Site icon Samastha News

Gautam Adani: ಭಾರತೀಯ ಉದ್ಯಮಿ ಅದಾನಿ ವಿರುದ್ಧ ವಿದೇಶದಲ್ಲಿ‌ ತೀವ್ರ ಪ್ರತಿಭಟನೆ

Gautam Adani

Protest against Gautam Adani in Kenya

Gautam Adani

ಭಾರತದ‌ ಅತ್ಯಂತ ಶ್ರೀಮಂತ ಹಾಗೂ ಯಶಸ್ವಿ ಉದ್ಯಮಿ ಗೌತಮ್ ಅದಾನಿ. ಇವರು ಭಾರತದಲ್ಲಿ ಮಾತ್ರವೇ ಅಲ್ಲದೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಉದ್ಯಮ ಹೊಂದಿದ್ದಾರೆ‌‌. ಯಶಸ್ವಿ ಉದ್ಯಮಿ ಆಗಿರುವ ಜೊತೆಗೆ ಅಗಾಗ್ಗೆ ಕೆಲ‌ ವಿವಾದಗಳಿಗೂ ಗುರಿ ಆಗುವುದುಂಟು. ಭಾರತವೂ ಸೇರಿದಂತೆ,‌ ಇವರ ಆಕ್ರಮಣಕಾರಿ ಉದ್ಯಮ ನೀತಿಯ ವಿರುದ್ಧ ಹಲವೆಡೆ ಪ್ರತಿಭಟನೆಗಳು ನಡೆದಿವೆ. ಇದೀಗ ವಿದೇಶದಲ್ಲೂ ಸಹ ಅದಾನಿ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ.

ಆಫ್ರಿಕಾ ದೇಶವಾದ ಕೀನ್ಯಾನಲ್ಲಿ ಅದಾನಿ‌ ವಿರುದ್ಧ ಅಲ್ಲಿನ ಜನ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಕೀನ್ಯಾದ ರಾಜಧಾನಿ ನೈರೋಬಿಯ ವಿಮಾನ ನಿಲ್ದಾಣವನ್ನು ಅದಾನಿ ವಶಕ್ಕೆ ತೆಗೆದುಕೊಂಡಿದ್ದಾರೆ. ಇದು ಸ್ಥಳೀಯರ ಹಾಗೂ ಏರ್ ಪೋರ್ಟ್ ಸಿಬ್ಬಂದಿಯ ಆಕ್ರೋಶಕ್ಕೆ ಕಾರಣವಾಗಿದೆ. ಏವಿಯೇಷನ್ ಸಿಬ್ಬಂದಿ, ಅದಾನಿ ವಿರುದ್ಧ ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಹಿಂಸಾಚಾರವೂ ವರದಿ ಆಗಿದೆ. ಅದಾನಿ ವಿರುದ್ಧದ ಈ ಪ್ರತಿಭಟನೆ, ಕೀನ್ಯಾದ ಜನರಲ್ಲಿ ಭಾರತ ವಿರೋಧಿ ಭಾವ ಮೂಡಿಸಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಶ್ರೀಲಂಕಾದಲ್ಲಿ ಸಹ ಅದಾನಿ ಗ್ರೂಪ್ ನ ಪವರ್ ಪ್ಲ್ಯಾಂಟ್ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಮನ್ನಾರ್ ಜಿಲ್ಲೆಯಲ್ಲಿ ಅದಾನಿ ಗ್ರೂಪ್ ರಿನೀವೆಬಲ್ ಎನರ್ಜಿ ಪ್ರಾಜೆಕ್ಟ್ ಗನ್ನು ಮಾಡುತ್ತಿದ್ದು ಇದಕ್ಕೆ ಸ್ಥಳೀಯರ ವಿರೋಧ ವ್ಯಕ್ತವಾಗಿದೆ. ಬಾಂಗ್ಲಾದೇಶದಲ್ಲಿ ಈಗ ಬಂದಿರುವ ಹೊಸ ಸರ್ಕಾರದೊಂದಿಗೂ ಅದಾನಿ ಸಮೂಹ ಕೆಲ ಒಪ್ಪಂದಗಳಿಗೆ ಸಹಿ ಹಾಕಿದೆ ಎನ್ನಲಾಗುತ್ತಿದೆ.

Jio Finance: ಮೊಬೈಲ್ ನೆಟ್ ವರ್ಕ್, ಒಟಿಟಿ ಆಯ್ತು ಈಗ ಫೋನ್ ಪೆ, ಪೇಟಿಎಂಗೆ ಠಕ್ಕರ್‌ ಕೊಡಲಿದೆ ಜಿಯೋ

ಅದಾನಿಯ ಕೆಲ ಉದ್ಯಮಗಳಿಗೆ ಭಾರತದಲ್ಲಿಯೂ ವಿರೋಧ ವ್ಯಕ್ತವಾಗುತ್ತಲೆ ಇರುತ್ತದೆ. ಮಂಗಳೂರು ವಿಮಾನ ನಿಲ್ದಾಣವನ್ನು ಅದಾನಿ‌ ತೆಕ್ಕೆಗೆ ಕೊಟ್ಟಾಗ ವಿರೋಧ ವ್ಯಕ್ತವಾಗಿತ್ತು. ಅದಾನಿ ಪೋರ್ಟ್ ಉದ್ಯಮಕ್ಕೆ ಸಂಬಂಧಿಸಿದಂತೆಯೂ ಕೆಲ ಟೀಕೆ ವ್ಯಕ್ತವಾಗಿತ್ತು. ವಿಪಕ್ಷ ನಾಯಕ ರಾಹುಲ್ ಗಾಂಧಿಯಂತೂ ಅದಾನಿ‌ ವಿರುದ್ಧ ಸತತ ಟೀಕಾ ಪ್ರಹಾರ ಮಾಡುತ್ತಲೇ ಇರುತ್ತಾರೆ.

Exit mobile version