RCB ಗೆ ಬಂದ ರಾಹುಲ್‌ದ್ರಾವಿಡ್, ಈ ಬಾರಿಯಾದರೂ ಕಪ್ ನಮ್ಮದಾಗುತ್ತ?

0
332
RCB approaches Rahul Dravid to be team's head coach
Rahul Dravid_RCB

RCB

RCB ಯ ಐಪಿಎಲ್ ಕಪ್ ಕನಸು ವರ್ಷಗಳಾದರೂ ನನಸಾಗಿಲ್ಲ. ಪ್ರತಿ ವರ್ಷವೂ ಈ ಸಲ ಕಪ್ ನಮ್ದೆ ಎನ್ನುತ್ತಾ ಅಭಿಮಾನಿಗಳು ಜೋಶ್ ನಲ್ಲಿ ಟೂರ್ನಿ ನೋಡಲು ಆರಂಭಿಸುತ್ತಾರೆ. ಆಟಗಾರರು ಸಹ ಸುಮಾರಾಗಿ ಆಡುತ್ತಾರಾದರೂ ಆದರೆ ಮುಖ್ಯವಾದ ಪಂದ್ಯಗಳಲ್ಲಿ ಮನೆ ಸೇರುತ್ತಾರೆ. ಆದರೆ‌  ಈ ಬಾರಿ ತಂಡದಲ್ಲಿ ಕೆಲ ಬದಲಾವಣೆ ಆಗಲಿದ್ದು, ಕನ್ನಡಿಗ ರಾಹುಲ್ ದ್ರಾವಿಡ್ ಬೆಂಗಳೂರಿಗೆ ಮರಳಲಿದ್ದಾರೆ.

ಹೌದು, RCB ತಂಡದ ಮೊದಲ ಕ್ಯಾಪ್ಟನ್ ರಾಹುಲ್‌ ದ್ರಾವಿಡ್ RCB ತಂಡಕ್ಕೆ ಮರಳುತ್ತಿದ್ದಾರೆ. ಆಟಗಾರರಾಗಿ ಅಲ್ಲ ಬದಲಿಗೆ ಕೋಚ್ ಆಗಿ. RCB ತಂಡದ ಮುಖ್ಯ ಕೋಚ್ ಆಗಿ ದ್ರಾವಿಡ್ ಅವರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಇದು ತಂಡದ ಮೇಲೆ ಸಾಕಷ್ಟು ಧನತ್ಮಕ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ. ಅಲ್ಲದೆ ಭಾರತ ತಂಡಕ್ಕೆ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟಿರುವ ದ್ರಾವಿಡ್, RCB ಗೆ ಕಪ್ ಗೆಲ್ಲಿಸಿಕೊಡುತ್ತಾರೆಂಬ ವಿಶ್ವಾಸ RCB ಮ್ಯಾನೇಜ್ ಮೆಂಟ್ ನದ್ದು.

ವಿಶ್ವಕಪ್ ಗೆದ್ದುಕೊಟ್ಟ ಧೋನಿಯ ಬ್ಯಾಟು ಹರಾಜು, ಮಾರಾಟವಾಗಿದ್ದು ಭಾರಿ ಮೊತ್ತಕ್ಕೆ

ಭಾರತ ಕ್ರಿಕೆಟ್ ತಂಡದ ಕೋಚ್ ಆಗಿದ್ದ ರಾಹುಲ್ ದ್ರಾವಿಡ್, ವಿಶ್ವಕಪ್ ಗೆಲುವಿನ ಬಳಿಕ ಆ ಸ್ಥಾನದಿಂದ ಕೆಳಗಿಳಿದಿದ್ದಾರೆ. ಹಾಗಾಗಿ ಕೆಲವು ಐಪಿಎಲ್ ತಂಡಗಳು ದ್ರಾವಿಡ್ ಅವರನ್ನು ತಂಡದ ಕೋಚ್ ಆಗುವಂತೆ ಕೇಳಿಕೊಂಡಿವೆ. ಡೆಲ್ಲಿ ಕ್ಯಾಪಿಟಲ್ಸ್, ಕೆಕೆಆರ್ ತಂಡಗಳು‌ ದ್ರಾವಿಡ್ ಅವರನ್ನು ಕೋಚ್ ಆಗುವಂತೆ ಕೇಳಿದ್ದು, RCB ಸಹ ದ್ರಾವಿಡ್ ಅವರನ್ನು ಕೋಚ್ ಆಗುವಂತೆ ಮನವಿ ಮಾಡಿದೆ. ಆದರೆ ದ್ರಾವಿಡ್ ಯಾವ ಮನವಿಯನ್ನೂ ಒಪ್ಪಿಕೊಂಡಿಲ್ಲ. ಆದರೆ RCB ತಂಡದ ಮನವಿಯನ್ನು ಒಪ್ಪಿಕೊಳ್ಳಬಹುದು ಎನ್ನಲಾಗುತ್ತಿದೆ.

ದ್ರಾವಿಡ್, RCB ತಂಡದ‌ಮೊಟ್ಟ ಮೊದಲ ಕ್ಯಾಪ್ಟನ್ ಆಗಿದ್ದರು. ಆದರೆ ಅವರ ನಾಯಕತ್ವದಲ್ಲಿ RCB ಅಷ್ಟೇನು ಚೆನ್ನಾಗಿ ಪ್ರದರ್ಶನ ನೀಡಿರಲಿಲ್ಲ. ಟೆಸ್ಟ್ ಆಡುವ ಆಟಗಾರರನ್ನು ಹಾಕಿಕೊಂಡು ದ್ರಾವಿಡ್ RCB ತಂಡ ಕಟ್ಟಿದ್ದರು, ಆದರೆ ಹೊಡಿ ಬಡಿ ಆಟದಲ್ಲಿ ಅವರ ಆಟಗಾರರು ಸೂಕ್ತ ಪ್ರದರ್ಶನ ನೀಡಲಾಗಲಿಲ್ಲ. ಆ ನಂತರ ರಾಜಸ್ಥಾನ ತಂಡ ಸೇರಿದ್ದ ದ್ರಾವಿಡ್ ಅಲ್ಲಿ ಅದ್ಭುತ ಪ್ರದರ್ಶನ ತೋರಿದ್ದರು. ಆದರೆ ಈಗ ದ್ರಾವಿಡ್ RCB ಗೆ ಕೋಚ್ ಆಗಲು ಒಪ್ಪಿದರೆ ಸುಮಾರು 15 ವರ್ಷದ ಬಳಿಕ ತಂಡಕ್ಕೆ‌ ಮರಳಿದಂತಾಗುತ್ತದೆ. ಬೆಂಗಳೂರಿನ ಲೋಕಲ್ ಬಾಯ್, ಬೆಂಗಳೂರು ತಂಡಕ್ಕೆ ಕೋಚ್ ಆಗುವುದನ್ನು RCB ಅಭಿಮಾನಿಗಳೂ ಸಹ ಮೆಚ್ಚಲಿದ್ದಾರೆ.

LEAVE A REPLY

Please enter your comment!
Please enter your name here