Site icon Samastha News

Manu Bhaker: ಭಾರತಕ್ಕೆ‌‌ ಪದಕ ಗೆಲ್ಲಿಸಿಕೊಟ್ಟ ಮನು ಹಿಂದಿರುವ ಕೋಚ್ ಗೆ ತುರ್ತಾಗಿ ಬೇಕಿದೆ ಉದ್ಯೋಗ

Manu Bhaker

Manu Bhaker

ಪ್ಯಾರಿಸ್ ಒಲಿಂಪಿಕ್ಸ್ ನ ಆರಂಭದಲ್ಲಿಯೇ ಭಾರತಕ್ಕೆ ಪದಕ‌ ದೊರೆತಿದೆ. ಎರಡು ಶೂಟಿಂಗ್ ಸ್ಪರ್ಧೆಗಳಲ್ಲಿ ಭಾರತಕ್ಕೆ ಕಂಚಿನ ಪದಕ ಲಭಿಸಿದೆ. ವಿಶೇಷವೆಂದರೆ ಎರಡೂ ಪದಕಗಳ ಗೆಲುವಿನಲ್ಲಿಯೂ ಮನು ಬಾಕೆರ್ ಪಾತ್ರವಿದೆ. ಒಂದೇ ಒಲಂಪಿಕ್ಸ್ ನಲ್ಲಿ ಎರಡು ಪದಕ ಪಡೆದ‌ ಏಕೈಕ ಭಾರತೀಯ ಅಥ್ಲೀಟ್ ಎಂಬ ಖ್ಯಾತಿಗೆ ಮನು ಪಾತ್ರವಾಗಿದ್ದಾರೆ. ಮನುಗೆ ಈಗಾಗಲೇ ಹಲವು ಜಾಹೀರಾತು ಅವಕಾಶಗಳು ಬರುತ್ತಿವೆ. ಆದರೆ ಮನು ಅವರನ್ನು ತರಬೇತು ಮಾಡಿದ ಕೋಚ್ ಎಂಥಹಾ ಕಷ್ಟದ ದಿನಗಳನ್ನು ದೂಡುತ್ತಿದ್ದಾರೆ ಗೊತ್ತೆ.

ಎಲ್ಲರೂ ಮನು ಸಾಧನೆಯನ್ನು ಕೊಂಡಾಡುತ್ತಿದ್ದಾರೆ ಆದರೆ ಮನು ಅನ್ನು ತರಬೇತಿಗೊಳಿಸಿದ ಕೋಚ್ ರಾಣಾ ಪಟ್ಟ ಕಷ್ಟಗಳು ಈಗ ಬೆಳಕಿಗೆ ಬರುತ್ತಿವೆ. ಕೋಚ್ ರಾಣಾ ಕಳೆದ ಮೂರು ವರ್ಷಗಳಿಂದ ಒಂದು ತಿಂಗಳು ಸಹ ಸಂಬಳ ಪಡೆಯದೆ ಮನು ಹಾಗೂ ಇತರ ಆಟಗಾರರಿಗೆ ತರಬೇತಿ ನೀಡುತ್ತಿದ್ದಾರೆ. ಈ ಮುಂಚೆ ಉಳಿತಾಯ ಮಾಡಿದ ಹಣದಲ್ಲಿ ಹಾಗೂ ಒಲಿಂಪಿಕ್‌ ಫೆಡರೇಷನ್ ಕೊಟ್ಟ ಅಲ್ಪ ಸ್ವಲ್ಪ ಹಣದಲ್ಲಿ ಅವರ ಮನೆ ನಡೆಯುತ್ತಿದೆಯಂತೆ. ಇದಕ್ಕೆ ಅವರು ಪಿಟಿ ಉಷಾ ಅವರಿಗೆ ಧನ್ಯವಾದ ಹೇಳುತ್ತಾರೆ.

ಭಾರತದ ಶೂಟಿಂಗ್ ಫೆಡರೇಷನ್ ಕೋಚ್‌ಗಳಿಗೆ ಯಾವುದೇ ರೀತಿಯ ಸಂಬಳ ನೀಡುವುದಿಲ್ಲ. ಈಗ ಸದ್ಯಕ್ಕೆ ನನಗೆ ಮನೆ ನಡೆಸಲು ಕೆಲಸವೊಂದು ಬೇಕಾಗಿದ್ದು, ಭಾರತಕ್ಕೆ ಮರಳಿದ ಕೂಡಲೆ ಸಂಬಳ ನೀಡುವ, ಹಣ ಸಂಪಾದನೆ ಆಗುವ‌ ಉದ್ಯೋಗವೊಂದನ್ನು ಹುಡುಕಿಕೊಳ್ಳಬೇಕು. ಭಾರತಕ್ಕೆ ಮರಳಿದ ಮೇಲೆ ಅದೇ ನನ್ನ ಮೊದಲ ಆದ್ಯತೆ ಎಂದಿದ್ದಾರೆ.

Tharun Sudhir: ನಿರ್ದೇಶಕ ತರುಣ್, ನಟಿ ಸೋನಲ್ ಮದುವೆ ಆಮಂತ್ರಣ ಪತ್ರಿಕೆ ನೋಡಿದಿರಾ?

ಟೋಕಿಯೋ ಗೇಮ್ಸ್ ನಲ್ಲಿ ಆದ ಅವಮಾನವನ್ನು ಇನ್ನೂ ಮರೆಯದ ರಾಣಾ, ಟೋಕಿಯೋ ಗೇಮ್ಸ್ ನಲ್ಲಿ ಮನು ಅವರು ಬಳಸುತ್ತಿದ್ದ ಬಂದೂಕು‌ ಸಮಸ್ಯೆ ಕೊಟ್ಟಿದ್ದರಿಂದ ಪದಕ ಗೆಲ್ಲಲಾಗಿರಲಿಲ್ಲ. ಆಗ ಹಲವಾರು ಜನ ಅದಕ್ಕೆ ನನ್ನನ್ನು ಹೊಣೆಗಾರರನ್ನಾಗಿ ಮಾಡಿದರು. ನನ್ನಿಂದಲೇ ತಪ್ಪಾಯ್ತು ಎಂದರು. ನಿಂದಿಸಿದರು. ಅಸಲಿಗೆ ಟೋಕಿಯೋ ಗೇಮ್ಸ್ ಗೆ ನಾನು ಹೋಗಿರಲೂ ಇಲ್ಲ. ಆದರೆ ಯಾರು ಆಗ ನನ್ನನ್ನು ಟೀಕಿಸಿದ್ದರೊ ಈಗ ಅವರೇ ನನ್ನ ಸಂದರ್ಶನಕ್ಕಾಗಿ ಹಿಂದೆ ಬಿದ್ದಿದ್ದಾರೆ ಎಂದಿದ್ದಾರೆ ರಾಣಾ.

ಶಿಷ್ಯೆ ಮನು ಬಗ್ಗೆ ಹೆಮ್ಮೆಯಿಂದ ಮಾತನಾಡಿರುವ ರಾಣಾ, ನಾನು ಮೆಪ ಮಾತ್ರ, ಮನು ನಿಜವಾದ ಸ್ಟಾರ್. ಸಾಧನೆಯೆಲ್ಲ ಆಕೆಯದ್ದೆ, ನಾನು ನೆಪ ಮಾತ್ರ. ಸಹಾಯ ಮಾಡುವಂತೆ ನನ್ನನ್ನು ಕೇಳಿ ನನಗೆ ಪ್ರಾಮುಖ್ಯತೆಯನ್ನು ಮನು ತಂದುಕೊಟ್ಟಿದ್ದಾರೆ. ಇಲ್ಲವಾದರೂ ನಾನು ಯಾರೂ ಅಲ್ಲ, ನಾನೊಬ್ಬ ಅಮುಖ್ಯ ಎಂದಿದ್ದಾರೆ ರಾಣಾ.

Exit mobile version