಈಗಿನ ವರೆಗೆ ಎಷ್ಟು ಹಣ ಕಳ್ಳತನ ಅಥವಾ ದರೋಡೆ ಆಗಿದೆಯೋ ಅಷ್ಟೂ ಹಣಕ್ಕಿಂತಲೂ ಹೆಚ್ಚು ಹಣ ಆನ್ ಲೈನ್ ನಲ್ಲಿ ಕೆಲವೇ ವರ್ಷಗಳಲ್ಲಿ ಲೂಟಿಯಾಗಿದೆ. ಆನ್ ಲೈನ್ ಲೂಟಿ ಎಂಬುದು ತೀರ ಸಾಮಾನ್ಯ ಎಂಬಂತಾಗಿಬಿಟ್ಟಿದ್ದು, ಎಲ್ಲಿಯೋ ಕೂತು ಎಲ್ಲಿಂದಲೋ ಯಾರದ್ದೋ ಹಣ ಲೂಟಿ ಮಾಡುತ್ತಿದ್ದಾರೆ. ಇತ್ತೀಚೆಗೆ ಕೊರಿಯನ್ನರು ಭಾರತದವರ 1967 ಕೋಟಿ ಹಣ ಲೂಟಿ ಮಾಡಿದ್ದಾರೆ. ಅದೂ ಒಂದೇ ಬಾರಿಗೆ!
ಭಾರತದ ವಾಜಿರ್‌ಎಕ್ಸ್ ಹೆಸರಿನ ಕ್ರಿಪ್ಟೋ ಕಾಯಿನ್ ಎಕ್ಸ್ ಚೇಂಜ್ ಸಂಸ್ಥೆಯ ವೆಬ್ ಸೈಟ್ ಅನ್ನು ಹ್ಯಾಕ್ ಮಾಡಿದ್ದ ಉತ್ತರ ಕೊರಿಯಾದ ಹ್ಯಾಕರ್ ಗಳು ಬರೋಬ್ಬರಿ 230 ಮಿಲಿಯನ್ ಮೌಲ್ಯದ ಕ್ರಿಟ್ಟೊ ಕರೆನ್ಸಿಯನ್ನು ಹ್ಯಾಕ್ ಮಾಡಿ ಕಬಳಿಸಿದ್ದಾರೆ. ಭಾರತದ ವಾಜಿರ್ ಎಕ್ಸ್ ಮೇಲೆ ದಾಳಿ ಮಾಡಿದ ಉತ್ತರ ಕೊರಿಯಾದ ಗುಂಪನ್ನು ಲೆಜಾರೂಸ್ ಗ್ರೂಪ್ ಎಂದು ಗುರುತಿಸಲಾಗಿದ್ದು, ಈ ಗುಂಪಿನ ಹ್ಯಾಕರ್ ಗಳೇ ಭಾರತದ ಕ್ರಿಪ್ಡೊ ಎಕ್ಸ್ ಚೇಂಜ್ ಮೇಲೆ ದಾಳಿ ಮಾಡಿ ಹಣ ಕದ್ದಿದ್ದಾರೆ ಎನ್ನಲಾಗಿದೆ.
200 ಭಿನ್ನ ಮಾದರಿಯ ಕ್ರಿಪ್ಟೋ ಕರೆನ್ಸಿಗಳನ್ನು ಈ ಗುಂಪು ಹ್ಯಾಕ್ ಮಾಡಿ ಎಗರಿಸಿದೆ. ಬಿಟ್ ಕಾಯಿನ್, ಏಥರ್, ಮ್ಯಾಟಿಕ್, ಶಿಭು ಹೀಗೆ ಹಲವಾರು ಕ್ರಿಪ್ಟೊ ಕರೆನ್ಸಿಯನ್ನು ಈ ಉತ್ತರ ಕೊರಿಯಾದ ಹ್ಯಾಕರ್ ಗಳು ಎಗರಿಸಿದ್ದಾರೆ. ಸೈಫರ್ಮೆಸ್ ಹೆಸರಿನ ಅಂತರಾಷ್ಟ್ರೀಯ ಸೈಬರ್ ಅಪರಾಧದ ತನಿಖಾ ಸಂಸ್ಥೆಯೊಂದು ಈ ಕುರಿತು ತನಿಖೆ ನಡೆಸಿದ್ದು ಹ್ಯಾಕ್ ಮೂಲಕ ಎಗರಿಸಿದ ಕ್ರಿಪ್ಟೊ ಅನ್ನು ಹ್ಯಾಕರ್ ಗಳು ಕೆಲವು ಸೇವೆಗಳಿಗೆ ಬಳಸಿಕೊಂಡಿದ್ದಾರೆ ಮತ್ತು ನಗದು ಸಹ ಮಾಡಿಕೊಂಡಿದ್ದಾರೆ ಎಂದಿದೆ.
Central Government: ಸೋಲಾರ್ ಹಾಕಿಸುವವರಿಗೆ ಕೇಂದ್ರದಿಂದ ಸಿಹಿ ಸುದ್ದಿ, ಇದು ಉಚಿತ ಯೋಜನೆ
ಲ್ಯಾಜರ್ಸ್ ಗ್ರೂಪ್ ಅಲಿಯಾಸ್ ಎಪಿಟಿ38 ಆರ್ಥಿಕ ಅಪರಾಧಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಕ್ರಿಪ್ಟೊ ಕರೆನ್ಸಿ ಎಕ್ಸ್ ಚೇಂಜ್, ವಿದೇಶಿ ಬ್ಯಾಂಕ್ ಗಳು, ಫಿಶ್ಶಿಂಗ್ ಕಂಪೆನಿಗಳು, ಸಾಫ್ಟ್ ವೇರ್ ಸಂಸ್ಥೆಗಳನ್ನು ಹ್ಯಾಕ್ ಮಾಡುವುದೇ ಈ ಗುಂಪಿನ ಕೆಲಸ. ಈ ವರೆಗೆ ಲಕ್ಷಾಂತರ ಕೋಟಿ ಮೌಲ್ಯದ ಹಣ ಮತ್ತು ಕ್ರಿಪ್ಟೊ ಕರೆನ್ಸಿಯನ್ನು ಹ್ಯಾಕ್ ಮಾಡಿ ಎಗರಿಸಿದೆ ಈ ಗುಂಪು. 2016 ಮತ್ತು 2017 ರಿಂದ ಸಕ್ರಿಯವಾಗಿರುವ ಈ ಹ್ಯಾಕರ್ ಗಳ ಗುಂಪು ಉತ್ತರ ಕೊರಿಯಾದಲ್ಲಿದ್ದುಕೊಂಡು ವಿಶ್ವದ ಹಲವು ದೇಶಗಳ ಕ್ರಿಪ್ಟೊ ಎಕ್ಸ್ ಚೇಂಜ್ ಗಳ ಮೇಲೆ ದಾಳಿ ಮಾಡಿ ಲಕ್ಷಾಂತರ ಕೋಟಿ ಮೌಲ್ಯದ ಕ್ರಿಪ್ಟೊ ಕರೆನ್ಸಿಯನ್ನು ದೋಚಿದೆ.