Prabhas: ಮತ್ತೆ ರಾಮಾಯಣದ ತಂಟೆಗೆ, ಸೋತರು ಬುದ್ಧಿ ಬರಲಿಲ್ಲವೇ ಪ್ರಭಾಸ್’ಗೆ

0
129
Prabhas-Ramayana

Prabhas

ಪ್ರಭಾಸ್, ಭಾರತದ ಸ್ಟಾರ್ ನಟ, ಸಿಬಿಮಾದಲ್ಲಿ ಅವರಿದ್ದರೆ ಸಾಕು ಬ್ಲಾಕ್‌ಬಸ್ಟರ್ ಆಗಿ ಬಿಡುತ್ತದೆ ಎಂಬ ನಂಬಿಕೆ ಇತ್ತು, ಇದೇ ನಂಬಿಕೆ ಇಂದ ರಾಮಾಯಣ ಕತೆ ಆಧರಿತ ‘ಆದಿಪುರುಷ್’ ಸಿನಿಮಾ ಮಾಡಲಾಯ್ತು. ಆದರೆ ಆ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದ್ದು ಮಾತ್ರವೇ ಅಲ್ಲದೆ ವಿವಾದವನ್ನೂ ಮೈ ಮೇಲೆ ಎಳೆದುಕೊಂಡಿತು. ಸಿನಿಮಾ ವಿರುದ್ಧ ಹಲವು ದೂರುಗಳು ದಾಖಲಾದವು. ಇಷ್ಟೆಲ್ಲ ಆದರೂ ಸಹ ಪ್ರಭಾಸ್ ಈಗ ಮತ್ತೊಮ್ಮೆ ರಾಮಾಯಣದ ತಂಟೆಗೆ ಹೋಗುತ್ತಿದ್ದಾರೆ. ಮತ್ತೊಮ್ಮೆ ರಾಮಾಯಣ ಕತೆ ಆಧರಿತ ಸಿನಿಮಾದಲ್ಲಿ ನಟಿಸಲು ಮುಂದಾಗಿದ್ದಾರೆ.

ಬಾಲಿವುಡ್’ನ ಖ್ಯಾತ ನಿರ್ದೇಶಕ ನಿತಿಶ್ ತಿವಾರಿ ರಾಮಾಯಣ ಕತೆ ಆಧರಿತ ಸಿನಿಮಾ ನಿರ್ದೇಶಿಸುತ್ತಿರುವುದು ಹಳೆಯ ವಿಷಯ. ಈ ಸಿನಿಮಾದಲ್ಲಿ ಕನ್ನಡಿಗ ಯಶ್, ರಾವಣನ ಪಾತ್ರದಲ್ಲಿ ನಟಿಸಲಿದ್ದಾರೆ. ರಣ್’ಬೀರ್ ಕಪೂರ್ ಶ್ರೀರಾಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಾತಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಇದೇ ಸಿನಿಮಾದ ಪವರ್’ಫುಲ್ ಪಾತ್ರದಲ್ಲಿ ಪ್ರಭಾಸ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

‘ಆದಿಪುರುಷ್’ ಸಿನಿಮಾನಲ್ಲಿ ಶ್ರೀರಾಮನ ಪಾತ್ರದಲ್ಲಿ ಪ್ರಭಾಸ್ ನಟಿಸಿದ್ದರು, ಈಗ ನಿತಿಶ್ ತಿವಾರಿ ನಿರ್ದೇಶನದ ರಾಮಾಯಣ ಕತೆ ಆಧರಿಸಿದ ಸಿನಿಮಾದಲ್ಲಿ ಪ್ರಭಾಸ್ ಪರುಶಾರಮನ ಪಾತ್ರದಲ್ಲಿ ನಟಿಸಲಿದ್ದಾರೆ. ಪ್ರಭಾಸ್ ಅವರದ್ದು ಒಂದು ರೀತಿ ಅತಿಥಿ ಪಾತ್ರವಂತೆ. ಕೆಲವೇ ನಿಮಿಷಗಳ ಕಾಲ ಬಂದು ಹೋದರೂ ಸಹ ಭಾರಿ ಪವರ್’ಫುಲ್ ಆಗಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರಂತೆ ಪ್ರಭಾಸ್.

Rakul Preet Singh: ಹೇಳದೆ ಕೇಳದೆ ಪ್ರಭಾಸ್ ಸಿನಿಮಾದಿಂದ ತೆಗೆದರು: ಖ್ಯಾತ ನಟಿ ಆರೋಪ

ಆದರೆ ಪ್ರಭಾಸ್ ಮತ್ತೊಮ್ಮೆ ರಾಮಾಯಣ ಆಧರಿಸಿದ ಸಿನಿಮಾದಲ್ಲಿ ನಟೊಸುತ್ತಿರುವುದು ಅವರ ಅಭಿಮಾನಿಗಳಲ್ಲಿ ಸಣ್ಣ ಆತಂಕ ಮೂಡಿಸಿದೆ. ‘ಆದಿಪುರುಷ್’ ಸಿನಿಮಾ ಸೋತಾಗ ಕೆಲವರು ಹೇಳಿದ್ದ ಪ್ರಕಾರ, ಪ್ರಭಾಸ್’ಗೆ ಪೌರಾಣಿಕ ಪಾತ್ರಗಳು ಆಗಿಬರುವುದಿಲ್ಲ, ವಿಶೇಷವಾಗಿ ರಾಮಾಯಣ, ಮಹಾಭಾರತದ‌ಂಥಹಾ ಮಹಾ ಪೌರಾಣಿಕ ಸಿನಿಮಾಗಳಿಂದ ಕೆಲವು ನಟರು ದೂರ ಇದ್ದರೆ ಸೂಕ್ತ. ಅಂಥಹವರಲ್ಲಿ ಪ್ರಭಾಸ್ ಸಹ ಒಬ್ಬರು ಎಂದಿದ್ದರು.

ಆದರೆ ಆ ಎಲ್ಲ ಎಚ್ಚರಿಕೆಗಳನ್ನು ಮೀರಿ ನಟ ಪ್ರಭಾಸ್ ಈಗ ಮತ್ತೊಮ್ಮೆ ರಾಮಾಯಣ ಸಿನಿಮಾದಲ್ಲಿ ನಟಿಸಲು ಮುಂದಾಗಿದ್ದಾರೆ. ಅದು ಮಾತ್ರವೇ ಅಲ್ಲದೆ, ತೆಲುಗಿನ ‘ಬೇಡರ ಕಣ್ಣಪ್ಪ’ ಸಿನಿಮಾದಲ್ಲಿ ಶಿವನ ಪಾತ್ರದಲ್ಲಿಯೂ ಪ್ರಭಾಸ್ ನಟಿಸುತ್ತಿದ್ದಾರೆ. ಇದರ ಬಗ್ಗೆಯೂ ಸಹ ಕೆಲವು ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು. ಇದರ ಹೊರತಾಗಿ ಪ್ರಭಾಸ್, ‘ರಾಜಾ ಡಿಲಕ್ಸ್’ ಹೆಸರಿನ ಹಾರರ್ ಸಿನಿಮಾದಲ್ಲಿ‌ ನಟಿಸುತ್ತಿದ್ದಾರೆ. ಅದರ ಬಳಿಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್’ ಸಿನಿಮಾದಲ್ಲಿ‌ನಟಿಸುತ್ತಿದ್ದಾರೆ. ಈಗಾಗಲೇ ರಘು ಹನುಪುಡಿ ನಿರ್ದೇಶನದ ಹೊಸ ಸಿನಿಮಾದ ಮುಹೂರ್ತ ಆಗಿದ್ದು, ಚಿತ್ರೀಕರಣ ಶೀಘ್ರವೇ ಪ್ರಾರಂಭ ಆಗಲಿದೆ. ‘ಸಲಾರ್ 2’ ಹಾಗೂ ‘ಕಲ್ಕಿ 2’ ಸಿನಿಮಾಗಳು ಸಹ ಪ್ರಾರಂಭ ಆಗಲಿಕ್ಕಿವೆ. ಒಟ್ಟಾರೆ ಪ್ರಭಾಸ್ ಮುಂದಿನ ಐದು ವರ್ಷಗಳಿಗೆ ಸಖತ್ ಬ್ಯುಸಿಯಾಗಿದ್ದಾರೆ.

LEAVE A REPLY

Please enter your comment!
Please enter your name here