ONDC
ಆಹಾರ ಡೆಲಿವರಿಯಲ್ಲಿ ಇಡೀ ಭಾರತದಲ್ಲಿ ಸ್ವಿಗ್ಗಿ ಮತ್ತು ಜೊಮ್ಯಾಟೊ ಏಕಮೇವಾಧಿಪತ್ಯ ಸಾಧಿಸಿವೆ. ಸ್ವಿಗ್ಗಿ-ಜೊಮ್ಯಾಟೊ ಹೊರತಾಗಿ ಊಬರ್ ಈಟ್ಸ್ ಇನ್ನಿತರೆ ಕೆಲವು ಆಪ್ ಗಳು ಫೂಡ್ ಡೆಲಿವರಿ ಮಾಡುತ್ತವೆಯಾದರೂ ಸ್ವಿಗ್ಗಿ-ಜೊಮ್ಯಾಟೊ ಮುಂದೆ ಅವೆಲ್ಲ ತೃಣಕ್ಕೆ ಸಮಾನ. ಫೂಡ್ ಡೆಲಿವರಿ ಕ್ಷೇತ್ರದಲ್ಲಿ ಏಕಚಕ್ರಾಧಿಪತ್ಯ ಸಾಧಿಸಿರುವ ಕಾರಣ ಈ ಎರಡು ಸಂಸ್ಥೆಗಳು ದುಬಾರಿ ಡೆಲಿವರಿ ಚಾರ್ಜ್, ಇತರೆ ಹಿಡನ್ ಚಾರ್ಜ್, ಹೋಟೆಲ್ ನವರಿಗೆ ಕಡಿಮೆ ಹಣ ನೀಡುವುದು ಮಾಡಿಕೊಂಡು ಬಂದಿವೆ. ಆದರೆ ಜೊಮ್ಯಾಟೊ-ಸ್ವಿಗ್ಗಿಯ ಈ ಮೊನೊಪಾಲಿಗೆ ಬೆಂಗಳೂರಿನ ಹೋಟೆಲ್ ಒಕ್ಕೂಟವೊಂದು ಠಕ್ಕರ್ ಕೊಟ್ಟಿದೆ.
ಭಾರತದಲ್ಲೇ ಅತಿ ಹೆಚ್ಚು ಆನ್ ಲೈನ್ ಫುಡ್ ಆರ್ಡರ್ ಮಾಡುವ ಎರಡನೇ ನಗರ ಬೆಂಗಳೂರು. ಸಹಜವಾಗಿಯೇ ಇಲ್ಲಿ ಜೊಮ್ಯಾಟೊ ಹಾಗೂ ಸ್ವಿಗ್ಗಿಯ ಹಿಡಿತ ಜೋರಾಗಿದೆ. ಆದರೆ ಈ ಫುಡ್ ಡೆಲಿವರಿ ಸಂಸ್ಥೆಗಳ ಸೊಕ್ಕಿಳಿಸುತ್ತಿದೆ ಬೃಹತ್ ಬೆಂಗಳೂರು ಹೋಟೆಲರೀಸ್ ಅಸೋಸಿಯೇಷನ್ (BBHA). ಬಿಬಿಎಚ್ಎ, ಒಪನ್ ನೆಟ್ ವರ್ಕ್ ಆಫ್ ಡಿಜಿಟಲ್ ಕಾಮರ್ಸ್ (ONDC) ಪ್ರಾರಂಭ ಮಾಡಿದ್ದು, ಆನ್ ಲೈನ್ ಫುಡ್ ಡೆಲಿವರಿ ಪ್ರಾರಂಭ ಮಾಡಿದೆ. ಅದೂ ಸ್ವಿಗ್ಗಿ ಹಾಗೂ ಜೊಮ್ಯಾಟೊಗಿಂತಲೂ ಕಡಿಮೆ ದರಕ್ಕೆ.
ಪೊಲಾ ಕನ್ಸ್ಯೂಮರ್ ಅಪ್ಲಿಕೇಶನ್ ಅನ್ನು ಆರ್ಡರ್ ಬುಕ್ ಮಾಡಲು ಬಳಕೆ ಮಾಡಿಕೊಳ್ಳುತ್ತಿದ್ದು, ಇದೀಗ ಪ್ರತಿದಿನ 50 ರಿಂದ 60 ಡೆಲಿವರಿಗಳನ್ನು ಓಎನ್’ಡಿಸಿ ಮಾಡುತ್ತಿದೆ. 2023 ರಲ್ಲಿ ಈ ಓಎನ್’ಡಿಸಿ ಪ್ರಾರಂಭವಾಗಿದ್ದು, ಬೆಂಗಳೂರಿನ ವಿಧ್ಯಾರ್ಥಿ ಭವನ್, ಸಿಟಿಆರ್, ಎಂಟಿಆರ್ ಇನ್ನೂ ಅನೇಕ ಪ್ರಸಿದ್ಧ ಹೋಟೆಲ್ ಗಳು ಓಎನ್’ಡಿಸಿ ಅಡಿಯಲ್ಲಿ ರೆಜಿಸ್ಟರ್ ಆಗಿದ್ದು ಆಹಾರ ಡೆಲಿವರಿ ಮಾಡುತ್ತಿವೆ. ಪ್ರಸ್ತುತ ಬಿಬಿಎಚ್ಎ ನಲ್ಲಿ ನೊಂದಣಿ ಆಗೊರುವ 300 ಹೋಟೆಲ್ ಗಳು ಓಎನ್’ಡಿಸಿ ಮೂಲಕ ಆಹಾರ ಡೆಲಿವರಿ ಮಾಡುತ್ತಿವೆ.
‘ಆನ್’ಲೈನ್ ಫುಡ್ ಡೆಲಿವರಿ ಕ್ಷೇತ್ರದಲ್ಲಿ ಮೊನೊಪೊಲಿ ಸೃಷ್ಟಿಯಾಗಿದೆ. ಎರಡು ಸಂಸ್ಥೆಗಳಷ್ಟೆ ಈ ಕ್ಷೇತ್ರದಲ್ಲಿವೆ. ಇದರಿಂದಾಗಿ ಅವರು ಹಾಕಿದ್ದೆ ಡೆಲಿವರಿ ಚಾರ್ಜು, ಅವರು ಹಾಕಿದ್ದೆ ಸರ್ ಚಾರ್ಜ್, ಅವರು ಕೊಟ್ಟಿದ್ದೆ ದುಡ್ಡು ಎನ್ನುವಂತಾಗಿದೆ. ಇದರಿಂದಾಗಿ ಗ್ರಾಹಕರು ಬವಣೆ ಅನುಭವಿಸುವಂತಾಗಿದೆ. ದುಪ್ಪಟ್ಟು ಹಣ ಕೊಟ್ಟು ಆಹಾರ ತಿನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಹಕರಿಕೆ ಕಡಿಮೆ ಹಣದಲ್ಲಿ ಆಹಾರ ಲಭ್ಯವಾಗಬೇಕು ಎಂಬ ಕಾರಣಕ್ಕೆ ಓಎನ್’ಡಿಸಿ ಪ್ರಾರಂಭ ಮಾಡಿದ್ದೇವೆ’ ಎಂದಿದ್ದಾರೆ ಬಿಬಿಎಚ್ಎ ಅಧ್ಯಕ್ಷ ಪಿಸಿ ರಾವ್.
‘ಪ್ರಸ್ತುತ 300 ಹೋಟೆಲ್ ಗಳು ಬಿಬಿಎಚ್ಎ ಅಡಿಯಲ್ಲಿ ನೊಂದಣಿ ಆಗಿವೆ. ಕನಿಷ್ಟ 1000 ಹೋಟೆಲ್’ಗಳಾದರೂ ನೊಂದಣಿ ಆದರೆ ಈಗ ಆಹಾರ ಡೆಲಿವರಿ ಮಾಡುತ್ತಿರುವುದಕ್ಕಿಂತಲೂ 15-20% ಕಡಿಮೆ ಮೊತ್ತಕ್ಕೆ ನಾವು ಆಹಾರ ಡೆಲಿವರಿ ಮಾಡಬಹುದು. ಈಗ ಸ್ವಿಗ್ಗಿ ಅಥವಾ ಜೊಮ್ಯಾಟೋನಲ್ಲಿ ಕನಿಷ್ಟ 130 ರೂಪಾಯಿಗೂ ಕಡಿಮೆ ಬೆಲೆಗೆ ಆಹಾರ ಆರ್ಡರ್ ಮಾಡಲು ಆಗುವುದಿಲ್ಲ ಆದರೆ ಓಎನ್’ಡಿಸಿಯಲ್ಲಿ ಕೇವಲ 30 ರೂಪಾಯಿಗೆ ಆರ್ಡರ್ ಮಾಡಬಹುದು’ ಎಂದಿದ್ದಾರೆ ಪಿಸಿ ರಾವ್.
Mantri Developers: ಮಂತ್ರಿ ಮಾಲೀಕನ ವಿರುದ್ಧ ಜಾಮೀನುರಹಿತ ವಾರೆಂಟ್
ಆದರೆ ಈ ಆಪ್ ಇನ್ನೂ ಈಗ ಪ್ರಾರಂಭಿಕ ಹಂತದಲ್ಲಿದ್ದು, ಕೆಲವು ಸಮಸ್ಯೆಗಳು ಆಪ್ ನಲ್ಲಿವೆ. ಹೆಚ್ಚು ಹೋಟೆಲ್ ಗಳು ಸೇರಿಕೊಂಡಷ್ಟೂ ಇನ್ನಷ್ಟು ಪರಿಣಾಮಕಾರಿಯಾಗಿ ಸೇವೆ ಒದಗಿಸಬಹುದು ಎಂದಿದ್ದಾರೆ ಅಧ್ಯಕ್ಷರು.