Mukesh Ambani
ಮುಖೇಶ್ ಅಂಬಾನಿ ಭಾರತದ ನಂಬರ್ 1 ಹಾಗೂ ವಿಶ್ವದ ನಂಬರ್ ಒಂಬತ್ತನೇ ಶ್ರೀಮಂತ ವ್ಯಕ್ತಿ ಆಗಿರುವ ಮುಖೇಶ್ ಅಂಬಾನಿ ಲಕ್ಷಾಂತರ ಕೋಟಿಗಳ ಒಡೆಯ. ಮುಖೇಶ್ ಅಂಬಾನಿ ಪ್ರತಿ ದಿನ ಒಂದು ಲಕ್ಷ ರೂಪಾಯಿ ಖರ್ಚು ಮಾಡಿದರೂ ಸಹ ಅವರ ಬಳಿ ಇರುವ ಎಲ್ಲ ಹಣ ಖರ್ಚಾಗಲು ನೂರು ವರ್ಷಕ್ಕೂ ಹೆಚ್ಚು ಸಮಯ ಬೇಕು. ಕೆಲ ತಿಂಗಳ ಹಿಂದೆ ಕೂಡ ತನ್ನ ಮಗನ ಮದುವೆಗೆ ಸಾವಿರಾರು ಕೋಟಿ ರೂಪಾಯಿ ಹಣವನ್ನು ಮುಖೇಶ್ ಅಂಬಾನಿ ಖರ್ಚು ಮಾಡಿದ್ದರು. ಇದೀಗ ದೀಪಾವಳಿ ಬಂದಿದ್ದು ಭಾರತದ ಬಹುತೇಕ ಕಚೇರಿಗಳಲ್ಲಿ ಉದ್ಯೋಗಿಗಳಿಗೆ ಕಂಪೆನಿ ಮಾಲೀಕರು ಉಡುಗೊರೆ ನೀಡುತ್ತಿದ್ದಾರೆ. ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ತನ್ನ ಕಂಪೆನಿ ನೌಕರರಿಗೆ ದೀಪಾವಳಿಗೆ ಏನು ಉಡುಗೊರೆ ನೀಡಿದ್ದಾರೆ?
ಮುಖೇಶ್ ಅಂಬಾನಿ ರಿಲಯನ್ಸ್, ಜಿಯೋ ಸಂಸ್ಥೆಗಳ ಮಾಲೀಕರಾಗಿದ್ದಾರೆ. ಈ ಎರಡು ಸಂಸ್ಥೆಗಳ ಅಡಿಯಲ್ಲಿ ಸುಮಾರು 100 ಕ್ಕೂ ಹೆಚ್ಚು ಸಂಸ್ಥೆಗಳು ಕೆಲಸ ಮಾಡುತ್ತಿವೆ. ಲಕ್ಷಾಂತರ ಸಂಖ್ಯೆಯ ನೌಕರರು ರಿಲಯನ್ಸ್, ಜಿಯೋ ಮತ್ತು ಅದರ ಅಂಗಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಎಲ್ಲ ನೌಕರರಿಗೂ ದೀಪಾವಳಿಗೆ ಉಡುಗೊರೆ ನೀಡಲಾಗಿದೆ.
ಜಿಯೋನಲ್ಲಿ ಕೆಲಸ ಮಾಡುವ ಯುವತಿಯೊಬ್ಬರು ತಮಗೆ ಸಿಕ್ಕ ದೀಪಾವಳಿ ಉಡುಗೊರೆಯ ವಿಡಿಯೋ ಅನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಜಿಯೋನಲ್ಲಿ ಕೆಲಸ ಮಾಡುವವರಿಗೆ ಒಂದು ದುಂಡನೆಯ ಸುಂದರವಾದ ಡಬ್ಬಾನಲ್ಲಿ ಸುಮಾರು 150 ಗ್ರಾಂ ಬದಾಮಿ, ಗೋಡಂಬಿ ಮತ್ತು ದ್ರಾಕ್ಷಿಗಳನ್ನು ದೀಪಾವಳಿ ಉಡುಗೊರೆಯಾಗಿ ನೀಡಲಾಗಿದೆ. ಉಡುಗೊರೆಯ ಜೊತೆಗೆ ಒಂದು ಪತ್ರವೂ ಸಹ ಇದೆ. ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದ್ದು, ವಿಶ್ವದ ಟಾಪ್ 10 ಶ್ರೀಮಂತರಲ್ಲಿ ಒಬ್ಬರಾದ ಮುಖೇಶ್ ಅಂಬಾನಿ ತನ್ನ ನೌಕರರಿಗೆ ಇಷ್ಟು ಕಡಿಮೆ ಮೌಲ್ಯದ ಉಡುಗೊರೆ ನೀಡಿದ್ದಾರೆಯೇ ಎಂದು ಟೀಕೆ ಮಾಡಿದ್ದಾರೆ.
Yoga Teacher: ಯೋಗ ಶಿಕ್ಷಕಿಯ ಅರೆಬೆತ್ತಲೆ ಮಾಡಿ ಹೂತರು, ಆದರೂ ಎದ್ದು ಬಂದ ಯುವತಿ
ಇನ್ನು ಕೆಲವರು ಇದು ಉತ್ತಮವಾದ ಉಡುಗೊರೆಯೇ ಆಗಿದೆ. ಕೆಲವು ಕಂಪೆನಿಗಳಲ್ಲಿ ಇದನ್ನೂ ಸಹ ಕೊಡುವುದಿಲ್ಲ ಎಂದು ತಮ್ಮ ಕಂಪೆನಿಯ ಸ್ಥಿತಿಯನ್ನು ಹೇಳಿಕೊಂಡಿದ್ದಾರೆ. ಕೆಲವರು ತಾವೂ ಸಹ ರಿಲಯನ್ಸ್, ಜಿಯೋನಲ್ಲಿಯೇ ಕೆಲಸ ಮಾಡುತ್ತಿದ್ದು, ತಮಗೆ ಹಣ ಬೋನಸ್ ಆಗಿ ಸಿಕ್ಕಿದೆ ಎಂದು ಹೇಳಿಕೊಂಡಿದ್ದಾರೆ. ಅಂದಹಾಗೆ ನಿಮಗೆ ದೀಪಾವಳಿಗೆ ಯಾವ ಉಡುಗೊರೆ ಸಿಕ್ಕಿತು? ಕಮೆಂಟ್ ಮಾಡಿ.