Rakul Preet Singh: ಹೇಳದೆ ಕೇಳದೆ ಪ್ರಭಾಸ್ ಸಿನಿಮಾದಿಂದ ತೆಗೆದರು: ಖ್ಯಾತ ನಟಿ ಆರೋಪ

0
111
Rakul Preet Singh

Rakul Preet Singh

ಕನ್ನಡದ ‘ಗಿಲ್ಲಿ’ ಸಿನಿಮಾ ಮೂಲಕ‌ ನಟನೆಗೆ ಎಂಟ್ರಿ ನೀಡಿ ಬಳಿಕ ತೆಲುಗು, ತಮಿಳು, ಹಿಂದಿಯಲ್ಲಿ ಬೇಡಿಕೆಯ ನಟಿಯಾಗಿ ಬೆಳೆದ ನಟಿ ರಕುಲ್ ಪ್ರೀತ್ ಸಿಂಗ್. ದೊಡ್ಡ ಸ್ಟಾರ್ ನಟರ ಜೊತೆ ನಟಿಸಿ ಯಶಸ್ವಿ ನಟಿ ಎನಿಸಿಕೊಂಡಿದ್ದರೂ ಸಹ ಹಲವು ಸಿನಿಮಾಗಳಿಂದ ಈ ನಟಿಯನ್ನು ತೆಗೆದು ಹಾಕಲಾಗಿತ್ತಂತೆ. ಅದೂ ಆಕೆಗೆ ಹೇಳದೆ, ಕೇಳದೆ.

ರಕುಲ್ ಪ್ರೀತ್ ಸಿಂಗ್ ಕನ್ನಡದ ‘ಗಿಲ್ಲಿ’ ಸಿನಿಮಾದಲ್ಲಿ ನಟಿಸಿದ ಬಳಿಕ ಎರಡು ವರ್ಷ ಖಾಲಿ ಇದ್ದ ರಕುಲ್‌ ಆ ಬಳಿಕ ತೆಲುಗಿನ ‘ಕೆರಟಮ್’ ಸಿನಿಮಾದಲ್ಲಿ ನಟಿಸಿದರು. ಅದರ ಬಳಿಕ ತಮಿಳಿನ ಎರಡು ಸಣ್ಣ ಸಿನಿಮಾಗಳಲ್ಲಿ ನಟಿಸಿದರು. ಆದರೆ ರಕುಲ್’ಗೆ ಜನಪ್ರಿಯತೆ ತಂದುಕೊಟ್ಟಿದ್ದು ತೆಲುಗಿನ ‘ವೆಂಕಟಾದ್ರಿ ಎಕ್ಸ್’ಪ್ರೆಸ್’ ಸಿನಿಮಾ. ಆದರೆ ಆ ಸಿನಿಮಾಕ್ಕೆ ಮುನ್ನ ಪ್ರಭಾಸ್ ಸಿನಿಮಾಕ್ಕೆ ರಕುಲ್ ಆಯ್ಕೆ ಆಗಿದ್ದರು.

ಪ್ರಭಾಸ್ ಸಿನಿಮಾವೇ ರಕುಲ್’ಗೆ ಮೊದಲ ಸಿನಿಮಾ ಆಗಿತ್ತಂತೆ ಸಿನಿಮಾದ ಚಿತ್ರೀಕರಣವೂ ಆರಂಭವಾಗಿತ್ತು, ನಾಲ್ಕು ದಿನಗಳ ಚಿತ್ರೀಕರಣ ಆದ ಮೇಲೆ ಶೆಡ್ಯೂಲ್ ಮುಗಿಸಿಕೊಂಡು ರಕುಲ್, ದೆಹಲಿಗೆ ತೆರಳಿದರಂತೆ. ಆದರೆ ರಕುಲ್’ಗೆ ಮತ್ತೆ ಚಿತ್ರತಂಡದಿಂದ ಕರೆಯೇ ಬರಲಿಲ್ಲವಂತೆ. ಆ ನಂತರ ಗೊತ್ತಾಯ್ತಂತೆ, ರಕುಲ್ ಅನ್ನು ಆ ಸಿನಿಮಾದಿಂದ ತೆಗೆದು ಹಾಕಲಾಗಿದೆ ಎಂದು. ದೊಡ್ಡ ಬಜಟ್ ಸಿನಿಮಾ ಆದ್ದರಿಂದ ಹೊಸ ನಟಿಯ ಬದಲಿಗೆ ಅನುಭವಿ ನಟಿಯನ್ನು ಹಾಕಿಕೊಳ್ಳೊಣ ಎಂದುಕೊಂಡು ಬೇರೆ ನಟಿಯನ್ನು ಆಯ್ಕೆ ಮಾಡಿತಂತೆ ಚಿತ್ರತಂಡ.

ಅದು ಮಾತ್ರವೇ ಅಲ್ಲದೆ, ತೆಲುಗಿನ ಇನ್ನೂ ಒಂದು ಸಿನಿಮಾದಲ್ಲಿ ಇಂಥಹುದೇ ಅನುಭವ ರಕುಲ್‌ ಪ್ರೀತ್ ಸಿಂಗ್’ಗೆ ಆಯ್ತಂತೆ. ಆ ನಂತರ ರಕುಲ್ ತೆಲುಗಿನ ಬೇಡಿಕೆಯ ನಟಿಯಾಗಿ ಬೆಳೆದರು. ತಮಿಳಿನಲ್ಲೂ ಸ್ಟಾರ್ ನಟಿ ಎನಿಸಿಕೊಂಡರು. ಅಸಲಿಗೆ ಹಿಂದಿಯ ಬ್ಲಾಕ್ ಬಸ್ಟರ್ ಸಿನಿಮಾ ‘ಧೋನಿ’ ನಲ್ಲಿಯೂ ರಕುಲ್ ನಾಯಕಿಯಾಗಿ ನಟಿಸಬೇಕಿತ್ತು. ಆದರೆ ಅದೂ ಸಹ ಮಿಸ್ ಆಯ್ತಂತೆ.

Tomy: ‘ಟಾಮಿ’ ನಾಯಿಯ ಹೆಸರೊ, ನಾಯಕನ ಹೆಸರೊ?

‘ಧೋನಿ’ ಸಿನಿಮಾದ ಸ್ಕ್ರಿಪ್ಟ್ ರೀಡಿಂಗ್ ನಡೆದಿತ್ತು, ಮೇಕಪ್‌ಟೆಸ್ಟ್, ಕ್ಯಾಮೆರಾ ಟೆಸ್ಟ್ ಗಳು ಸಹ ಆಗಿತ್ತು, ಆದರೆ ಅವರು ಚಿತ್ರೀಕರಣ‌ವನ್ನು ಬೇಗನೆ ಪ್ರಾರಂಭ ಮಾಡಿದರು. ಆದರೆ ಅದೇ ಸಮಯದಲ್ಲಿ ನಾನು ರಾಮ್ ಚರಣ್ ಹಾಗೂ ಜೂ ಎನ್’ಟಿಆರ್ ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದೆ ಅವರಿಗೆ ಸಿನಿಮಾ ಬೇಗನೆ ಬಿಡುಗಡೆ ಮಾಡಬೇಕಿತ್ತು, ಹಾಗಾಗಿ ‘ಧೋನಿ’ ಸಿನಿಮಾದಂಥಹಾ ಒಳ್ಳೆಯ ಸಿನಿಮಾದಲ್ಲಿ ನಟಿಸಲಾಗಲಿಲ್ಲ’ ಎಂದಿದ್ದಾರೆ ರಕುಲ್ ಪ್ರೀತ್ ಸಿಂಗ್.

LEAVE A REPLY

Please enter your comment!
Please enter your name here