Site icon Samastha News

Ratan Tata: ಅಮಿತಾಬ್ ಬಚ್ಚನ್ ಬಳಿ ಸಾಲ ಮಾಡಿದ್ದ ರತನ್ ಟಾಟಾ

Ratan Tata

Ratan Tata

ರಯನ್ ಟಾಟಾ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ದೇಶದ ನಂಬರ್ 1 ಸಂಸ್ಥೆಯಾದ ಟಾಟಾ ಇಂಡಸ್ಟ್ರಿಯನ್ನು ಗಟ್ಟಿಯಾಗಿ ಬೆಳೆಸಿದ ಶ್ರೇಯ ಅವರದ್ದು. ಟಾಟಾ ಅವರ ಆಸ್ತಿ ಸಾವಿರಾರು ಕೋಟಿಗಳಿತ್ತು. ಪ್ರತಿ ವರ್ಷ ಅವರು ಮಾಡುತ್ತಿದ್ದ ದಾನದ ಮೊತ್ತವೇ ನೂರಾರು ಕೋಟಿ ಆಗಿದೆ. ಇಂಥಹಾ ಶ್ರೀಮಂತ ವ್ಯಕ್ತಿ ಅಮಿತಾಬ್ ಬಚ್ಚನ್ ಅವರ ಬಳಿ ಸಾಲ ಮಾಡಿದ್ದರಂತೆ ಈ ವಿಷಯವನ್ನು ಸ್ವತಃ ಅಮಿತಾಬ್ ಬಚ್ಚನ್ ಹೇಳಿಕೊಂಡಿದ್ದಾರೆ.

ಕೌನ್ ಬನೇಗಾ ಕರೋಡ್ ಪತಿ ಶೋ ನಲ್ಲಿ ಇತ್ತೀಚೆಗೆ ಬೊಮನ್ ಇರಾನಿ ಮತ್ತು ಫರಾ ಖಾನ್ ಅತಿಥಿಗಳಾಗಿ ಆಗಮಿಸಿದ್ದರು. ಈ ವೇಳೆ ಮಾತಿನ ಮಧ್ಯೆ ರತನ್ ಟಾಟಾ ವಿಷಯ ಪ್ರಸ್ತಾಪ ಆಯ್ತು. ಆಗ ಹಳೆಯ ನೆನಪಿಗೆ ಜಾರಿದ ಅಮಿತಾಬ್ ಬಚ್ಚನ್, ರತನ್ ಟಾಟಾ ತಮ್ಮ ಬಳಿಯಿಂದ ಹಣ ಸಾಲ ಪಡೆದಿದ್ದ ವಿಷಯ ಹೇಳಿದರು.

ಒಮ್ಮೆ ನಾನು ಹಾಗೂ ರತನ್ ಟಾಟಾ ಒಂದೇ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದೆವು. ವಿಮಾನ‌ದಲ್ಲಿ ಕೆಲ ಕಾಲ ಇಬ್ಬರೂ ಮಾತನಾಡಿದೆವು, ನಿಲ್ದಾಣ ಬಂದಾಗ ರತನ್ ಟಾಟಾ ಅವರನ್ನು ಕರೆದೊಯ್ಯಲು ಬಂದವರು ನಿಲ್ದಾಣದಲ್ಲಿ ಕಾಣಲಿಲ್ಲ. ಬಹುಷಃ ಅವರು ಹೊರಟು ಹೋಗಿದ್ದಿರಬೇಕು. ನಾನು ಅಲ್ಲೇ ವಿಮಾನ ನಿಲ್ದಾಣದ‌ ಗೇಟಿನ ಬಳಿ ನಿಂತಿದ್ದೆ. ಆಗ ನನ್ನ ಬಳಿ ಬಂದ ರತನ್ ಟಾಟಾ ಆಡಿದ ಮಾತು‌ ನನಗೆ ಆಶ್ಚರ್ಯ ತಂದು ಬಿಟ್ಟಿತು. ‘ಅಮಿತಾಬ್, ನನ್ನ ಬಳಿ ಫೋನ್ ಮಾಡಲು ಹಣ ಇಲ್ಲ, ನಿಮ್ಮಿಂದ ಸ್ವಲ್ಪ ಹಣ ಸಾಲ ಪಡೆಯಬಹುದೇ’ ಎಂದರು. ನಾನು ಕೂಡಲೆ ಅವರಿಗೆ ನನ್ನ ಬಳಿ ಇದ್ದ ಹಣ ಕೊಡಲು ಮುಂದಾದೆ, ಆದರೆ ಅವರು ಫೋನ್ ಮಾಡಲು ಬೇಕಾದಷ್ಟು ಹಣವನ್ನು ಮಾತ್ರವೇ ಪಡೆದುಕೊಂಡರು’ ಎಂದಿದ್ದಾರೆ ಬಚ್ಚನ್.

Mukesh Ambani: ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ತನ್ನ ನೌಕರರಿಗೆ ದೀಪಾವಳಿಗೆ ಕೊಟ್ಟ ಉಡುಗೊರೆ ಏನು?

ಅಮಿತಾಬ್ ಬಚ್ಚನ್ ಮತ್ತು ರತನ್ ಟಾಟಾ ಹಲವು ದಶಗಳ ಕಾಲ ಆತ್ಮೀಯರಾಗಿದ್ದರು. ಅಂದಹಾಗೆ ರತನ್ ಟಾಟಾ ನಿರ್ಮಾಣ ಏಕೈಕ ಸಿನಿಮಾ ‘ಐತಬಾರ್’ ನಲ್ಲಿ ಅಮಿತಾಬ್ ಬಚ್ಚನ್ ಸಹ ನಟಿಸಿದ್ದಾರೆ. ಆ ಸಿನಿಮಾನಲ್ಲಿ ಜಾನ್ ಅಬ್ರಹಾಂ ಹಾಗೂ ಬಿಪಾಷ ಸಹ ಇದ್ದರು. ಸಿನಿಮಾ ಫ್ಲಾಪ್ ಆಗಿತ್ತು.

Exit mobile version