Nivin Pauly: ಅತ್ಯಾಚಾರ ಆರೋಪಕ್ಕೆ ಸಿಲುಕಿದ ‘ಪ್ರೇಮಂ’ ನಟ ನಿವಿನ್ ಪೌಲಿ

0
106
Nivin Pauly

Nivin Pauly

‘ಪ್ರೇಮಂ’, ‘ಬೆಂಗಳೂರು ಡೇಸ್’ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ಮಲಯಾಳಂ ನಟ ನಿವಿನ್ ಪೌಲಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಈಗಾಗಲೇ ಹೇಮಾ ಸಮಿತಿ ವರದಿಯಿಂದ ತತ್ತರಿಸಿರುವ ಮಲಯಾಳಂ ಚಿತ್ರರಂಗಕ್ಕೆ ಈ ಮೂಲಕ ದೊಡ್ಡ ಆಘಾತವೇ ಎದುರಾಗಿದೆ.

ಕೇರಳದ ಎರ್ನಾಕುಲಂ ಜಿಲ್ಲೆಗೆ ಸೇರಿದ ಯುವತಿಯೊಬ್ಬಾಕೆ ನಿವಿನ್ ಪೌಲಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಸಿನಿಮಾದಲ್ಲಿ ಪಾತ್ರ ಕೊಡಿಸುವುದಾಗಿ ಹೇಳಿ ಕಳೆದ ವರ್ಷ ದುಬೈನ ಹೋಟೆಲ್ ಒಂದರಲ್ಲಿ ನಿವಿನ್ ಪೌಲಿ ತಮ್ಮ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದಾಗಿ ಯುವತಿ ದೂರಿನಲ್ಲಿ ಹೇಳಿದ್ದಾರೆ.

ಯುವತಿ, ಕೇವಲ ನಿವಿನ್ ಪೌಲಿ ಮೇಲೆ ಮಾತ್ರವೇ ಅಲ್ಲದೆ ಇತರೆ ಐದು ವ್ಯಕ್ತಿಗಳ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದಲ್ಲಿ ಆರನೇ ಆರೋಪಿಯಾಗಿದ್ದಾರೆ ನಿವಿನ್ ಪೌಲಿ. ಮಲಯಾಳಂ ಸಿನಿಮಾ ನಿರ್ಮಾಪಕರೊಬ್ಬರ ವಿರುದ್ಧವೂ ಸಹ ಆ ಯುವತಿ ದೂರು ದಾಖಲಿಸಿದ್ದು, ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದು, ಪ್ರಕರಣದ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಿದ್ದಾರೆ.

ಇದರ ನಡುವೆ ನಿವಿನ್ ಪೌಲಿ, ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದು, ‘ನಾನು ಯುವತಿಯೊಬ್ಬರ ಮೇಲೆ ದೌರ್ಜನ್ಯ ಎಸಗಿದ್ದೇನೆ ಎಂಬ ಸುಳ್ಳು ಸುದ್ದಿ ನನ್ನ ಗಮನಕ್ಕೆ ಬಂದಿದೆ. ನನ್ನ ಮೇಲೆ ಮಾಡಲಾಗಿರುವ ಆರೋಪ ಸಂಪೂರ್ಣ ಸುಳ್ಳು ಎಂಬುದನ್ನು ನಾನು ಸ್ಪಷ್ಟಪಡಿಸುತ್ತೇನೆ. ನನ್ನ ಮೇಲೆ ಮಾಡಲಾಗಿರುವ ಈ ಆರೋಪ ಸುಳ್ಳು ಎಂದು ಸಾಬೀತು ಮಾಡುವವರೆಗೆ ನಾನು ವಿರಮಿಸುವುದಿಲ್ಲ. ಮಾತ್ರವಲ್ಲದೆ ಈ ಪ್ರಕರಣದ ತಪ್ಪಿತಸ್ಥರನ್ನು ಬೆಳಕಿಗೆ ತಂದೇ ತರುತ್ತೇನೆ. ನನ್ನ ಪರವಾಗಿ ನಿಂತಿರುವ ಎಲ್ಲರಿಗೂ ಧನ್ಯವಾದ ಇನ್ನು ಮುಂದೆ ಈ ಪ್ರಕರಣವನ್ನು ನನ್ನ ಕಾನೂನು ತಂಡ ನೋಡಿಕೊಳ್ಳಲಿದೆ’ ಎಂದಿದ್ದಾರೆ.

Hurun Report: ದೀಪಿಕಾ, ಅಲಿಯಾ ಅಲ್ಲ, ಭಾರತದ ಶ್ರೀಮಂತ ನಟಿ ಈಕೆ, ಕನ್ನಡಿಗರಿಗೆ ಚೆನ್ನಾಗಿಯೇ ಪರಿಚಯ

ಹೇಮಾ ಸಮಿತಿ ವರದಿ ಹೊರಬಿದ್ದ ಬಳಿಕ ಮಲಯಾಳಂ ಚಿತ್ರರಂಗದಲ್ಲಿ ಅಬ್ಬರದ ಅಲೆಗಳೆದ್ದಿವೆ. ಕೆಲವು ಹಿರಿಯ ನಟ, ನಿರ್ದೇಶಕ, ನಿರ್ಮಾಪಕರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಗಳು ಕೇಳಿ ಬಂದಿವೆ‌. ನಟ, ಶಾಸಕ ಮುಖೇಶ್, ಹಿರಿಯ ನಟ ಜಯಸೂರ್ಯ, ಹಿರಿಯ ನಿರ್ದೇಶಕ ಸಿದ್ಧಿಖಿ, ನಿರ್ಮಾಪಕ ಬಾಬುರಾಜ್ ಅವರುಗಳ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದ್ದು, ದೂರುಗಳು ಸಹ ದಾಖಲಾಗಿ ತನಿಖೆ ನಡೆಯುತ್ತಿದೆ.

LEAVE A REPLY

Please enter your comment!
Please enter your name here