Nostradamus: 2025 ರಲ್ಲಿ ನಡೆಯಲಿದೆ ಘೋರಾತಿ ಘೋರ ಘಟನೆಗಳು, ನಾಸ್ಟ್ರೊಡಾಮಸ್ ಭವಿಷ್ಯ

0
307
Nostradamus
Nostradamus prediction about year 2025

Nostradamus

2025 ಪ್ರಾರಂಭವಾಗಿದೆ. ಪ್ರತಿ ಬಾರಿ ಹೊಸ ವರ್ಷ ಬಂದಾಗಲೂ ಏನೋ ಹೊಸತಾಗುತ್ತದೆ, ನಮ್ಮ ಜೀವನಗಳು ಬದಲಾಗುತ್ತವೆ ಎಂಬ ನಿರೀಕ್ಷೆ ಮೂಡಿಯಢ ಮೂಡುತ್ತದೆ. ಈ ಬಾರಿಯೂ ಸಹ 2025 ಮಾನವ ಕುಲಕ್ಕೆ ಏನೋ ಒಳಿತು ಮಾಡುತ್ತದೆ ಎಂಬ ನಿರೀಕ್ಷೆ ಹಲವರದ್ದು. ಆದರೆ ಈ ವರ್ಷ ಅತ್ಯಂತ ಅಪಾತಕಾರಿ ಆಗಿ ಇರಲಿದೆ ಎಂದು ಭವಿಷ್ಯ ನುಡಿದಿದ್ದಾರೆ ವಿಶ್ವದ ಜನಪ್ರಿಯ ಭವಿಷ್ಯಕಾರ್ತಿ ಬಾಬಾ ವಂಗಾ. ನಾಸ್ಟ್ರೊಡಾಮಸ್ ಸಹ ಇದೇ ಭವಿಷ್ಯ ನುಡಿದಿದ್ದಾನಂತೆ.

ನಾಸ್ಟ್ರೋಡಾಮಸ್ ನುಡಿದಿರುವ ಭವಿಷ್ಯದಂತೆ ಬೃಹತ್ ಆಕಾಶ ಕಾಯವೊಂದು ಭೂಮಿಗೆ ಬಲು ಹತ್ತಿರ ಬರಲಿದೆಯಂತೆ‌. ಇದರಿಂದಾಗಿ ಭೂಮಿಯ ಮೇಲೆ ಭಾರಿ ಬದಲಾವಣೆಗಳು ಆಗಲಿವೆ. ಭೂಮಿಯ ಭವಿಷ್ಯವನ್ನು ಆ ಆಕಾಶಕಾಯ ನಿರ್ಧರಿಸಲಿದೆ ಎಂದು ನಾಸ್ಟ್ರೋಡಾಮಸ್ ಹೇಳಿದ್ದಾನೆ. ಭೂಮಿಯ ಮೇಲಿನ ತಾಪಮಾನದಲ್ಲಿ ವ್ಯತ್ಯಾಸ ಆಗಲಿದೆ ಎಂದು ನಾಸ್ಟ್ರೋಡಾಮಸ್ ನುಡಿದಿದ್ದಾನೆ.

ಈಗಾಗಲೇ ಚಾಲ್ತಿಯಲ್ಲಿರುವ ಯುದ್ಧಗಳು ನಿಲ್ಲುತ್ತವೆ. ಯುದ್ಧದಲ್ಲಿ ಹಲವು ದೇಶಗಳು‌ ನಷ್ಟ ಅನುಭವಿಸಲಿವೆ ಎಂದು ನಾಸ್ಟಾಡಾಮಸ್ ಹೇಳಿದ್ದಾನೆ. ಆದರೆ ಒಂದು ದೊಡ್ಡ ದೇಶ ದಿವಾಳಿ ಆಗಲಿದೆ ಎಂದು ಸಹ ನಾಸ್ಟ್ರಡಾಮಸ್ ಭವಿಷ್ಯ ನುಡಿದಿದ್ದಾನೆ. ದೊಡ್ಡ ದೇಶದಲ್ಲಿ ರಾಜಕೀಯ ಅರಾಜಕತೆ ಉಂಟಾಗಲಿದೆಯಂತೆ. ಬ್ರಿಟೀಷ್ ರಾಯಲ್ ಕುಟುಂಬದಲ್ಲಿ ದೊಡ್ಡ ಬಿರುಕು ಮೂಡಲಿದೆಯಂತೆ. ಬ್ರಿಟನ್ ದೇಶಕ್ಕೆ ಇದು ಮಾರಕ ಆಗಲಿದೆಯಂತೆ. ಕೆಲವು ದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣ ಆಗಲಿದೆ, ಕೆಲವು ದೇಶಗಳಲ್ಲಿ ಅನಾರೋಗ್ಯ ವಿಪರೀತ ಕಾಡಲಿದೆ ಇತ್ಯಾದಿಗಳ ಬಗ್ಗೆಯೂ ನಾಸ್ಟ್ರೋಡಾಮಸ್ ಭವಿಷ್ಯ ನುಡಿದಿದ್ದಾನೆ.

Weekly Astrology: ಈ ವರ್ಷದ ಕೊನೆಯ ವಾರ ಯಾರ ಭವಿಷ್ಯ ಹೇಗಿದೆ?

ನಾಸ್ಟ್ರೊಡಾಮಸ್ ಫ್ರೆಂಚ್ ಮೂಲದ ಭವಿಷ್ಯಕಾರ. 1503 ರಿಂದ 1566 ರ ವರೆಗೆ ಜೀವಂತ ಇದ್ದ ನಾಸ್ಟ್ರೊಡಾಮಸ್ ತನ್ನ 942 ಕವಿತೆಗಳ ಮೂಲಕ ಸಾವಿರಾರು ವರ್ಷದ ಭವಿಷ್ಯವನ್ನು ನುಡಿದಿದ್ದಾನೆ. ಬಾಬಾ ವಂಗಾ ಮತ್ತು ನಾಸ್ಟ್ರೊಡಾಮಸ್ ವಿಶ್ವದ ಅತ್ಯಂತ ಜನಪ್ರಿಯ ಭವಿಷ್ಯಕಾರರು.

LEAVE A REPLY

Please enter your comment!
Please enter your name here