Prajwal Devaraj
ನಟ ಪ್ರಜ್ವಲ್ ದೇವರಾಜ್ ಅವರ ಹುಟ್ಟುಹಬ್ಬ ಇಂದು (ಜುಲೈ 04) ಆದರೆ ಪ್ರಜ್ವಲ್ ವೈಯಕ್ತಿಕ ಕಾರಣಗಳಿಂದ ಇಂದು ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿಲ್ಲ. ಆದರೆ ಅವರ ಸಿನಿಮಾ ತಂಡ ಅವರಿಗಾಗಿ ವಿಶೇಷ ಉಡುಗೊರೆ ನೀಡಿದೆ. ಪ್ರಜ್ವಲ್ ‘ಕರಾವಳಿ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾ ತಮ್ಮ ಪೋಸ್ಟರ್ ಮತ್ತು ಟೀಸರ್ ಮೂಲಕವೇ ಭಾರಿ ಗಮನ ಸೆಳೆದಿದೆ. ಇದೀಗ ಪ್ರಜ್ವಲ್ ಹುಟ್ಟುಹಬ್ಬದಂದು ಸಹ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿದ್ದು, ಅಭಿಮಾನಿಗಳಲ್ಲಿ ಕುತೂಹಲ ಉಂಟು ಮಾಡಿದೆ.
‘ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾ ನಿರ್ದೇಶಕ ಗುರುದತ್ ಗಾಣಿಗ ‘ಕರಾವಳಿ’ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಈಗಾಗಲೇ ಫಸ್ಟ್ ಲುಕ್ ಮತ್ತು ಪೋಸ್ಟರ್ ಮೂಲಕ ಬಾರಿ ಕುತೂಹಲ ಮೂಡಿಸಿದೆ. ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬದ ಪ್ರಯುಕ್ತ ಬಂದಿರುವ ಹೊಸ ಲುಕ್ ‘ಕರಾವಳಿ’ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚು ಮಾಡಿದೆ. ಹೊಸದಾಗಿ ಬಿಡುಗಡೆ ಆಗಿರುವ ಪೋಸ್ಟರ್ ಅಂತೂ ಸಿನಿಮಾ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
https://samasthanews.com/darshan-thoogudeeps-judicial-custody-ending-on-july-04/
‘ಕರಾವಳಿ’ ಸಿನಿಮಾದಲ್ಲಿ ಭಿನ್ನ ಪಾತ್ರದಲ್ಲಿ ಪ್ರಜ್ವಲ್ ನಟಿಸುತ್ತಿದ್ದಾರೆ ಎಂಬುದು ಈ ಹಿಂದಿನ ಪೋಸ್ಟರ್, ಟೀಸರ್ನಿಂದಲೇ ತಿಳಿದು ಬಂದಿದೆ. ಈಗ ಬಿಡುಗಡೆ ಆಗಿರುವ ಪೋಸ್ಟರ್ನಿಂದ ಪ್ರಜ್ವಲ್ ತ್ರಿಪಾತ್ರದಲ್ಲಿ ನಟಿಸುತ್ತಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ. ಯಕ್ಷಗಾನ ಕಂಬಳ, ಮಹಿಷಾಸುರ ಹೀಗೆ ಬೇರೆ ಬೇರೆ ವೇಷಗಳಲ್ಲಿ ಪ್ರಜ್ವಲ್ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಈ ಸಿನಿಮಾದಲ್ಲಿ ಪ್ರಜ್ವಲ್ ಯಕ್ಷಗಾನ ಕಲಾವಿದನಾ ಅಥವಾ ಕಂಬಳ ಕೊಡಿಸುವವನಾ? ಎಂಬ ಸಹಜವಾಗಿಯೇ ಮೂಡಿದೆ.
‘ಕರಾವಳಿ’ ಸಿನಿಮಾದ 60 ರಷ್ಟು ಶೂಟಿಂಗ್ ಮುಗಿಸಿದೆ. ನಾಯಕಿಯಾಗಿ ನಟಿ ಸಂಪದಾ ಕಾಣಿಸಿಕೊಂಡಿದ್ದು ಅವರದ್ದೂ ಸಹ ಭಿನ್ನವಾದ ಪಾತ್ರ. ಕರಾವಳಿ ಭಾಗದಲ್ಲಿಯೇ ಸಿನಿಮಾದ ಬಹುತೇಕ ಚಿತ್ರೀಕರಣ ನಡೆದಿದೆ.ಗಾಣಿಗ ಫಿಲ್ಮ್ಸಂ ಹಾಗೂ ವಿಕೆ ಫಿಲ್ಮಂ ಅಸೋಸಿಯೇಷನ್ ಜಂಟಿಯಾಗಿ ಸಿನಿಮಾಕ್ಕೆ ಬಂಡವಾಳ ಹೂಡಿವೆ. ‘ಕರಾವಳಿ’ ಸಿನಿಮಾವು ಮನುಷ್ಯ ಹಾಗೂ ಪ್ರಾಣಿಗಳ ನಡುವೆ ನಡೆಯುವ ಸಂಘರ್ಷದ ಕಥೆ ಒಳಗೊಂಡಿದೆ. ಸಚಿನ್ ಬಸ್ರೂರು ಈ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ.