5G smart Phone
ಸ್ಮಾರ್ಟ್ಫೋನ್ಗಳ ಶಕ್ತಿ, ಸಾಮರ್ಥ್ಯ ಹೆಚ್ಚಾಗುತ್ತಲೇ ಸಾಗುತ್ತಿದೆ. ಅದಕ್ಕೆ ತಕ್ಕಂತೆ ಸ್ಮಾರ್ಟ್ಫೋನ್ಗಳ ಬೆಲೆಗಳು ಸಹ ಹೆಚ್ಚಾಗುತ್ತಲೇ ಸಾಗುತ್ತಿದೆ. ಅತ್ಯುತ್ತಮ ಎನ್ನಲಾಗುವ ಕೆಲವು ಸ್ಮಾರ್ಟ್ಫೋನ್ಗಳ ಬೆಲೆಗಳು ಎರಡು ಲಕ್ಷದ ಸನಿಹಕ್ಕೆ ಹೋಗಿ ಕೂತಿವೆ. ಆದರೆ ಇದೀಗ ಒಂದು ಪವರ್ಫುಲ್ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಬಂದಿದೆ. ಆದರೆ ಅತ್ಯಂತ ಕಡಿಮೆ ಬೆಲೆಗೆ. ಅದುವೇ ರಿಯಲ್ ಮೀ 12x 5ಜಿ ಫೋನ್. ಈ ಫೋನ್ ಶಕ್ತಿಯುತವಾಗಿದ್ದು, ಸಾಕಷ್ಟು ಹೊಸ ಫೀಚರ್ಗಳನ್ನು ಸಹ ಹೊಂದಿದೆ.
ರಿಯಲ್ ಮೀ 12x 5ಜಿ ಸ್ಮಾರ್ಟ್ಫೋನ್ ಭಾರತದಲ್ಲಿ ಮೂರು ಸ್ಟೋರೆಜ್ ಆಯ್ಕೆಗಳೊಟ್ಟಿಗೆ ಬಿಡುಗಡೆ ಆಗಿದೆ. 4GB RAM+128GB ಸ್ಟೋರೇಜ್, 6GB+128GB ಸ್ಟೋರೇಜ್ ಮತ್ತು 8GB+128GB ಸ್ಟೋರೇಜ್ ಆಯ್ಕೆಗಳಲ್ಲಿ ರಿಯಲ್ ಮೀ 12x 5ಜಿ ಲಭ್ಯವಿದೆ. ಇದರ ಬೆಲೆ ಅನುಕ್ರಮವಾಗಿ 11,999, 13,499 ಮತ್ತು 14,999 ರೂಪಾಯಿಗಳಾಗಿದೆ. ಏಪ್ರಿಲ್ 2 ರಿಂದ ಭಾರತದಲ್ಲಿ ಈ ಸ್ಮಾರ್ಟ್ಫೋನ್ ಮಾರಾಟ ಪ್ರಾರಂಭವಾಗಿದೆ. ಕಡಿಮೆ ಬೆಲೆಗೆ ಖರೀದಿ ಮಾಡಬಹುದಾದ ಒಳ್ಳೆಯ ಫೋನ್ ಇದಾಗಿದೆ.
ರಿಯಲ್ ಮಿ 12x 5G ಕಡಿಮೆ ಬೆಲೆಗೆ ಹಲವು ಹೊಸ ತಂತ್ರಜ್ಞಾನವನ್ನು ಒಳಗೊಂಡಿದೆ. ರಿಯಲ್ ಮಿ 12x 5G ಫೋನ್ ಏರ್ ಗೆಸ್ಚರ್ ಮತ್ತು ಡೈನಾಮಿಕ್ ಬಟನ್ ಒಳಗೊಂಡಿದೆ. ಈ ಫೋನ್ನ ಡೈನಾಮಿಕ್ ಬಟನ್ ಅನ್ನು ಬಳಕೆದಾರರು ತಮಗೆ ಬೇಕಾದಂತೆ ಕಸ್ಟಮೈಜ್ ಸಹ ಮಾಡಬಹುದಾಗಿದೆ. ಈ ಫೋನ್‌ನಲ್ಲಿ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳಿವೆ. ರೈನ್‌ವಾಟರ್ ಸ್ಮಾರ್ಟ್ ಟಚ್ ಅನ್ನು ಒಳಗೊಂಡಿದೆ. ನೀರು ಮತ್ತು ದೂಳನ್ನು ತಡೆಯುವ ಕಾರಣಕ್ಕೆ IP54 ರೇಟಿಂಗ್ ಅಳವಡಿಸಲಾಗಿದೆ.
Bengaluru: ದೇವರಿಂದಾಗಿ ಶುರುವಾಗಿದೆ ಐಶಾರಾಮಿ ಅಪಾರ್ಟ್‌ಮೆಂಟ್ ನಿವಾಸಿಗಳಲ್ಲಿ ಕಲಹ
ಈ ಫೋನ್ ಉತ್ತಮ ಡಿಸ್ಪ್ಲೇ ಹೊಂದಿದೆ. 6.72-ಇಂಚಿನ FHD+ LCD ಡಿಸ್ಪ್ಲೇ ಹೊಂದಿದ್ದು, ಈ ಡಿಸ್ಪ್ಲೇ 120Hz ರಿಫ್ರೆಶ್ ರೇಟ್, 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಮತ್ತು 950 nits ಪೀಕ್ ಬ್ರೈಟ್‌ನೆಸ್ ಅನ್ನು ಸಹ ಹೊಂದಿದೆ. ಜೊತೆಗೆ ಶಕ್ತಿಶಾಲಿ ಮತ್ತು ಅತ್ಯಾಧುನಿಕ ಪ್ರೊಸೆಸರ್ ಅನ್ನು ಒಳಗೊಂಡಿದೆ. 50 ಮೆಗಾಪಿಕ್ಸಲ್ ಕ್ಯಾಮೆರಾವನ್ನು ಈ ಸ್ಮಾರ್ಟ್ಫೋನ್ ಒಳಗೊಂಡಿದೆ. ಇದು ಎಐ ಕ್ಯಾಮೆರಾ ಆಗಿರುವುದು ವಿಶೇಷ. 2 ಮೆಗಾ ಪಿಕ್ಸಲ್ ಸೆಕೆಂಡರಿ ಕ್ಯಾಮೆರಾ ಒಳಗೊಂಡಿದೆ.
5000 ಮೆಗಾಹರ್ಟ್ಜ್ ಬ್ಯಾಟರಿಯನ್ನು ಈ ಫೋನ್ ಒಳಗೊಂಡಿದೆ. ಜೊತೆಗೆ 45 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಅನ್ನು ಸಹ ಒಳಗೊಂಡಿದೆ. ಆಂಡ್ರಾಯ್ಡ್ 14 ಅನ್ನು ಈ ಫೋನ್ ಒಳಗೊಂಡಿದೆ. ಫೋನ್ 76.1 ಮಿಲಿ ಮೀಟರ್ ಅಗಲವಿದೆ. 165.6 ಸೆಂಟಿ ಮೀಟರ್ ಉದ್ದವಿದೆ. 7.69 ಮಿಲಿ ಮೀಟರ್ ದಪ್ಪವಿದೆ. 188 ಗ್ರಾಂ ತೂಕವನ್ನು ಈ ಸ್ಮಾರ್ಟ್ಫೋನ್ ಹೊಂದಿದೆ.