Nothing CMF Phone1
ಸ್ಮಾರ್ಟ್ ಫೋನ್ ಯುಗದಲ್ಲಿ ಗ್ರಾಹಕನಿಗೆ ಹಲವಾರು ಆಯ್ಕೆಗಳಿವೆ. ಅದರಲ್ಲೂ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಹೊಂದಿರುವ ಫೋನು ಖರೀದಿ ಮಾಡಬೇಕು ಎಂದುಕೊಂಡ ಗ್ರಾಹಕನಿಗಂತೂ ಆಯ್ಕೆಯ ಸಮುದ್ರವೇ ಇದೆ. ಆದರೆ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದು ಅವನ ಸಮಸ್ಯೆ. ಇದೀಗ ಮಾರುಕಟ್ಟೆಯಲ್ಲಿ ಹೊಸ ಸ್ಮಾರ್ಟ್ ಫೋನ್ ಒಂದು ಬಿಡುಗಡೆ ಆಗಿದೆ. ಕಡಿಮೆ ಬೆಲೆಯ ಈ ಸ್ಮಾರ್ಟ್ ಫೋನ್, ದೈತ್ಯ ಸಂಸ್ಥೆಗಳಾಗಿರುವ ಸ್ಯಾಮ್ ಸಂಗ್, ಎಂಐ, ಆಪಲ್ ಗೂ ನಡುಕ ಹುಟ್ಟಿಸುತ್ತಿದೆ.
ಕೆಲ ವರ್ಷಗಳ ಹಿಂದಷ್ಟೆ ಬಿಡುಗಡೆ ಆಗಿದ್ದ ‘ನಥಿಂಗ್’ ಸಂಸ್ಥೆ ಆರಂಭದಿಂದಲೂ ತನ್ನ ಭಿನ್ನ ಡಿಸೈನ್ ಲುಕ್ ನಿಂದ ಗಮನ ಸೆಳೆಯುತ್ತಿದೆ. ಸಾಂಪ್ರದಾಯಿಲ ಡಿಸೈನ್ ಥಿಯರಿಗಳಿಗೆ ಗುಡ್ ಬೈ ಹೇಳಿ ಬ್ಯಾಕ್ ಲೆಸ್ ಡಿಸೈನ್ ಮೂಲಕವೇ ನಥಿಂಗ್ ಫೋನು ಮಾರುಕಟ್ಟೆಗೆ ಎಂಟ್ರಿ ನೀಡಿತ್ತು. ಈಗ ಇದೇ ಸಂಸ್ಥೆ ಸಿಎಂಎಫ್ ಹೆಸರಿನ ಹೊಸ ಫೋನು ಬಿಡುಗಡೆ ಮಾಡಿದ್ದು, ಹೆಚ್ಚೇನು ಬೆಲೆ ಹೊಂದಿರದ ಈ ಫೋನ್ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುವ ಸಾಧ್ಯತೆಯಂತೂ ಇದೆ.
ಮತ್ತೆ ಬಂತು ನೋಕಿಯಾ 1100, ಬೆಲೆ ಎಷ್ಟು? ವಿಶೇಷತೆಗಳೇನು?
ನಥಿಂಗ್ ನ ಸಿಎಂಎಫ್ ಫೋನು ತನ್ನ ಡಿಸೈನ್ ನಿಂದ ಗಮನ ಸೆಳೆಯುತ್ತಿದೆ. ಈ ಫೋನಿನ ಹಿಂಬದಿಯನ್ನು ನಿಮ್ಮ ಆಯ್ಕೆಗೆ ತಕ್ಕಂತೆ ಬದಲಾಯಿಸಿಕೊಳ್ಳಬಹುದು! ಹೌದು ಈ ಫೋನಿನ ಬ್ಯಾಕ್ ಕವರ್ ಅನ್ನು ಗ್ರಾಹಕರೇ ತೆಗೆದು ಬೇರೆಯ ಕವರ್ ಹಾಕಿಕೊಳ್ಳುವ ಅವಕಾಶವನ್ನು ನಥಿಂಗ್ ನೀಡಿದೆ. ಕವರ್ ಗಳನ್ನು ಸಹ ಕಂಪೆನಿಯೇ ನೀಡುತ್ತಿದೆ. ಈ ಫೋನಿನ ಜೊತೆಗೆ ಒಂದು ಸ್ಮಾರ್ಟ್ ಫೋನ್ ಸೇರಿದಂತೆ ಇನ್ನೂ ಕೆಲವು ಅವಶ್ಯಕ ಗೆಜೆಟ್ ಗಳು ಸಹ ದೊರಕುತ್ತವೆ.
ಫೋನ್ ನಲ್ಲಿ 6 ಜಿಬಿ ಮತ್ತು 8 ಜಿಬಿ ರ್ಯಾಮ್ ಒಳಗೊಂಡ ಎರಡು ಮಾದರಿಯ ಫೋನ್ ಗಳು ಲಭ್ಯವಿದೆ, 128 ಜಿಬಿ ಇಂಟರ್ನಲ್ ಮೆಮೋರಿ ಇದೆ. ಮೆಮೊರಿ ಕಾರ್ಡ್ ಮೂಲಕ ಇದನ್ನು 1 ಟಿಬಿ ವರೆಗೆ ಹೆಚ್ಚಿಸಿಕೊಳ್ಳಬಹುದು. 5000 ಮೆಗಾ ಹರ್ಟ್ಜ್ ಬ್ಯಾಟರಿ ಹೊಂದಿದ್ದು, ಇದು ಕೆಲವೇ ನಿಮಿಷಗಳಲ್ಲಿ ಫೋನ್ ಅನ್ನು ಫುಲ್ ಚಾರ್ಜ್ ಮಾಡುತ್ತದೆ. 50 ಮೆಗಾ ಪಿಕ್ಸಲ್ ಸೋನಿ ಕ್ಯಾಮೆರಾ, ಸ್ಯಾಮ್ ಸಂಗ್ ನ ಅತ್ಯುತ್ತಮ ಫೋನ್ ಗಳಲ್ಲಿ ಸಿಗುವ ಡಿಸ್ಪ್ಲೇ ಈ ಫೋನ್ ನಲ್ಲಿ ಲಭ್ಯವಿದೆ. ಎರಡು ಸಿಮ್ ಹಾಕುವ ಅವಕಾಶ, ಅತ್ಯುತ್ತಮ ಪ್ರೋಸೆಸರ್, ಗೇಮಿಂಗ್ ಅನುಕೂಲವಾಗುವ ಗ್ರಾಫಿಕ್ಸ್, ಚಿಪ್ ಗಳು ಸಹ ಈ ಫೋನ್ ನಲ್ಲಿ ಲಭ್ಯವಿವೆ.
‘ನಥಿಂಗ್ ಸಿಎಂಎಫ್ ಫೋನ್ 1’ ಈ ಸ್ಮಾರ್ಟ್ ಫೋನ್ ನ ಮೂರ್ಣ ಹೆಸರಾಗಿದ್ದು, ಈ ಫೋನು ಭಾರತದಲ್ಲಿ ಜುಲೈ 12 ರಂದು ಬಿಡುಗಡೆ ಆಗಲಿದೆ.